Karnataka news paper

ನಟಿ ಶಿಲ್ಪಾ ಶೆಟ್ಟಿ ಫ್ಯಾಮಿಲಿಗೆ ಮತ್ತೆ ಎದುರಾಯ್ತು ಸಂಕಷ್ಟ; ಕೋರ್ಟ್‌ನಿಂದ ಬಂತು ನೋಟಿಸ್!


ನಟಿ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಅದ್ಯಾಕೋ ಟೈಮ್ ಸರಿ ಇಲ್ಲ ಎಂದು ಕಾಣುತ್ತಿದೆ. ಒಂದಲ್ಲ ಒಂದು ಕೇಸ್‌ನಲ್ಲಿ ಅವರ ಕುಟುಂಬದ ಸದಸ್ಯರ ಹೆಸರು ತಳುಕುಹಾಕಿಕೊಳ್ಳುತ್ತಿವೆ. ಆದರೆ, ಈ ಬಾರಿ ಒಬ್ಬರಲ್ಲ, ಇಬ್ಬರಲ್ಲ ಮೂವರಿಗೆ ಕೋರ್ಟ್‌ನಿಂದ ನೋಟಿಸ್‌ ಬಂದಿದೆ. ಹೌದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ, (Shilpa Shetty) ಅವರ ಸಹೋದರಿ ಶಮಿತಾ ಶೆಟ್ಟಿ (Shamita Shetty) ಮತ್ತು ತಾಯಿ ಸುನಂದಾ ಶೆಟ್ಟಿಗೆ ಅಂಧೇರಿ ನ್ಯಾಯಾಲಯವು ಸಮನ್ಸ್ ನೀಡಿದೆ.

21 ಲಕ್ಷ ರೂ. ಸಾಲ ಮಾಡಿದ್ದ ಶಿಲ್ಪಾ ಫ್ಯಾಮಿಲಿ
ಮುಂಬೈನ ಉದ್ಯಮಿಯೊಬ್ಬರು ಶಿಲ್ಪಾ ಶೆಟ್ಟಿ ಫ್ಯಾಮಿಲಿಗೆ 21 ಲಕ್ಷ ರೂ. ಸಾಲ ನೀಡಿದ್ದರು. ಆದರೆ, ಹೇಳಿದ ಸಮಯಕ್ಕೆ ಶಿಲ್ಪಾ ಫ್ಯಾಮಿಲಿ ಸಾಲ ಮರುಪಾವತಿ ಮಾಡಿಲ್ಲ ಎಂದು ಉದ್ಯಮಿ ಈಗ ಕೇಸ್‌ ದಾಖಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಶಿಲ್ಪಾ ಶೆಟ್ಟಿ, ಸುನಂದಾ ಶೆಟ್ಟಿ, ಶಮಿತಾ ಶೆಟ್ಟಿಗೆ ಅಂಧೇರಿ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್‌ನಲ್ಲಿ ಫೆಬ್ರವರಿ 28 ರಂದು ಮೂವರು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ತಿಳಿಸಲಾಗಿದೆ.

ಅಂದಹಾಗೆ, ಸಾಲ ನೀಡಿರುವ ವ್ಯಕ್ತಿಯು ಆಟೋಮೊಬೈಲ್ ಕಂಪನಿಯನ್ನು ಹೊಂದಿದ್ದಾರೆ. ಅವರಿಂದ ಶಿಲ್ಪಾ ಅವರ ತಂದೆ ಸುರೇಂದ್ರ ಅವರು 21 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ 2016ರ ಅಕ್ಟೋಬರ್‌ನಲ್ಲಿ ಸುರೇಂದ್ರ ನಿಧನರಾದರು. 2017ರ ಜನವರಿಯಲ್ಲೇ ಬಡ್ಡಿ ಸಮೇತ ಅಸಲನ್ನು ಶಿಲ್ಪಾ ಫ್ಯಾಮಿಲಿ ತೀರಿಸಬೇಕಿತ್ತು. ಆದರೆ ಸಾಲ ಮರುಪಾವತಿ ಮಾಡಿರಲಿಲ್ಲ. ಸಾಲ ಮರುಪಾವತಿ ಮಾಡುವುದಕ್ಕೂ ಮುನ್ನವೇ ಸುರೇಂದ್ರ ನಿಧನರಾಗಿದ್ದರಿಂದ, ಆ ಸಾಲದ ಹೊಣೆ ಶಿಲ್ಪಾ, ಸುನಂದಾ ಮತ್ತು ಶಮಿತಾ ಮೇಲಿತ್ತು. ಆದರೆ ಅವರು ಹಣವನ್ನೇ ಪಡೆದಿಲ್ಲ ಎಂದಿದ್ದರು. ಇದೀಗ ಆ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

ಪತಿ ರಾಜ್ ಕುಂದ್ರಾಗೆ ಜಾಮೀನು: ಶಿಲ್ಪಾ ಶೆಟ್ಟಿ ಕೊಟ್ಟ ಮೊದಲ ಪ್ರತಿಕ್ರಿಯೆ

ಜೈಲು ಸೇರಿದ್ದ ಶಿಲ್ಪಾ ಪತಿ ರಾಜ್ ಕುಂದ್ರಾ
ಇನ್ನು, ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ (Raj Kundra) ಅವರನ್ನು ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ, ಆನ್‌ಲೈನ್‌ ಆಪ್‌ಗಳಲ್ಲಿ ಪ್ರಸಾರ ಮಾಡುತ್ತಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ತಿಂಗಳುಗಳ ಕಾಲ ಅವರು ನ್ಯಾಯಾಂಗ ಬಂಧನದಲ್ಲಿ ಇರಬೇಕಾಯ್ತು. ಇದೀಗ ಮತ್ತೊಂದು ಸಂಕಷ್ಟ ಶಿಲ್ಪಾ ಫ್ಯಾಮಿಲಿಗೆ ಎದುರಾಗಿದೆ.

ರಾಜ್ ಕುಂದ್ರಾ ಕೇಸ್: ಮೊದಲ ಬಾರಿಗೆ ಪ್ರಕರಣದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ಶಿಲ್ಪಾ ಶೆಟ್ಟಿ!



Read more

[wpas_products keywords=”deal of the day party wear dress for women stylish indian”]