ಕ್ಯಾಚಗಳೇ ಮ್ಯಾಚ್ ಗಳನ್ನು ಗೆಲ್ಲಿಸುತ್ತವೆ ಎಂದ ಮಾತಿದೆ. ಅಂತದ್ದರಲ್ಲಿ ಕ್ಯಾಚ್ ಗಳನ್ನು ಬಿಟ್ಟರೆ ಏನಾಗುತ್ತದೆ ಎಂಬುದಕ್ಕೆ ಶುಕ್ರವಾರದಂದು ಗುಜರಾತ್ ಟೈಟಾನ್ಸ್ ವಿರುದ್ಧ ಗಳಿಸಿದ ಅರ್ಧಶತಕವೇ ಸಾಕ್ಷಿ. ಗುಜರಾತ್ ಟೈಟಾನ್ಸ್ ಫೀಲ್ಡರ್ ಗಳು ನೀಡಿದ 2 ಜೀವದಾನಗಳ ಸಂಪೂರ್ಣ ಲಾಭ ಎತ್ತಿದ ಹಿಟ್ ಮ್ಯಾನ್ ಅವರ ಬಿರುಸಿನ ಅರ್ಧಶತಕದ ಬಾರಿಸಿದರು. ಇದರ ನೆರವಿನಿಂದ ಬೃಹತ್ ಮೊತ್ತ ಪೇರಿಸಿದ ಮುಂಬೈ ಇಂಡಿಯನ್ಸ್ ತಂಡವು ಶುಭ್ಮನ್ ಗಿಲ್ ಪಡೆಯನ್ನು 20 ರನ್ ಗಳಿಂದ ಸೋಲಿಸಿ ಕ್ವಾಲಿಫೈಯರ್ 2ನೇ ಪಂದ್ಯಕ್ಕೆ ಲಗ್ಗೆ ಇಟ್ಟಿದೆ. ಭಾನುವಾರ ನಡೆಯಲಿರುವ ಕ್ವಾಲಿಫೈಯರ್ 2ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಹೈಲೈಟ್ಸ್:
- ಗುಜರಾತ್ ಟೈಟಾನ್ಸ್ ಅನ್ನು 20 ರನ್‌ಗಳಿಂದ ಸೋಲಿಸುವ ಮೂಲಕ ಕ್ವಾಲಿಫೈಯರ್ 2ಕ್ಕೆ ಪ್ರವೇಶಿಸಿದ ಮುಂಬೈ ಇಂಡಿಯನ್ಸ್ ತಂಡ
- ಎದುರಾಳಿ ಫೀಲ್ಡರ್ ಗಳು ನೀಡಿದ 2 ಜೀವದಾನದ ಲಾಭ ಎತ್ತಿದ ರೋಹಿತ್ ಶರ್ಮಾ ಅವರಿಂದ ಐಪಿಎಲ್ ನಲ್ಲಿ 47ನೇ ಅರ್ಧಶತಕ
- ಭಾನುವಾರ ಅಹಮದಾಬಾದ್ ನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೆಣಸು