Karnataka news paper

‘ಲವ್ ಮಾಕ್‌ಟೇಲ್’ ಸಿನಿಮಾ ಯಾಕೆ ಹಿಟ್ ಆಯ್ತು? ರವಿಚಂದ್ರನ್ ನೀಡಿದ ವ್ಯಾಖ್ಯಾನ ಇಲ್ಲಿದೆ!


2020ರಲ್ಲಿ ತೆರೆಕಂಡ ‘ಲವ್ ಮಾಕ್‌ಟೇಲ್‌’ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ‘ಡಾರ್ಲಿಂಗ್’ ಕೃಷ್ಣ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ಮಿಲನಾ ನಾಗರಾಜ್ ನಿರ್ಮಾಣ ಮಾಡಿದ್ದರು. ಇಬ್ಬರಿಗೂ ಸಿನಿಮಾದಿಂದ ಸಖತ್ ಜನಪ್ರಿಯತೆ ಸಿಕ್ಕಿತ್ತು. ಇದೀಗ ಈ ಜೋಡಿ ‘ಲವ್ ಮಾಕ್‌ಟೇಲ್‌ 2’ ಜೊತೆಗೆ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ಫೆ.11ರಂದು ಸಿನಿಮಾ ತೆರೆಗೆ ಬರಲಿದ್ದು, ಅದಕ್ಕೂ ಮುನ್ನ ಪ್ರೀ-ರಿಲೀಸ್ ಇವೆಂಟ್ ಮಾಡಿ ಸಂಭ್ರಮಿಸಿದೆ ಚಿತ್ರತಂಡ. ವಿಶೇಷವೆಂದರೆ, ಈ ಕಾರ್ಯಕ್ರಮಕ್ಕೆ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು ‘ಲವ್ ಮಾಕ್‌ಟೇಲ್’ ಯಾಕೆ ಹಿಟ್ ಆಯ್ತು ಅನ್ನೋದನ್ನು ಹೇಳಿದ್ದಾರೆ.

‘ಲವ್ ಮಾಕ್‌ಟೇಲ್’ ಯಾಕೆ ಹಿಟ್ ಆಯ್ತು?
ಡಾರ್ಲಿಂಗ್ ಕೃಷ್ಣ ಮಾಡಿದ್ದ ‘ಲವ್ ಮಾಕ್‌ಟೇಲ್’ ಸಿನಿಮಾದ ಯಾಕೆ ಹಿಟ್ ಆಯ್ತು? ಯಾಕೆ ಹಿಟ್ ಆಯಿತೆಂದರೆ, ಒಬ್ಬ ಲವರ್ (‘ಡಾರ್ಲಿಂಗ್’ ಕೃಷ್ಣ) ತನ್ನ ಲವರ್‌ಗೋಸ್ಕರ (ಮಿಲನಾ) ಮಾಡಿದ ಸಿನಿಮಾ ಅದು. ಹಾಗಾಗಿ, ಆ ಸಿನಿಮಾ ಸಕ್ಸಸ್ ಆಗಲೇಬೇಕು, ಆಗಿದೆ ಕೂಡ. ಆಮೇಲೆ ನಮಗೆ ಗೊತ್ತೋ ಗೊತ್ತಿಲ್ಲದೆಯೋ, ಕೆಲವೊಂದು ಹೆಸರುಗಳನ್ನು, ಪದಗಳನ್ನು ಬಳಸಲು ಆರಂಭಿಸುತ್ತೇವೆ. ‘ಲವ್ ಮಾಕ್‌ಟೇಲ್‌’ನಲ್ಲಿ ಮಿಲನಾಗೆ ನಿಧಿ ಅಂತ ಹೆಸರಿಟ್ಟಿದ್ದರು. ಸಿನಿಮಾದಿಂದ ನಿಧಿಯೇ ಸಿಕ್ಕಿದೆ ಅವರಿಗೆ. ಇದೆಲ್ಲ ಕಾಕತಾಳೀಯ’ ಎಂದು ರವಿಚಂದ್ರನ್ ಹೇಳಿದರು.

