Karnataka news paper

ಮೈಸೂರು: ಮ್ಯಾನ್ ಹೋಲ್ ಗೆ ಇಳಿದು ಅಸ್ವಸ್ಥಗೊಂಡಿದ್ದ ಪೌರಕಾರ್ಮಿಕ ಚಿಕಿತ್ಸೆ ಫಲಿಸದೆ ಸಾವು


Source : The New Indian Express

ಮೈಸೂರು: ಬರಿಗೈನಲ್ಲಿ ಮ್ಯಾನ್‌ಹೋಲ್‌ಗೆ ಇಳಿದಿದ್ದ ಪೌರ ಕಾರ್ಮಿಕರೊಬ್ಬರು ತೀವ್ರ ಅಸ್ವಸ್ಥಗೊಂಡು ಮೂರು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪಿರಿಯಾಪಟ್ಟಣದ ಮಹದೇಶ್ವರ ಬಡಾವಣೆ ನಿವಾಸಿ ಮಧು (27) ಮೃತ ಪೌರ ಕಾರ್ಮಿಕ, ಮಧುವಿಗೆ ಉಸಿರಾಟಕ್ಕೆ ತೀವ್ರ ತೊಂದರೆಯಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮಧು ಮೃತಪಟ್ಟಿದ್ದಾರೆ.

ಡ್ರೈನೇಜ್ ಬ್ಲಾಕ್ ಆಗಿದ್ದ ಹಿನ್ನೆಲೆ ದೂರು ಬಂದ ಕಾರಣ ಯಾವುದೇ ರಕ್ಷಣೆ ಇಲ್ಲದೆ ಪೌರ ಕಾರ್ಮಿಕರಾದ ರಾಜೇಶ್‌, ಮಧು, ವಿಶ್ವ ಎಂಬುವವರಿಂದ ಶುಕ್ರವಾರ  ರಾತ್ರಿ 8.30 ರ ಸುಮಾರಿಗೆ ಮ್ಯಾನ್‌ಹೋಲ್ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಉಸಿರುಗಟ್ಟಿದ ಅನುಭವವಾದ ಹಿನ್ನೆಲೆಯಲ್ಲಿ ಇಬ್ಬರು ಮ್ಯಾನ್ ಹೋಲ್ ನಿಂದ ಹೊರಬಂದಿದ್ದಾರೆ, ಅಸ್ವಸ್ಥಗೊಂಡಿದ್ದ ಮಧು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ: ಮಂಗಳೂರು: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ನಂತರ ಮಧು ಅವರನ್ನು ಮೈಸೂರು ಆಸ್ಪತ್ರೆಗೆ ಸೇರಿಸಲಾಯಿತು, ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.  ಮ್ಯಾನ್‌ಹೋಲ್‌ ಸ್ವಚ್ಛತೆಗೆ ಇಳಿದು ಅಸ್ವಸ್ಥಗೊಂಡು ಮೃತಪಟ್ಟ ಪೌರ ಕಾರ್ಮಿಕ ಮಧು ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮೃತದೇಹವಿಟ್ಟು ಪ್ರತಿಭಟನೆ ನಡೆಸಲಾಯಿತು. ಮೃತರ ಕುಟುಂಬದವರಿಗೆ 25 ಲಕ್ಷ ರು ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರರು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಪೌರ ಕಾರ್ಮಿಕರ ಅಹವಾಲು ಸ್ವೀಕರಿಸಿದರು. ಬಳಿಕ ಸಂಬಂಧಿಸಿದವರೊಂದಿಗೆ ಮಾತನಾಡಿ, 8.5 ಲಕ್ಷ ರೂ.ಗಳ ಚೆಕ್‌ ವಿತರಿಸಲಾಯಿತು. ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ  8.5 ಲಕ್ಷ ರು ಮಾತ್ರ ಪರಿಹಾರ ನೀಡಲು ಸಾಧ್ಯ ಎಂದು ಹೇಳಿದರು.



Read more