Karnataka news paper

ನಿವಿನ್ ಪೌಲಿ ಸಿನಿಮಾಗೆ ‘ಅವನೇ ಶ್ರೀಮನ್ನಾರಾಯಣ’ ನಟಿ ಶಾನ್ವಿ ಶ್ರೀವಾಸ್ತವ ನಾಯಕಿ: ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ


Online Desk

ಜನಪ್ರಿಯ ಮಲಯಾಳಂ ನಟ ನಿವಿನ್ ಪೌಲಿ ನಾಯಕನಾಗಿ ನಟಿಸಿರುವ, ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಮಲಯಾಳಂ ಸಿನಿಮಾ ‘ಮಹಾವೀರ್ಯರ್’ಗೆ ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆಯಾಗಿದೆ.  

ಇದನ್ನೂ ಓದಿ:  ಫ್ಯಾಮಿಲಿ ಪ್ರಧಾನ ‘ಫ್ಯಾಮಿಲಿ ಪ್ಯಾಕ್’ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆ

ಸಿನಿಮಾದಲ್ಲಿ ನಿವಿನ್ ಪೌಲಿ ಜತೆಗೆ ಆಸಿಫ್ ಅಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಮಹಾವೀರ್ಯರ್’ ಸಿನಿಮಾ ಸಂಪೂರ್ಣ ಫ್ಯಾಂಟಸಿ ಕಥೆಯನ್ನು ಹೊಂದಿದೆ.

ಇದನ್ನೂ ಓದಿ: ಜಮೀರ್ ಪುತ್ರ ಝೈದ್ ಖಾನ್ ಸ್ಟಾರರ್ ‘ಬನಾರಸ್’ ಕನ್ನಡ ಸಿನಿಮಾ ನೂತನ ಪೋಸ್ಟರ್ ಬಿಡುಗಡೆ

ಟೈಮ್​ ಟ್ರಾವೆಲಿಂಗ್ ಸೇರಿ ಕಾನೂನು, ಕಟ್ಟಳೆಗಳ ಬಗ್ಗೆಯೂ ಚಿತ್ರ ಬೆಳಕು ಚೆಲ್ಲಲಿದೆ. ನಾಯಕ ನಟ ನಿವಿನ್ ಪೌಲಿ ಅವರೇ ಸಿನಿಮಾಗೆ ಹಣ ಹೂಡುತ್ತಿರುವುದು ವಿಶೇಷ.

ಇದನ್ನೂ ಓದಿ: ಚಿತ್ರೋದ್ಯಮದಲ್ಲಿ 26 ವರ್ಷಗಳು: ಕನಸುಗಳನ್ನು ಬೆನ್ನಟ್ಟಿ ಹೋಗಲು ಇನ್ನೂ ಸಾಕಷ್ಟಿದೆ ಎಂದ ಕಿಚ್ಚ ಸುದೀಪ್

ಈ ಹಿಂದೆ ನಿವಿನ್ ಅವರ ‘1983‘ ಮತ್ತು ‘ಆ್ಯಕ್ಷನ್ ಹೀರೋ ಬಿಜು’ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಅಬ್ರಿದ್ ಶೈನ್, ‘ಮಹಾವೀರ್ಯರ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 

ಇದನ್ನೂ ಓದಿ: ಚಿತ್ರರಂಗದಲ್ಲಿ ಗಾಡ್ ಫಾದರ್ ಹೆಲ್ಪ್ ತುಂಬಾ ದಿನ ನಡಿಯಲ್ಲ, ನಮ್ಮಲ್ಲೂ ಕಂಟೆಂಟ್ ಇರ್ಬೇಕು: ‘ಡೊಳ್ಳು’ ನಿರ್ದೇಶಕ ಸಾಗರ್ ಪುರಾಣಿಕ್





Read more…

[wpas_products keywords=”party wear dress for women stylish indian”]