ಫೆ.11ರಂದು ಸಿನಿಮಾ ತೆರೆಕಾಣುತ್ತಿದ್ದು, ಅದಕ್ಕೂ ಮೊದಲೇ ಪ್ರೀಮಿಯರ್ ಶೋ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಈಗಾಗಲೇ ಪ್ರೀಮಿಯರ್ ಶೋ ಬುಕ್ಕಿಂಗ್ ಕೂಡ ಭರ್ತಿಯಾಗಿರುವುದು ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ‘ಈ ಸಿನಿಮಾದ ಟ್ರೇಲರ್‌ಗೆ ಜನರು ತೋರಿಸುತ್ತಿರುವ ಪ್ರೀತಿ ಕಂಡು ನನಗೆ ಖುಷಿಯಾಗಿದೆ. ಟ್ರೇಲರ್‌ ಅನ್ನೇ ಇಷ್ಟು ಪ್ರೀತಿಯಿಂದ ನೋಡುತ್ತಿರುವ ಜನರು ಸಿನಿಮಾವನ್ನೂ ನೋಡುತ್ತಾರೆ ಎಂಬ ನಂಬಿಕೆ ನನಗಿದೆ. ಈ ಸಿನಿಮಾದ ಕಥೆ ಭಾವನಾತ್ಮಕವಾಗಿ ಸಾಗುತ್ತದೆ’ ಎನ್ನುತ್ತಾರೆ ‘ಡಾರ್ಲಿಂಗ್’ ಕೃಷ್ಣ.

‘ಲವ್ ಮಾಕ್‌ಟೇಲ್ 2’ ಟ್ರೇಲರ್ ರಿಲೀಸ್; ಮತ್ತೆ ಮದುವೆಯಾಗೋಕೆ ರೆಡಿಯಾದ ಆದಿ!

ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿದ್ದು, ನಕುಲ್‌ ಅಭಯಂಕರ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಶ್ರೀ ಕ್ರೇಜಿಮೈಂಡ್ಸ್‌ ಈ ಸಿನಿಮಾದ ಛಾಯಾಗ್ರಹಣ ಮತ್ತು ಸಂಕಲನವನ್ನು ಮಾಡಿದ್ದಾರೆ. ಮೊದಲ ಭಾಗದಲ್ಲಿದ್ದ ಅಮೃತಾ ಅಯ್ಯಂಗಾರ್‌, ರಚನಾ ಇಂದರ್‌, ಅಭಿಷೇಕ್, ಖುಷಿ ಇಲ್ಲಿಯೂ ಮುಂದುವರಿದಿದ್ದಾರೆ. ಅವರೊಂದಿಗೆ ರೇಚಲ್‌ ಡೇವಿಡ್‌, ಸುಷ್ಮಿತಾ, ಗಿರಿ ಶಿವಣ್ಣ ಮುಂತಾದವರ ಸೇರ್ಪಡೆಯಾಗಿದೆ. ವಿಶೇಷವೆಂದರೆ, ಮಿಲನಾ ನಾಗರಾಜ್‌ ಕೂಡ ಪಾರ್ಟ್ 2ರಲ್ಲಿ ನಟಿಸಿದ್ದು, ಫ್ಲ್ಯಾಶ್‌ ಬ್ಯಾಕ್‌ನ ಕೆಲವು ದೃಶ್ಯಗಳಲ್ಲಿಅವರು ಬಂದು ಹೋಗುತ್ತಾರೆ. ಬೆಂಗಳೂರು, ಮಡಿಕೇರಿ, ಲಡಾಕ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ.

‘ಲವ್ ಮಾಕ್ಟೇಲ್ 2’ರಲ್ಲಿ ರಘು ದೀಕ್ಷಿತ್ ಸಂಗೀತ ಇರಲ್ಲ; ಆರೋಪಗಳಿಗೆ ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯೆ



Read more

[wpas_products keywords=”deal of the day sale today offer all”]