Online Desk
ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ಮತ್ತು ಯಾನ ಸಿನಿಮಾದ ಚಕ್ರವರ್ತಿ ನಟನೆಯ ಭಾವಚಿತ್ರ ಸಿನಿಮಾ ಫೆಬ್ರವರಿ 18 ರಂದು ರಿಲೀಸ್ ಆಗಲಿದೆ.
ಗಿರೀಶ್ ಕುಮಾರ್ ಬಿ ನಿರ್ದೇಶಿಸಿದ, ಭಾವ ಚಿತ್ರ ಸಿನಿಮಾ ಟೆಕ್ನೋ-ಥ್ರಿಲ್ಲರ್ ಮತ್ತು ಹವ್ಯಾಸಿ ಛಾಯಾಗ್ರಾಹಕನ ಪ್ರಯಾಣದ ಕಥೆ ಆಧರಿಸಿದ ಚಲನಚಿತ್ರವಾಗಿದೆ.
ಗಾನವಿ ಲಕ್ಷ್ಮಣ್ ಅವರು ಭಾವ ಚಿತ್ರ ಸಿನಿಮಾದೊಂದಿಗೆ ಕನ್ನಡ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ನಿರ್ಧರಿಸಿದ್ದರು, ಆದರೆ ಅದಕ್ಕೂ ಮೊದಲು ಹೀರೋ ಸಿನಿಮಾ ರಿಲೀಸ್ ಆಗಿತ್ತು.
ಇದನ್ನೂ ಓದಿ: ‘ಭಾವಚಿತ್ರ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಗಾನವಿ ಲಕ್ಷ್ಮಣ್, ಚಕ್ರವರ್ತಿ
ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು, ಭಾವ ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ ಮತ್ತು ಅಜಯ್ ಕುಮಾರ್ ಅವರ ಛಾಯಾಗ್ರಹಣವಿದೆ.ಮಗಳು ಜಾನಕಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಗಾನವಿ ಲಕ್ಷ್ಮಣ್ ಅವರು ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟಿದ್ದಾರೆ. ಶಿವರಾಜಕುಮಾರ್ ಅವರ ವೇದಾ ಸಿನಿಮಾದಲ್ಲಿ ಅವರು ಮಹಿಳಾ ನಾಯಕಿಯಾಗಿ ನಟಿಸಿದ್ದಾರೆ.
Read more…
[wpas_products keywords=”party wear dress for women stylish indian”]