Karnataka news paper

ನೇಪಾಳದಲ್ಲಿ ಭೂಕಂಪ: ಭಾರತ, ಟಿಬೆಟ್‌ನಲ್ಲೂ ನಡುಗಿದ ಭೂಮಿ! ಎಲ್ಲೆಲ್ಲಿ ಎಚ್ಚರಿಕೆ?


ಹೊಸದಿಲ್ಲಿ: ಶುಕ್ರವಾರ ಮುಂಜಾನೆ ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಸಿಂಧುಪಾಲ್ ಚೌಕ್ ಜಿಲ್ಲೆಯ ಭೈರವಕುಂಡದಲ್ಲಿ ಉಂಟಾಗಿದೆ. ನೇಪಾಳದ ಮಧ್ಯ ಭಾಗದಲ್ಲಿರುವ ಹಿಮಾಲಯ ಪ್ರದೇಶದಲ್ಲಿ ಈ ಜಿಲ್ಲೆ ಇದ್ದು, ಸ್ಥಳೀಯ ಸಮಯ ಬೆಳಿಗ್ಗೆ 2.51ಕ್ಕೆ ಭೂಮಿ ಕಂಪಿಸಿದೆ.ನೇಪಾಳದ ಪೂರ್ವ ಮತ್ತು ಮಧ್ಯ ಭಾಗಗಳಲ್ಲಿರುವ ಜನರಿಗೆ ಭೂಕಂಪದ ಅನುಭವ ಆಗಿದೆ. ಅಲ್ಲದೆ ಭಾರತ ಚೀನಾ ಮತ್ತು, ಟಿಬೆಟ್‌ನ ಕೆಲವು ಭಾಗಗಳಲ್ಲೂ ಭೂಕಂಪದ ಅನುಭವ ಆಗಿದೆ.

ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರದ ವೆಬ್‌ಸೈಟ್ ಪ್ರಕಾರ, ಭೂಕಂಪದ ಕೇಂದ್ರಬಿಂದು ಸಿಂಧುಪಾಲ್ ಚೌಕ್ ಜಿಲ್ಲೆಯ ಭೈರವಕುಂಡದಲ್ಲಿದ್ದು, ಭೂಕಂಪ ಬೆಳಿಗ್ಗೆ 2.51ಕ್ಕೆ (ಸ್ಥಳೀಯ ಸಮಯ) ಸಂಭವಿಸಿದೆ.

ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಸಾವುನೋವುಗಳು ಅಥವಾ ಗಂಭೀರ ಹಾನಿಗಳು ಸಂಭವಿಸಿಲ್ಲ. ಸ್ಥಳೀಯ ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ನೇಪಾಳವು ಹೆಚ್ಚು ಭೂಕಂಪ ಪೀಡಿತ ಪ್ರದೇಶವಾಗಿರುವುದರಿಂದ, ಜನರು ಎಚ್ಚರಿಕೆಯಿಂದಿರಲು ಮತ್ತು ನಂತರದ ಭೂಕಂಪಗಳ ಬಗ್ಗೆ ಜಾಗರೂಕರಾಗಿರಲು ಅಧಿಕಾರಿಗಳು ಸೂಚಿಸಿದ್ದಾರೆ. ಭೂಕಂಪದ ನಂತರದ ಸಣ್ಣ ಕಂಪನಗಳಿಗೆ ಸಿದ್ಧರಾಗಿರಿ ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.



Read more

[wpas_products keywords=”deal of the day sale today offer all”]