ಯುದ್ಧ ಭೀತಿಯಲ್ಲಿರುವ ಉಕ್ರೇನ್‌ನಲ್ಲಿ 79 ವರ್ಷದ ವೃದ್ಧೆಯೊಬ್ಬರ ಧೈರ್ಯ ಮತ್ತು ಸ್ಥೈರ್ಯ ವ್ಯಾಪಕ ಮೆಚ್ಚುಗೆಗೆ ಒಳಗಾಗಿದೆ. ವ್ಯಾಲೆಂಟಿನಾ ಕೊನ್‌ಸ್ತಾಂತ್ಯಿನೊವಸ್ಕಾ ಎಂಬ ಹೆಸರಿನ ವೃದ್ಧೆ, ಎಕೆ 47 (AK 47) ಹಿಡಿದಿರುವ ವಿಡಿಯೋ ವೈರಲ್ ಆಗಿದೆ. ಈ ಅಜ್ಜಿ ನಾಗರಿಕ ಯುದ್ಧ ತರಬೇತಿಯಲ್ಲಿ ಭಾಗಿಯಾಗಿ, ರೈಫಲ್ ಬಳಕೆ ಕಲೆಯನ್ನು ಕಲಿಯುತ್ತಿದ್ದಾಳೆ.
ಉಕ್ರೇನ್ ರಷ್ಯಾ ಸಂಘರ್ಷ : ತನ್ನ ಪ್ರಜೆಗಳ ಸಹಾಯಕ್ಕೆ ಮುಂದಾದ ಭಾರತ, ಈ ಸಹಾಯವಾಣಿಗೆ ಸಂಪರ್ಕಿಸಿ!
ಪೂರ್ವ ಉಕ್ರೇನ್‌ನ ಮರಿಪೊಲ್ ಎಂಬಲ್ಲಿ ರಾಷ್ಟ್ರೀಯ ಕಾವಲು ಪಡೆಯಿಂದ ವ್ಯಾಲೆಂಟಿನಾ ಎಂಬ ಅಜ್ಜಿ ಯುದ್ಧ ತರಬೇತಿ ಪಡೆಯುತ್ತಿದ್ದಾಳೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಕಾರ್ಮೋಡ ಕವಿದಿರುವ ನಡುವೆ ಈ ಅಜ್ಜಿಯ ದೇಶ ರಕ್ಷಣೆ ಬಯಕೆ ಎಂಥಹವರಲ್ಲಿಯೂ ಅಚ್ಚರಿ ಮೂಡಿಸುತ್ತದೆ.
“ಏನಾದರೂ ಅಹಿತಕರ ಘಟನೆಯ ಸನ್ನಿವೇಶ ಎದುರಾದರೆ ಗುಂಡು ಹಾರಿಸಲು ನಾನು ಸಿದ್ಧಳಾಗಿದ್ದೇನೆ. ನಾನು ನನ್ನ ಮನೆಯನ್ನು, ನನ್ನ ನಗರವನ್ನು, ನನ್ನ ಮಕ್ಕಳನ್ನು ರಕ್ಷಿಸಿಕೊಳ್ಳುತ್ತೇನೆ. ನಾನು ಇದಕ್ಕೆ ಸಿದ್ಧಳಾಗಿದ್ದೇನೆ ಎಂಬ ಕಾರಣಕ್ಕೆ ನಾನು ಇದನ್ನು ಮಾಡುತ್ತಿದ್ದೇನೆ. ನಾನು ನನ್ನ ದೇಶವನ್ನು ಹಾಗೂ ನನ್ನ ನಗರವನ್ನು ಕಾಪಾಡಿಕೊಳ್ಳಲು ಬಯಸಿದ್ದೇನೆ” ಎಂದು ಮಾಧ್ಯಮಗಳಿಗೆ ಅಜ್ಜಿ ಹೇಳಿಕೆ ನೀಡಿದ್ದಾಳೆ.
ಸಾಮಾಜಿಕ ಜಾಲತಾಣದ ಬಳಕೆದಾರರು ಆಕೆಯನ್ನು ‘ನಿಜವಾದ ಹೀರೋ’ ಎಂದು ಕರೆದಿದ್ದಾರೆ. “ನಿಮ್ಮ ತಾಯಿ ಕೂಡ ಇದನ್ನೇ ಮಾಡಬಲ್ಲರು” ಎಂದು ಆಕೆ ತರಬೇತಿ ವೇಳೆ ಸುದ್ದಿಗಾರರಿಗೆ ಹೇಳಿದ್ದಾಳೆ. ತನಗೆ ಸಾಕಷ್ಟು ವಯಸ್ಸಾಗಿದೆ ಹಾಗೂ ಇಷ್ಟು ದೊಡ್ಡ ಗನ್ ಅನ್ನು ಸಾಗಿಸಲು ತನ್ನ ದೇಹ ಅನುಮತಿ ನೀಡುವಷ್ಟು ಸಮರ್ಥವಾಗಿಲ್ಲ. ಹೀಗಾಗಿ ತಾನು ಅರ್ಹ ಸೈನಿಕಳಾಗಲು ಸಾಧ್ಯವಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.
ರಷ್ಯಾ-ಉಕ್ರೇನ್ ಸಂಘರ್ಷದ ಮೂಲ ಏನು?: ಪುಟಿನ್ ಅವಸರ ಮಾಡಿದರೇನು?
ರಷ್ಯಾ ಸೇನಾ ಪಡೆಗಳು ಗಡಿ ಭಾಗದಲ್ಲಿ ಜಮಾವಣೆಗೊಂಡು, ಯುದ್ಧ ಭೀತಿ ಉಂಟಾಗಿರುವ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರಿಗೆ ತಮ್ಮನ್ನು ರಕ್ಷಿಸಿಕೊಳ್ಳುವ ಸಮರ ಕಲೆಗಳನ್ನು ಕಲಿಸುವ ಮೂಲ ಸೇನಾ ತಂತ್ರಗಳನ್ನು ಕಲಿಸುವುದು ಸೇನಾ ತರಬೇತಿಯ ಉದ್ದೇಶವಾಗಿದೆ. ಮಕ್ಕಳನ್ನು ಒಳಗೊಂಡಂತೆ ಅಸಂಘಟಿತ ಸೇನೆಯನ್ನು ದೇಶಾದ್ಯಂತ ನಿರ್ಮಿಸಲು ಸೇನೆ ವಿವಿಧ ಯೋಜನೆಗಳನ್ನು ರೂಪಿಸಿದೆ. ನ್ಯಾಟೋ ಪಡೆಗಳ ಒತ್ತಡಕ್ಕೆ ಮಣಿದ ರಷ್ಯಾ, ಉಕ್ರೇನ್ ಗಡಿಯಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿರುವುದಾಗಿ ತಿಳಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೂಡ ಅದು ಹಂಚಿಕೊಂಡಿದೆ. ಆದರೆ ರಷ್ಯಾ ಹೇಳುತ್ತಿರುವುದು ಸತ್ಯವಲ್ಲ ಎಂದು ಅಮೆರಿಕ ಮತ್ತೆ ಅನುಮಾನ ವ್ಯಕ್ತಪಡಿಸಿದೆ.
Read more
[wpas_products keywords=”deal of the day sale today offer all”]