
ಹೌದು, ಏರ್ಟೆಲ್ ಭಾರತದಲ್ಲಿ ಐದು ವರ್ಷಗಳ ಅವಧಿಯಲ್ಲಿ ಭಾರತದಲ್ಲಿನ ತನ್ನ ವಿವಿಧ ಅಂಗಸಂಸ್ಥೆಗಳಲ್ಲಿ 1.17 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಯೋಜಿಸುತ್ತಿದೆ. ಏರ್ಟೆಲ್ ಕಂಪನಿಯು ತನ್ನ ಅಂಗಸಂಸ್ಥೆಗಳಾದ ಇಂಡಸ್ ಟವರ್ಸ್, Nxtra ಮತ್ತು ಭಾರ್ತಿ ಹೆಕ್ಸಾಕಾಮ್ನೊಂದಿಗೆ ವ್ಯಾಪಾರ ವಹಿವಾಟಿನ ಮೂಲಕ ಮೊತ್ತವನ್ನು ಹೂಡಿಕೆ ಮಾಡಲು ಯೋಜಿಸುತ್ತಿದೆ. ಇದರೊಂದಿಗೆ ತನ್ನ ಸೇವೆಗಳನ್ನು ಇನ್ನಷ್ಟು ಬಲಪಡಿಸಲು ಹೊಸ ಪ್ಲಾನ್ ರೂಪಿಸುತ್ತಿದೆ ಎನ್ನಲಾಗಿದೆ. ಹಾಗಾದ್ರೆ ಏರ್ಟೆಲ್ ಭಾರತದಲ್ಲಿ ಯಾವೆಲ್ಲಾ ಕ್ಷೇತ್ರದಲ್ಲಿ ಹೊಸ ಹೂಡಿಕೆ ಮಾಡುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ದೇಶದ ಪ್ರಮುಖ ಟೆಲಿಕಾಂ ಕಂಪೆನಿ ಎನಿಸಿಕೊಂಡಿರುವ ಭಾರ್ತಿ ಏರ್ಟೆಲ್ ಇಂಡಸ್ ಟವರ್ಸ್ನೊಂದಿಗೆ 88,000 ಕೋಟಿ ವಹಿವಾಟು ನಡೆಸಲಿದೆ. ಡೇಟಾ ಸೆಂಟರ್ ಸಂಸ್ಥೆ ಎನ್ಎಕ್ಸ್ಟ್ರಾದ ಸೇವೆಗಳನ್ನು ಪಡೆಯಲು 15,000ರೂ. ಕೋಟಿ ಮತ್ತು ಸೆಲ್ಯುಲಾರ್ ಸೇವೆ, ಬ್ರಾಡ್ಬ್ಯಾಂಡ್ ಸೇವೆ ಮತ್ತು ಟೆಲಿಕಾಂ ಸೇವೆಯನ್ನು ಒದಗಿಸುವ ಭಾರ್ತಿ ಹೆಕ್ಸಾಕಾಮ್ನೊಂದಿಗೆ 14,000ರೂ. ಕೋಟಿಗಳಷ್ಟು ವಹಿವಾಟು ನಡೆಸಲಿದೆ. ಇದಲ್ಲದೆ, ಏರ್ಟೆಲ್ ಮುಂದಿನ ನಾಲ್ಕು ಹಣಕಾಸು ವರ್ಷಗಳ ಅವಧಿಯಲ್ಲಿ ಇಂಡಸ್ ಟವರ್ಸ್ನಲ್ಲಿ 17,000 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಲಿದೆ. ಹಾಗೆಯೇ 2025-26 ರಲ್ಲಿ 20,000 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ.

