ಇದೀಗ 10 ತಂಡಗಳ ನಡುವೆ ನಡೆಯಲಿರುವ ಐಪಿಎಲ್ 2022 ಟೂರ್ನಿಯಲ್ಲಿ ಟ್ರೋಫಿ ಗೆಲುವಿನ ಆಸೆ ಈಡೇರಿಸಿಕೊಳ್ಳಲು ಚಾಲೆಂಜರ್ಸ್ ಬಲಿಷ್ಠ ತಂಡವನ್ನೇ ಕಟ್ಟಿದೆ. ಬೆಂಗಳೂರಿನಲ್ಲಿ ಫೆ.12-13ರಂದು ಎರಡು ದಿನಗಳ ಕಾಲ ನಡೆದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 55.45 ಕೋಟಿ ರೂ. ಖರ್ಚು ಮಾಡಿರುವ ಆರ್‌ಸಿಬಿ 19 ಆಟಗಾರರನ್ನು ಖರೀದಿ ಮಾಡಿದೆ.
ಇದಕ್ಕೂ ಮುನ್ನ ಕಳೆದ ವರ್ಷ ನವೆಂಬರ್‌ನಲ್ಲಿ ವಿರಾಟ್ ಕೊಹ್ಲಿ (15 ಕೋಟಿ ರೂ.), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ ರೂ.) ಮತ್ತು ಮೊಹಮ್ಮದ್ ಸಿರಾಜ್ (7 ಕೋಟಿ ರೂ.) ಅವರನ್ನು ಚಾಲೆಂಜರ್ಸ್ ತನ್ನಲ್ಲಿಯೇ ಉಳಿಸಿಕೊಂಡು, ಬಾಕಿ ಉಳಿದ 57 ಕೋಟಿ ರೂ.ಗಳೊಂದಿಗೆ ಮೆಗಾ ಆಕ್ಷನ್‌ನಲ್ಲಿ ಭಾಗವಹಿಸಿತ್ತು. ಅಂದಹಾಗೆ ಆಟಗಾರರ ಖರೀದಿ ಸಲುವಾಗಿ ಬಿಸಿಸಿಐ ಗರಿಷ್ಠ 90 ಕೋಟಿ ರೂ.ಗಳ ಪರ್ಸ್ ಮೊತ್ತವನ್ನು ನಿಗದಿ ಪಡಿಸಿದೆ. ಈ ಮೊತ್ತದಲ್ಲೇ ಉಳಿಸಿಕೊಂಡ ಆಟಗಾರರಿಗೆ ವೇತನ ಕೊಟ್ಟು, ಮಿಕ್ಕ ಹಣದಲ್ಲಿ ಹೊಸ ಆಟಗಾರರನ್ನು ಖರೀದಿ ಮಾಡಬೇಕು.
IPL: 10 ತಂಡಗಳಲ್ಲಿ ಕರ್ನಾಟಕದ 16 ಆಟಗಾರರು, ಹರಾಜು ಹಣದಲ್ಲಿ ‘ಕನ್ನಡಿಗರಿಗೆ ಸಿಂಹಪಾಲು’!
ತಂಡವೊಂದಕ್ಕೆ ಗರಿಷ್ಠ 25 ಆಟಗಾರರನ್ನು ಹೊಂದುವ ಅವಕಾಶ ಇರುತ್ತದೆ. ಹೀಗಾಗಿ 3 ಆಟಗಾರರನ್ನು ಉಳಿಸಿಕೊಂಡ ಚಾಲೆಂಜರ್ಸ್ ಹರಾಜಿನಲ್ಲಿ ಗರಿಷ್ಠ 22 ಆಟಗಾರರನ್ನು ಖರೀದಿ ಮಾಡಬಹುದಿತ್ತು. ಪರ್ಸ್‌ನಲ್ಲಿ ಇನ್ನೂ ಒಂದೂವರೆ ಕೋಟಿ ರೂ. ಬಾಕಿ ಉಳಿದಿರುವ ಕಾರಣ ತಂಡಕ್ಕೆ ಇನ್ನು ಮೂವರು ಪ್ರತಿಭಾನ್ವಿತರನ್ನು ಹೆಕ್ಕುವಲ್ಲಿ ವಿಫಲವಾಗಿದೆ ಎನ್ನಬಹುದು. ಅಂದಹಾಗೆ ಹರಾಜಿನಲ್ಲಿ 7 ವಿದೇಶಿ ಆಟಗಾರರನ್ನು ಒಳಗೊಂಡಂತೆ 19 ಆಟಗಾರ ಸೇವೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಚಾಲೆಂಜರ್ಸ್ ಯಶಸ್ವಿಯಾಗಿದೆ.
