ಟೂರ್ನಿಯ ಮೊದಲ ಹಂತದಲ್ಲಿ ಲೀಗ್ ಪಂದ್ಯಗಳು ಫೆಬ್ರವರಿ 10ರಿಂದ ಮಾರ್ಚ್ 15ರವರೆಗೆ ನಡೆಯಲಿದ್ದು, ಎರಡನೇ ಹಂತದಲ್ಲಿ ನಾಕ್‌ಔಟ್ ಪಂದ್ಯಗಳನ್ನು ಮೇ 30ರಿಂದ ಜೂನ್ 26ರವರೆಗೆ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಮಾರ್ಚ್-ಮೇ ಅವಧಿಯಲ್ಲಿ ಐಪಿಎಲ್ 2022 ಟೂರ್ನಿ ಆಯೋಜನೆ ಆಗಲಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಟ್ವಿಟರ್ ಮೂಲಕ ತಂಡವನ್ನು ಘೋಷಿಸಿದ್ದು, ಮನೀಶ್ ಪಾಂಡೆ ಜೊತೆಗೆ ಅನುಭವಿ ಬ್ಯಾಟ್ಸ್‌ಮನ್ ಆರ್ ಸಮರ್ಥ್ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಿದೆ. ತಂಡದಲ್ಲಿ ಕರುಣ್ ನಾಯರ್, ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್ ಮತ್ತು ಪ್ರಸಿಧ್ ಕೃಷ್ಣ ಅವರಂತಹ ಸ್ಟಾರ್‌ಗಳು ಇದ್ದಾರೆ.
ರಾಹುಲ್ ಆಗಮನ ; 2ನೇ ಓಡಿಐಗೆ ಭಾರತದಲ್ಲಿ ಒಂದು ಬದಲಾವಣೆ!
ಕರ್ನಾಟಕ ತಂಡ ಟೂರ್ನಿಯ ಎಲೈಟ್ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಪುದುಚೆರಿ, ರೈಲ್ವೇಸ್ ಮತ್ತು ಜಮ್ಮು-ಕಾಶ್ಮೀರ ವಿರುದ್ಧ ಪೈಪೋಟಿ ನಡೆಸಲಿದೆ. ಕರ್ನಾಟಕ ತನ್ನ ಲೀಗ್ ಪಂದ್ಯಗಳನ್ನು ತಮಿಳುನಾಡಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ನಾಕ್‌ಔಟ್ ಹಂತಕ್ಕೇರಲಿದೆ. ಕರ್ನಾಟಕ ತಂಡ 2014-15ರಲ್ಲಿ ಕೊನೆಯ ಬಾರಿ ಟ್ರೋಫಿ ಗೆದ್ದಿದ್ದು, ನಂತರ ಪ್ರಶಸ್ತಿ ಬರ ಎದುರಿಸಿದೆ.
2022ರ ಸಾಲಿನ ರಣಜಿ ಟ್ರೋಫಿಗೆ ಕರ್ನಾಟಕ ತಂಡ ಹೀಗಿದೆ
1. ಮನೀಶ್ ಪಾಂಡೆ (ನಾಯಕ/ ಬ್ಯಾಟ್ಸ್‌ಮನ್)
2. ಮಯಾಂಕ್ ಅಗರ್ವಾಲ್ (ಬ್ಯಾಟ್ಸ್‌ಮನ್)
3. ಸಮರ್ಥ್ ಆರ್. (ಬ್ಯಾಟ್ಸ್‌ಮನ್/ ಉಪನಾಯಕ)
4. ಕರುಣ್ ನಾಯರ್ (ಬ್ಯಾಟ್ಸ್‌ಮನ್)
5. ದೇವದತ್ ಪಡಿಕ್ಕಲ್ (ಬ್ಯಾಟ್ಸ್‌ಮನ್)
6. ಸಿದ್ಧಾರ್ಥ್ ಕೆವಿ (ಬ್ಯಾಟ್ಸ್‌ಮನ್)
7. ಡಿ. ನಿಶ್ಚಲ್ (ಬ್ಯಾಟ್ಸ್‌ಮನ್)
8. ಅನೀಶ್ವರ್ ಗೌತಮ್ (ಆಲ್‌ರೌಂಡರ್)
9. ಶುಭಾಂಗ್ ಹೆಗ್ಡೆ (ಆಲ್‌ರೌಂಡರ್)
10. ಕೆ. ಗೌತಮ್ (ಆಲ್‌ರೌಂಡರ್)
11. ಶ್ರೇಯಸ್ ಗೋಪಾಲ್ (ಆಲ್‌ರೌಂಡರ್)
12. ಜೆ. ಸುಚಿತ್ (ಆಲ್‌ರೌಂಡರ್)
13. ಕೆ.ಸಿ. ಕಾರಿಯಪ್ಪ (ಬೌಲರ್)
14. ಶರತ್ ಶ್ರೀನಿವಾಸ್ (ವಿಕೆಟ್‌ಕೀಪರ್/ ಬ್ಯಾಟ್ಸ್‌ಮನ್)
15. ಬಿ.ಆರ್. ಶರತ್ (ವಿಕೆಟ್‌ಕೀಪರ್/ ಬ್ಯಾಟ್ಸ್‌ಮನ್)
16. ಪ್ರಸಿಧ್ ಕೃಷ್ಣ (ಬೌಲರ್)
17. ರೋನಿತ್ ಮೋರೆ (ಬೌಲರ್)
18. ವೆಂಕಟೇಶ್ ಎಂ. (ಬೌಲರ್)
19. ವೈಶಾಕ್ ವಿಜಯ್‌ಕುಮಾರ್ (ಬೌಲರ್)
20. ವಿದ್ಯಾಧರ್ ಪಾಟಿಲ್ (ಬೌಲರ್)
ರಣಜಿ ಟ್ರೋಫಿ ಕ್ರಿಕೆಟ್‌ನಿಂದ ಹಿಂದೆ ಸರಿದ ಹಾರ್ದಿಕ್ ಪಾಂಡ್ಯ!
ಕರ್ನಾಟಕ ತಂಡದ ಕೋಚಿಂಗ್ ಬಳಗ ಮತ್ತು ಸಹಾಯಕ ಸಿಬ್ಬಂದಿ
- ಮುಖ್ಯ ಕೋಚ್: ಯರೇ ಗೌಡ
- ಬೌಲಿಂಗ್ ಕೋಚ್: ಶ್ರೀನಾಥ್ ಅರವಿಂದ್
- ಫೀಲ್ಡಿಂಗ್ ಕೋಚ್: ದೀಪಕ್ ಚೌಗುಲೆ
- ಫಿಸಿಯೋಥೆರಪಿಸ್ಟ್: ಜಾಬ ಪ್ರಭು
- ಫಿಸಿಯೋಥೆರಪಿಸ್ಟ್: ಎಚ್.ಎಸ್ ಗೌತಮ್
- ಸ್ಟ್ರೆಂತ್-ಕಂಡೀಷನಿಂಗ್ ಕೋಚ್: ಎ.ಟಿ. ರಾಜಮಣಿ ಪ್ರಭು
- ಮಸಾಜರ್: ಸಿ.ಎಂ ಸೋಮಸುಂದರ್
- ಮಸಾಜರ್: ಅನುತೋಶ್ ಪಾಲ್
- ವಿಡಿಯೋ ಅನಾಲಿಸ್ಟ್: ಎಂ.ಎಸ್. ವಿನೋದ್ ಕುಮಾರ್
Read more
[wpas_products keywords=”deal of the day gym”]