ಇನ್ನು ಈ ಹೂಡಿಕೆಗಳು ಏರ್ಟೆಲ್ ಕಂಪೆನಿಯ ಮೂಲಸೌಕರ್ಯವನ್ನು ಬಲಪಡಿಸಲು ಸಹಾಯ ಮಾಡಲಿದೆ. ಜೊತೆಗೆ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ 5G ಸೇವೆಗಳ ರೋಲ್ಔಟ್ಗೆ ಈ ಹೂಡಿಕೆ ಸಹಾಯ ಮಾಡುತ್ತದೆ ಎನ್ನಲಾಗಿದೆ. ಜಾಗತಿಕವಾಗಿ 5G ಬೆಳವಣಿಗೆಗಳನ್ನು ಗಮನಿಸಿದರೆ ಭಾರತದಲ್ಲಿಯೂ ಕೂಡ 5G ನೆಟ್ವರ್ಕ್ ನಿಧಾನವಾಗಿ ಪ್ರಮುಖ ನಗರಗಳಲ್ಲಿ ಲಭ್ಯವಾಗಲಿದೆ. ನಂತರ ನಮ್ಮ ಪ್ರಸ್ತುತ ನೆಟ್ವರ್ಕ್ನ ಉದ್ದ ಮತ್ತು ಅಗಲದಲ್ಲಿ ಭಾರತದ ಉಳಿದ ಭಾಗಗಳಿಗೆ ರಿಯಾಲಿಟಿ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರಿಂದ ಬೃಹತ್ 5G ರೋಲ್ಔಟ್ಗಳ ಸಮಯದಲ್ಲಿ ನಿಷ್ಕ್ರಿಯ ಮೂಲಸೌಕರ್ಯದ ಹೆಚ್ಚಿದ ಅಗತ್ಯತೆಗಳನ್ನು ಪರಿಗಣಿಸಿ, ಕಂಪನಿಯು 2025-26 ರ FY ಗಾಗಿ ಇಂಡಸ್ ಟವರ್ಸ್ನೊಂದಿಗೆ ವಾರ್ಷಿಕ 20,000 ಕೋಟಿ ರೂಪಾಯಿಗಳವರೆಗಿನ ಹೆಚ್ಚಿನ ಮೊತ್ತದ ವಹಿವಾಟುಗಳನ್ನು ನಡೆಸಲು ಏರ್ಟೆಲ್ ಪ್ಲಾನ್ ಮಾಡಿದೆ.

ಸದ್ಯ ದೇಶದಲ್ಲಿ 5G ನೆಟ್ವರ್ಕ್ ಸಂಬಂಧಿತ ಕೆಲಸ ಕಾರ್ಯಗಳು ನಡೆಯುತ್ತಿವೆ. ಇದರ ನಡುವೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ವೇಳೆ 5G ಸ್ಪೆಕ್ಟ್ರಮ್ ಹರಾಜು ಈ ವರ್ಷ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಭಾರತದಲ್ಲಿ 5G ಸೇವೆಗಳ ನಿಯೋಜನೆಯು 2022-23 ಹಣಕಾಸು ವರ್ಷದಲ್ಲಿ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ. ಇದರಿಂದ ಏರ್ಟೆಲ್ ಭಾರತದಲ್ಲಿ 5Gಗಾಗಿ ಸಾಖಷ್ಟು ಸಿದ್ಧತೆ ನಡೆಸುತ್ತಿದೆ. ಇದರ ಜೊತೆಗೆ, ಏರ್ಟೆಲ್ ಇದೇ ಫೆಬ್ರವರಿ 26 ರಂದು ಸಾಮಾನ್ಯ ಸಭೆಯನ್ನು ನಡೆಸಲಿದ್ದು, ಈ ಸಮಯದಲ್ಲಿ ಸುಮಾರು 7,500 ಕೋಟಿ ರೂಪಾಯಿಗಳ ಹೂಡಿಕೆಗೆ ಕಂಪನಿಯ 1.28% ಪಾಲನ್ನು ಗೂಗಲ್ಗೆ ನೀಡಲು ಅನುಮೋದನೆ ಪಡೆಯಲಿದೆ ಎನ್ನಲಾಗಿದೆ.
Read more…
[wpas_products keywords=”smartphones under 15000 6gb ram”]