Karnataka news paper

3ನೇ ಏಕದಿನ ಪಂದ್ಯ: ನಾಯಕತ್ವದಿಂದ ಕೆಳಗಿಳಿಸಿದ ನಂತರ ಕೊಹ್ಲಿ ಕಳಪೆ ಬ್ಯಾಟಿಂಗ್, ವಿಂಡೀಸ್ ವಿರುದ್ಧ ಡಕೌಟ್!


Online Desk

ನವದೆಹಲಿ: ಬ್ಯಾಟಿಂಗ್ ಮೂಲಕ ಹಲವು ದಾಖಲೆ ಬರೆದಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ಬ್ಯಾಟಿಂಗ್ ಕಡೆ ಹೆಚ್ಚು ಗಮನ ಹರಿಸಬೇಕಿತ್ತು. ಆದರೆ ಇತ್ತೀಚಿನ ಸರಣಿಗಳಲ್ಲಿ ಅವರು ಕಳಪೆ ಪ್ರದರ್ಶನ ನೀಡುತ್ತಿರುವುದು ಅಭಿಮಾನಿಗಳು ನಿರಾಶೆಗೊಳಗಾಗುವಂತೆ ಮಾಡಿದೆ. 

ವೆಸ್ಟ್ ಇಂಡೀಸ್ ವಿರುದ್ಧ ಮೂರು ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೇವಲ 26 ರನ್ ಮಾತ್ರ ಗಳಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 8 ರನ್ ಗೆ ಔಟಾಗಿದ್ದ ಕೊಹ್ಲಿ ಎರಡನೇ ಏಕದಿನ ಪಂದ್ಯದಲ್ಲಿ 18 ರನ್ ಬಾರಿಸಿದ್ದರು. ಇನ್ನು ಮೂರನೇ ಪಂದ್ಯದಲ್ಲಿ ಡಕೌಟ್ ಆಗಿದ್ದಾರೆ. 

ಇದನ್ನೂ ಓದಿ: ಆರ್ ಸಿಬಿಗೆ ಆಯ್ಕೆಯಾದ ಹೊಸತರಲ್ಲಿ ಆದ ಅವಮಾನವನ್ನು ನೆನಪು ಮಾಡಿಕೊಂಡ ವಿರಾಟ್ ಕೊಹ್ಲಿ

ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಏಕದಿನ ಸರಣಿಯಲ್ಲೂ ವಿರಾಟ್ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಿರಲಿಲ್ಲ. ಮೊದಲ ಪಂದ್ಯದಲ್ಲಿ 51 ರನ್ ಗಳಿಸಿದ್ದ ಅವರು ಎರಡನೇ ಪಂದ್ಯದಲ್ಲಿ ಡಕೌಟ್ ಆಗಿದ್ದರು. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ 65 ರನ್ ಗಳಿಸಿದ್ದರು. ಈ ಸರಣಿಯಲ್ಲಿ ಕೊಹ್ಲಿ ಒಟ್ಟಾರೆ 116 ರನ್ ಬಾರಿಸಿದ್ದರು. ಈ ಸರಣಿಯಲ್ಲಿ ಭಾರತ ವೈಟ್ ವಾಶ್ ಸೋಲು ಅನುಭವಿಸಿತು.

ಕಳೆದ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿದ್ದರಿಂದ ಟೀಂ ಇಂಡಿಯಾದ ಟಿ20 ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ರಾಜಿನಾಮೆ ನೀಡಿದ್ದರು. ನಂತರ ಬಿಸಿಸಿಐ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೈಬಿಟ್ಟಿತ್ತು. ಈ ವಿಚಾರ ಬಿಸಿಸಿಐ ಹಾಗೂ ವಿರಾಟ್ ಕೊಹ್ಲಿ ನಡುವೆ ಬಹಿರಂಗವಾಗಿ ಜಟಾಪಟಿಗೆ ಕಾರಣವಾಗಿತ್ತು. 



Read more…

[wpas_products keywords=”deal of the day sports items”]