ಬೆಂಗಳೂರು: ನಟನಾ ಶಾಲೆಯ ವಿದ್ಯಾರ್ಥಿನಿಯರ ಜತೆ ಮಲಗಿದ್ದೆ, ಅದು ನನ್ನ ತಪ್ಪು ಎಂದು ಅಮೆರಿಕನ್ ನಟ ಜೇಮ್ಸ್ ಫ್ರಾಂಕೊ ಒಪ್ಪಿಕೊಂಡಿದ್ದಾರೆ.
ದಿ ಜೇಸ್ ಕ್ಯಾಗಲ್ ಪಾಡ್‌ಕಾಸ್ಟ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲೈಂಗಿಕತೆಯ ಕುರಿತು ಅತಿಯಾದ ಆಸಕ್ತಿ ಹೊಂದಿದ್ದು, ಅದರಿಂದಾಗಿ ತಪ್ಪು ಎಸಗಿದೆ ಎಂದು ಹೇಳಿಕೊಂಡಿದ್ದಾರೆ.
ಜೇಮ್ಸ್ ಅವರ ವಿರುದ್ಧ ನಾಲ್ಕು ವರ್ಷದ ಹಿಂದೆ ನಟನಾ ಶಾಲೆಯ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ಆದರೆ ಆರೋಪ ನಿರಾಕರಿಸಿದ್ದ ಜೇಮ್ಸ್, ಕೊನೆಗೂ ಮೌನ ಮುರಿದಿದ್ದು, ಅಂದು ನಾನು ನಮ್ಮ ಸಂಬಂಧ ಒಪ್ಪಿತವಾಗಿರುವುದು ಎಂದುಕೊಂಡಿದ್ದೆ. ಹೀಗಾಗಿ ನಾನು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ನನಗೆ ಈಗ ಅದು ತಪ್ಪೆಂದು ಅರಿವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಜೇಮ್ಸ್ ವಿರುದ್ಧ ಪ್ರಕರಣ ದಾಖಲಿಸಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ $2.2 ಮಿಲಿಯನ್ ಪರಿಹಾರ ನೀಡಿ ಪ್ರಕರಣವನ್ನು ಇತ್ಯರ್ಥಪಡಿಸಲು ಅವರು ಮುಂದಾಗಿದ್ದರು.
ನಟನಾ ಶಾಲೆ ಸ್ಥಾಪಿಸಿದ್ದ ಜೇಮ್ಸ್, ಅಲ್ಲಿನ ವಿದ್ಯಾರ್ಥಿನಿಯರ ಜತೆ ಸಂಬಂಧ ಹೊಂದಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಅದಾದ ಬಳಿಕ ಶಾಲೆಯನ್ನು ಮುಚ್ಚಲಾಗಿತ್ತು.
ಬಲ್ಲೆ ಬಲ್ಲೇ ಮಾತ್ರವಲ್ಲ, ಬ್ಯಾಲೆ ಡ್ಯಾನ್ಸ್ಗೂ ರೆಡಿ: ವಾಣಿ ಕಪೂರ್
ನಟನಾ ಶಾಲೆಯನ್ನು ಆ ಉದ್ದೇಶಕ್ಕಾಗಿ ನಾನು ತೆರೆದಿರಲಿಲ್ಲ. ಆದರೆ ನನ್ನ ಮನಸ್ಥಿತಿಯಿಂದಾಗಿ ತಪ್ಪು ನಡೆದುಹೋಯಿತು ಎಂದು ಜೇಮ್ಸ್ ತಿಳಿಸಿದ್ದಾರೆ.