Online Desk
ನವದೆಹಲಿ: ಕರ್ನಾಟಕದ ಕಾಲೇಜೊಂದರಿಂದ ಹಿಜಾಬ್ ಬಗ್ಗೆ ಆರಂಭವಾದ ವಿವಾದವನ್ನು ತಡೆಯಲು ಆಗುತ್ತಿಲ್ಲ. ಹಿಜಾಬ್ ಗಲಾಟೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಈ ಕುರಿತು ಮತ್ತೊಮ್ಮೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ನಲ್ಲಿ ಓವೈಸಿ, “ಇನ್ಶಾ ಅಲ್ಲಾ ಒಂದು ದಿನ ಹಿಜಾಬಿ ಪ್ರಧಾನಿಯಾಗುತ್ತಾರೆ” ಎಂದು ಬರೆದಿದ್ದಾರೆ.
ಇದನ್ನು ಓದಿ: ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಮ್ಮ ದೇಶಕ್ಕೆ ಪಾಠ ಮಾಡುವುದು ಬೇಡ: ಪಾಕ್ ಗೆ ಓವೈಸಿ ತಿರುಗೇಟು
ಟ್ವೀಟ್ ವಿಡಿಯೋದಲ್ಲಿ ಮಾತನಾಡಿರುವ ಓವೈಸಿ, “ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ಬಯಸಿದರೆ ಅಮ್ಮ-ಅಬ್ಬಾ ಹೇಳುವರು – ಮಗು ಧರಿಸು. ಯಾರು ನಿಮ್ಮನ್ನು ತಡೆಯುತ್ತಾರೆ ಎಂದು ನಾವು ನೋಡುತ್ತೇವೆ. ಹಿಜಾಬ್ ಧರಿಸಿ, ಕಾಲೇಜಿಗೆ ಹೋಗುತ್ತಾರೆ, ಕಲೆಕ್ಟರ್ ಆಗುತ್ತಾರೆ, ಬಿಜಿನೆಸ್ ಮ್ಯಾನ್ ಆಗುತ್ತಾರೆ, ಎಸ್‌ಡಿಎಂ ಕೂಡ ಆಗುತ್ತಾರೆ ಮತ್ತು ಮುಂದೊಂದು ದಿನ ಈ ದೇಶದಲ್ಲಿ ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಪ್ರಧಾನಿಯಾಗುತ್ತಾರೆ” ಎಂದು ಹೇಳಿದ್ದಾರೆ.
ಈ ಹಿಂದೆ ಅಸಾದುದ್ದೀನ್ ಓವೈಸಿ ಅವರು ಹಿಜಾಬ್ ವಿವಾದದಲ್ಲಿ ಪುಟ್ಟಸ್ವಾಮಿ ತೀರ್ಪನ್ನು ಉಲ್ಲೇಖಿಸಿದ್ದರು. ಭಾರತದ ಸಂವಿಧಾನ ನಿಖಾಬ್ ಅಥವಾ ಹಿಜಾಬ್ ಧರಿಸುವ ಹಕ್ಕನ್ನು ನೀಡಿದೆ. ಪುಟ್ಟಸ್ವಾಮಿ ಅವರ ತೀರ್ಪು ಈ ಅವಕಾಶ ನೀಡುತ್ತದೆ ಎಂದು ಓವೈಸಿ ಹೇಳಿದ್ದರು. ಇದು ನಮ್ಮ ಗುರುತು. ಆ ಹುಡುಗರ ಗುಂಪಿಗೆ ಉತ್ತರಿಸಿದ ಹುಡುಗಿಗೆ ನಾನು ನಮಸ್ಕರಿಸುತ್ತೇನೆ. ಭಯ ಮತ್ತು ಗಾಬರಿಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.
ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಚುನಾವಣಾ ರಾಲಿ ಉದ್ದೇಶಿಸಿ ಮಾತನಾಡಿದ ಓವೈಸಿ, ಯಾವುದೇ ಮುಸ್ಲಿಂ ಮಹಿಳೆ ಯಾವುದೇ ಭಯವಿಲ್ಲದೆ ಹಿಜಾಬ್ ಧರಿಸಬಹುದು ಎಂದು ಹೇಳಿದ್ದರು.
इंशा’अल्लाह pic.twitter.com/lqtDnReXBm
— Asaduddin Owaisi (@asadowaisi) February 12, 2022
Read more
[wpas_products keywords=”deal of the day”]