Karnataka news paper

ಗೃಹ ಸಾಲ, ಇಎಂಐ: ಆರ್‌ಬಿಐನ ಹಣಕಾಸು ನೀತಿಯಿಂದ ಜನರ ಮೇಲೆ ಪರಿಣಾಮವೇನು?


Personal Finance

|

ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುರುವಾರ ಬಡ್ಡಿದರವನ್ನು ಬದಲಾಯಿಸದೆಯೇ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ರೆಪೋ ದರ ಬದಲಾವಣೆ ಮಾಡದಿರಲು ನಿರ್ಧರಿಸಿದ ಈ ಹಿನ್ನೆಲೆ ರೆಪೋ ದರ ಶೇಕಡಾ 4ರಷ್ಟಾಗಿಯೇ ಉಳಿದುಕೊಂಡಿದೆ.

ಹಣದುಬ್ಬರ ಹೆಚ್ಚು ಇರುವ ಕಾರಣದಿಂದಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆರ್‌ಬಿಐ ನಿರ್ಧಾರ ಮಾಡಿದೆ. ಗಮನಾರ್ಹವೆಂದರೆ, ವಿತ್ತೀಯ ನೀತಿ ಸಮಿತಿಯು (MPC) ಯಥಾಸ್ಥಿತಿ ಕಾಯ್ದುಕೊಂಡಿರುವುದು ಸತತ ಹತ್ತನೇ ಬಾರಿ ಆಗಿದೆ. ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಬಜೆಟ್ 2022-23 ಮಂಡನೆ ನಂತರ ಇದು ಮೊದಲ ಹಣಕಾಸು ನೀತಿ ಸಭೆ ಆಗಿದೆ.

ಭಾರತದಲ್ಲಿ ಸತತ 10ನೇ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಪ್ರಮುಖ ನೀತಿ ದರಗಳಲ್ಲಿ ಆರ್‌ಬಿಐ ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದ, ಸಾಲಗಾರರು ತಮ್ಮ ಮನೆ, ಕಾರು ಸಾಲಗಳ ಮೇಲೆ ಕಡಿಮೆ ದರಗಳನ್ನು ಪಾವತಿಸುವುದು ಮುಂದುವರಿಯಲಿದೆ. ಆದಾಗ್ಯೂ, ಬ್ಯಾಂಕ್ ಠೇವಣಿದಾರರಿಗೆ, ಫಿಕ್ಸಿಡ್‌ ಡೆಪಾಸಿಟ್‌ಗಳ ಮೇಲಿನ ಕಡಿಮೆ ಬಡ್ಡಿದರವೂ ಹಾಗೆಯೇ ಉಳಿಯಲಿದೆ. ಹಾಗಾದರೆ ಆರ್‌ಬಿಐನ ಹಣಕಾಸು ನೀತಿಯಿಂದ ಜನರ ಮೇಲೆ ಪರಿಣಾಮವೇನು ಎಂದು ತಿಳಿಯೋಣ ಮುಂದೆ ಓದಿ.

ಗೃಹ ಸಾಲ, ಇಎಂಐ: ಆರ್‌ಬಿಐನ ಹಣಕಾಸು ನೀತಿಯಿಂದ ಜನರ ಮೇಲೆ ಪರಿಣಾಮವೇನು?

ಆರ್‌ಬಿಐನ ಹಣಕಾಸು ನೀತಿ: ಸಾಮಾನ್ಯ ಜನರ ಮೇಲೆ ಪರಿಣಾಮವೇನು?

ಗೃಹ ಸಾಲ, ಕಾರು ಇಎಂಐ: ರೆಪೋ ದರವನ್ನು ಬದಲಾಯಿಸದೆ ಇರಿಸಲು ಆರ್‌ಬಿಐ ನಿರ್ಧಾರ ಮಾಡಿದ ಹಿನ್ನೆಲೆ ಗೃಹ ಸಾಲ, ಕಾರು ಇಎಂಐ ಬಡ್ಡಿದರ ಹಾಗೆಯೇ ಇರಲಿದೆ. ಬ್ಯಾಂಕುಗಳು ತನ್ನ ರಿಸ್ಕ್ ಪ್ರೀಮಿಯಂ ಅಥವಾ ಮಾರ್ಜಿನ್ ಅನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ನಿರ್ಧರಿಸದ ಹೊರತು ಯಾವುದೇ ಬದಲಾವಣೆ ಆಗುವುದಿಲ್ಲ. ಸಾಲಗಳ ಬಡ್ಡಿದರ ಶೀಘ್ರದಲ್ಲೇ ಹೆಚ್ಚಾಗುವ ಸಾಧ್ಯತೆಯಿಲ್ಲ. ಹೊಸ ಸಾಲಗಳನ್ನು ತೆಗೆದುಕೊಳ್ಳಲು ಯೋಜಿಸುತ್ತಿರುವ ಜನರು ಈಗ ಸಾಲ ಪಡೆಯಲು ಉತ್ತಮ ಸಮಯವಾಗಿದೆ. ಹಲವಾರು ಬ್ಯಾಂಕುಗಳು ಬಡ್ಡಿದರ ಹಾಗೂ ಶುಲ್ಕದ ಮೇಲೆ ರಿಯಾಯಿತಿ ನೀಡುತ್ತಿರುವುದರಿಂದ ಉತ್ತಮ ಸಮಯವಾಗಿದೆ. ಸದ್ಯ ಗೃಹ ಸಾಲದ ಬಡ್ಡಿ ದರಗಳು ಈಗ ಶೇಕಡಾ 6.50 ರಿಂದ ಪ್ರಾರಂಭವಾಗುತ್ತವೆ ಮತ್ತು ಕಾರು ಸಾಲಗಳನ್ನು ಶೇಕಡಾ 7.20 ರಿಂದ ಪ್ರಾರಂಭವಾಗುತ್ತದೆ. ಇದಲ್ಲದೆ, ಈಗಾಗಲೇ ಬಿಪಿಎಲ್‌ಆರ್‌, ಮೂಲ ದರ, ಎಂಸಿಎಲ್‌ಆರ್‌ ಗೆ ಲಿಂಕ್ ಮಾಡಲಾದ ಮನೆ, ಕಾರು ಸಾಲಗಳನ್ನು ಹೊಂದಿರುವ ಜನರು ತಮ್ಮ ಸಾಲದ ಇಎಂಐಗಳಲ್ಲಿ ಯಾವುದೇ ಬದಲಾವಣೆಯನ್ನು ಕಾಣುವ ಸಾಧ್ಯತೆಯಿಲ್ಲ.

