Karnataka news paper

‘ಬಡವ ರಾಸ್ಕಲ್’ ಸ್ನೇಹಿತರೇ ನಿರ್ಮಿಸಿದ ಪಕ್ಕಾ ಲೋಕಲ್ ಸಿನಿಮಾ: ಕೊರಿಯರ್ ಬಾಯ್ ನಿಂದ ನಿರ್ದೇಶಕ ಹುದ್ದೆಗೇರಿದ ಶಂಕರ್ ಗುರು


Source : The New Indian Express

ಕೊರಿಯರ್ ಬಾಯ್ ಆಗಿದ್ದ ದಿನಗಳಿಂದ ಮೊದಲಾಗಿ ಸಿನಿಮಾ ನಿರ್ದೇಶಕನ ಕ್ಯಾಪ್ ಧರಿಸುವವರೆಗಿನ ಶಂಕರ್ ಗುರು ಅವರ ಅನುಭವವವೇ ಸಿನಿಮಾ ಕಥೆಯಾಗಲು ಯೋಗ್ಯವಾದುದು. ಬಡವ ರಾಸ್ಕಲ್ ಸಿನಿಮಾ ನಿರ್ದೇಶನ ಮಾಡಿರುವ ಶಂಕರ್ ಗುರು ಅವರು ಸಿನಿಮಾದ ನಾಯಕ ಮತ್ತು ನಿರ್ಮಾಪಕರಾಗಿರುವ ಧನಂಜಯ್ ಅವರನ್ನು ಸ್ಮರಿಸುತ್ತಾರೆ. 

ಇದನ್ನೂ ಓದಿ: ಲವ್ ಮಾಕ್ಟೇಲ್- 2 ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ: ಡಾರ್ಲಿಂಗ್ ಕೃಷ್ಣ ಅವರಿಗೆ ಬ್ರೇಕ್ ನೀಡಿದ್ದ ಪಾರ್ಟ್ 1

ಬಡವ ರಾಸ್ಕಲ್ ಸಿನಿಮಾ ಮಿಡಲ್ ಕ್ಲಾಸ್ ಕುಟುಂಬ ಮತ್ತು ಅವರ ಮೌಲ್ಯಗಳ ಕುರಿತಾಗಿದೆ ಎನ್ನುತ್ತಾರೆ ಶಂಕರ್ ಗುರು. ಕನ್ನಡ ಮೀಡಿಯಂನಲ್ಲಿ ಓದಿದ್ದ ಶಂಕರ್ ಗುರು ಮುಂದೆ ವಿದ್ಯಾಭ್ಯಾಸ ಮುಂದುವರಿಸುವ ಇಚ್ಛೆ ಉಳ್ಳವರಾಗಿದ್ದರು. ಆದರೆ ಕಾರಣಾಂತರಗಳಿಂದ ಓದು ಮುಂದುವರಿಸಲು ಆಗಿರಲಿಲ್ಲ. 

ಇದನ್ನೂ ಓದಿ: ರೆಸ್ಟೋರೆಂಟ್​ನಲ್ಲಿ ಕಾಣಿಸಿಕೊಂಡ ವಿಜಯ್ ದೇವರಕೊಂಡ, ರಶ್ಮಿಕಾ: ರಣಬೀರ್, ಆಲಿಯಾಗೆ ಹೋಲಿಸಿದ್ದೇಕೆ ಅಭಿಮಾನಿಗಳು?

ಪಾರ್ಟ್ ಟೈಮ್ ಕೆಲಸ ಮತ್ತು ಸಂಜೆ ತರಗತಿಗಳಿಗೆ ಹಾಜರಾಗುತ್ತಿದ್ದ ಶಂಕರ್ ಗುರು ಅವರಿಗೆ ಎಂಥದ್ದೇ ಸಮಸ್ಯೆ ಬಂದರೂ ಅವರ ಸಿನಿಮಾ ಕನಸು ಮಾತ್ರ ನಿಂತಿರಲಿಲ್ಲ. ವಾಸ್ತವಕ್ಕೆ ಹತ್ತಿರವಾಗಿರುವ ಬಡವ ರಾಸ್ಕಲ್ ಸಿನಿಮಾದ ಕಥೆ ಧನಂಜಯ್ ಅವರಿಗೆ ಹೇಳಿ ಮಾಡಿಸಿದಂತಿದೆ ಎನ್ನುವುದು ಅವರ ಅಭಿಪ್ರಾಯ. 

ಇದನ್ನೂ ಓದಿ: ಪ್ರೀತಿ ಎಸ್ ಬಾಬು ನಿರ್ದೇಶನದ ‘ರಾಜಿ’ ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್

ಕಲಾವಿದರಾದ ರಂಗಾಯಣ ರಘು ಮತ್ತು ತಾರಾ ಅದ್ಭುತ ಅಭಿನಯ ನೀಡಿದ್ದು, ಸಂಗೀತ ನಿರ್ದೇಶನ ಮಾಡಿರುವ ವಾಸುಕಿ ವೈಭವ್ ಮತ್ತು ಸಿನಿಮೆಟೊಗ್ರಾಫರ್ ಪ್ರೀತಾ ಜಯರಾಮ್ ಅವರ ಕೆಲಸವೂ ಸಿನಿಮಾ ಚೆನ್ನಾಗಿ ಮೂಡಿ ಬರಲು ಕಾರಣವಾಗಿದೆ ಎನ್ನುತ್ತಾರೆ ನಿರ್ದೇಶಕ ಶಂಕರ್ ಗುರು.

ಇದನ್ನೂ ಓದಿ: ಮಾರ್ಟಿನ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ: ಧ್ರುವ ಸರ್ಜಾ



Read more…