Karnataka news paper

ಪಶ್ಚಿಮ ಬಂಗಾಳ: ಮೂವರು ರೈತರು ಶವವಾಗಿ ಪತ್ತೆ, ಬೆಳೆ ನಾಶದಿಂದ ಆತ್ಮಹತ್ಯೆ ಎಂದ ಕುಟುಂಬಸ್ಥರು


Source : PTI

ಬರ್ಧಮಾನ್: ಕಳೆದ ಎರಡು ದಿನಗಳಲ್ಲಿ ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ಮೂವರು ರೈತರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಜವಾದ್ ಚಂಡಮಾರುತದಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಆಲೂಗೆಡ್ಡೆ ಮತ್ತು ಭತ್ತದ ಬೆಳೆ ನಾಶವಾದ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತರ ಕುಟುಂಬಗಳು ಹೇಳಿದ್ದು, ಘಟನೆಗಳ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ.

ಇದನ್ನು ಓದಿ: ಮಾನವ ಹಕ್ಕುಗಳ ಉಲ್ಲಂಘನೆಗೆ ಪಶ್ಚಿಮ ಬಂಗಾಳ ಉತ್ತಮ ನಿದರ್ಶನ: ರಾಜ್ಯಪಾಲ ಜಗದೀಪ್ ದಂಖರ್​

ಶನಿವಾರ ರೈನಾ ಮೊದಲ ಬ್ಲಾಕ್‌ನ ದೇಬಿಪುರ ಮತ್ತು ಬಂಟಿರ್ ಗ್ರಾಮಗಳಲ್ಲಿ ಇಬ್ಬರು ರೈತರು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಶುಕ್ರವಾರ ಕಲ್ನಾ ಎರಡನೇ ಬ್ಲಾಕ್‌ನ ಬಿರುಹಾ ಗ್ರಾಮದ ತನ್ನ ಮನೆಯಲ್ಲಿ ಮತ್ತೊಬ್ಬ ರೈತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬರ್ಧಮಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಘಟನೆಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ಸಿಂಗ್ಲಾ ತಿಳಿಸಿದ್ದಾರೆ.



Read more