ಫಾಫ್ ಕ್ಯಾಪ್ಟನ್ ಆಗುವ ಸಾಧ್ಯತೆ!
ಒಟ್ಟಾರೆ ಐಪಿಎಲ್ 2022 ಟೂರ್ನಿಯಲ್ಲಿ ಚಾಲೆಂಜರ್ಸ್ ಹೊಸ ಹುರುಪಿನಲ್ಲಿ ಕಣಕ್ಕಿಳಿಯುವುದು ಖಾತ್ರಿಯಾಗಿದೆ. ಈ ನಡುವೆ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಿಟ್ಟಿರುವ ಕಾರಣ ಚಾಲೆಂಜರ್ಸ್ ಹೊಸ ಕ್ಯಾಪ್ಟನ್ ಆಯ್ಕೆ ಮಾಡಬೇಕಿದೆ. ಹರಾಜಿನಲ್ಲಿ 7 ಕೋಟಿ ರೂ. ಬೆಲೆಗೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು’ಪ್ಲೆಸಿಸ್ ಅವರನ್ನು ಆರ್‌ಸಿಬಿ ಖರೀದಿ ಮಾಡಿದ್ದು, ಸಿಎಸ್‌ಕೆ ತಂಡದ ಮಾಜಿ ಓಪನರ್‌ಗೆ ನಾಯಕತ್ವ ಕೊಡುವ ಎಲ್ಲಾ ಸಾಧ್ಯತೆ ಇದೆ.
ಹೀಗಿರುವಾಗ ಉಳಿಸಿಕೊಂಡ ಆಟಗಾರರು ಮತ್ತು ಖರೀದಿಸಿದ ಆಟಗಾರರನ್ನು ಒಳಗೊಂಡಂತೆ ಚಾಲೆಂಜರ್ಸ್ ತಂಡದ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಇಲ್ಲಿ ನೀಡಲಾಗಿದೆ.
IPL 2022: ಮೆಗಾ ಹರಾಜಿನ ಬಳಿಕ ಆರ್‌ಸಿಬಿ ಸಂಪೂರ್ಣ ತಂಡ ಇಂತಿದೆ..
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI
1. ಫಾಫ್ ಡು’ಪ್ಲೆಸಿಸ್ (ಓಪನರ್/ಕ್ಯಾಪ್ಟನ್)
2. ವಿರಾಟ್ ಕೊಹ್ಲಿ (ಓಪನರ್)
3. ಅನುಜ್ ರಾವತ್ (ಬ್ಯಾಟ್ಸ್‌ಮನ್)
4. ಗ್ಲೆನ್ ಮ್ಯಾಕ್ಸ್‌ವೆಲ್ (ಆಲ್‌ರೌಂಡರ್)
5. ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್/ ಬ್ಯಾಟ್ಸ್‌ಮನ್)
6. ಮಹಿಪಾಲ್ ಲೊಮ್ರೊರ್ (ಆಲ್‌ರೌಂಡರ್)
7. ವಾನಿಂದು ಹಸರಂಗ (ಆಲ್‌ರೌಂಡರ್)
8. ಶಹಬಾಝ್ ಅಹ್ಮದ್ (ಆಲ್‌ರೌಂಡರ್)
9. ಹರ್ಷಲ್ ಪಟೇಲ್ (ಬಲಗೈ ಮಧ್ಯಮ ವೇಗಿ)
10. ಜಾಶ್ ಹೇಝಲ್‌ವುಡ್ (ಬಲಗೈ ವೇಗಿ)
11. ಮೊಹಮ್ಮದ್ ಸಿರಾಜ್ (ಬಲಗೈ ವೇಗಿ)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಫಾಫ್ ಡು’ಪ್ಲೆಸಿಸ್, ವಾನಿಂದು ಹಸರಂಗ, ದಿನೇಶ್ ಕಾರ್ತಿಕ್, ಜಾಶ್ ಹೇಜಲ್‌ವುಡ್, ಶಹಬಾಝ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಾಶ್ ಪ್ರಭುದೇಸಾಯ್, ಚಾಮಾ ಮಿಲಿಂದ್, ಅನೀಶ್ವರ್ ಗೌತಮ್, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲವ್ನೀತ್ ಸಿಸೋಡಿಯಾ, ಡೇವಿಡ್ ವಿಲ್ಲಿ.
Read more
[wpas_products keywords=”deal of the day sale today offer all”]