 ಆರ್‌ಬಿಐನ ಹಣಕಾಸು ನೀತಿಯಿಂದ ಜನರ ಮೇಲೆ ಪರಿಣಾಮವೇನು?

ಬ್ಯಾಂಕುಗಳಲ್ಲಿನ ಫಿಕ್ಸಿಡ್‌ ಠೇವಣಿ ಮೇಲಿನ ದರಗಳು: ಆರ್‌ಬಿಐ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲು ನಿರ್ಧರಿಸಿರುವುದರಿಂದ, ಯಾವುದೇ ಬ್ಯಾಂಕ್ ಫಿಕ್ಸಿಡ್‌ ಡೆಪಾಸಿಟ್‌ ದರಗಳಲ್ಲಿ ಮತ್ತಷ್ಟು ಕಡಿತವನ್ನು ಹೊಂದಿರುವುದಿಲ್ಲ. ಕೆಲವು ಬ್ಯಾಂಕುಗಳು ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ನಿರ್ದಿಷ್ಟ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌ ಮೇಲಿನ ದರಗಳನ್ನು ಬದಲಾಯಿಸಬಹುದು. ತಜ್ಞರ ಪ್ರಕಾರ ಎಫ್‌ಡಿ ದರಗಳು ಈಗಾಗಲೇ ಐತಿಹಾಸಿಕ ಕನಿಷ್ಠ ಮಟ್ಟದಲ್ಲಿವೆ. ಹೆಚ್ಚಿನ ಹಣದುಬ್ಬರದ ನಡುವೆ ಎಫ್‌ಡಿ ದರಗಳಲ್ಲಿ ಯಾವುದೇ ಹೆಚ್ಚಿನ ಕಡಿತ ಸಾಧ್ಯವಾಗದೆ ಇರಬಹುದು. ಜನರು ಇದೀಗ ಎಫ್‌ಡಿಯನ್ನು ಫಿಕ್ಸಿಡ್‌ ಡೆಪಾಸಿಟ್‌ ಮಾಡಲು ನಿರ್ಧಾರ ಮಾಡಿದ್ದರೆ ಅಥವಾ ಅಥವಾ ಅಸ್ತಿತ್ವದಲ್ಲಿರುವ ಎಫ್‌ಡಿಯನ್ನು ರಿನಿವಲ್‌ ಮಾಡಲು ನಿರ್ಧಾರ ಮಾಡಿದ್ದರೆ, ಅಲ್ಪಾವಧಿಯ ಠೇವಣಿ ಮಾಡುವುದು ಉತ್ತಮ ಆಯ್ಕೆಯಾಗಿದೆ.

ನೆಟ್ ಬ್ಯಾಂಕಿಂಗ್ ಮೂಲಕ ಎಚ್‌ಡಿಎಫ್‌ಸಿ CIF ಸಂಖ್ಯೆ ಪಡೆಯುವುದು ಹೇಗೆ?

10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿ

ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ರೆಪೋ ದರ ಬದಲಾವಣೆ ಮಾಡದಿರಲು ನಿರ್ಧರಿಸಿದ ಈ ಹಿನ್ನೆಲೆ ರೆಪೋ ದರ ಶೇಕಡಾ 4ರಷ್ಟಾಗಿಯೇ ಉಳಿದುಕೊಂಡಿದೆ. ದೇಶದ ಆರ್ಥಿಕತೆಯು ಕೊಂಚ ಚೇತರಿಕೆಯ ಲಕ್ಷಣ ಕಂಡು ಬಂದರೂ ರೆಪೋ ದರವನ್ನು ಬದಲಾವಣೆ ಮಾಡದಿರಲು ಆರ್‌ಬಿಐ ತೀರ್ಮಾನಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸತತ 10ನೇ ಬಾರಿ ಯಥಾಸ್ಥಿತಿ ಕಾಯ್ದುಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸಿದೆ. ಮೇ 2020 ರಲ್ಲಿ, ಬಡ್ಡಿದರವನ್ನು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕಡಿತಗೊಳಿಸುವ ಮೂಲಕ ಬೇಡಿಕೆ ಹೆಚ್ಚಿಸಲು ಕೇಂದ್ರ ಬ್ಯಾಂಕ್ ತನ್ನ ಪಾಲಿಸಿ ರೆಪೋ ದರ ಅಥವಾ ಅಲ್ಪಾವಧಿಯ ಸಾಲದ ದರವನ್ನು ಪರಿಷ್ಕರಿಸಿತ್ತು.

English summary

How Will RBI’s Monetary Policy Impact Common Man, Explained Here

How Will RBI’s Monetary Policy Impact Common Man, Explained Here.

Story first published: Thursday, February 10, 2022, 22:53 [IST]



Read more…

[wpas_products keywords=”deal of the day”]