ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೆಬ್‌ಸೈಟ್ ಭಾನುವಾರ ಮೋದಿ ಮತ್ತು ಲತಾ ಮಂಗೇಶ್ಕರ್ ಅವರ ನಡುವಿನ ಬಾಂಧವ್ಯವನ್ನು ಮೆಲುಕು ಹಾಕಿದೆ.
‘ಮೋದಿ ಅವರ ಮೇಲೆ ಲತಾ ಅವರಿಗೆ ಅಪಾರವಾದ ಪ್ರೀತಿ ಇತ್ತು. ಇಬ್ಬರೂ ಒಂದೇ ತಿಂಗಳಲ್ಲಿ ಜನಿಸಿದ್ದನ್ನು ಗಮನಿಸಿದ್ದ ಲತಾ, ‘ನರೇಂದ್ರ ಭಾಯ್’ ಎಂದು ಸಂಬೋಧಿಸುತ್ತಿದ್ದರು’ ಎಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
2013ರಲ್ಲಿ ಪುಣೆಯಲ್ಲಿ ತಮ್ಮ ತಂದೆ ದೀನನಾಥ್ ಮಂಗೇಶ್ಕರ್ ಅವರ ನೆನಪಿಗಾಗಿ ನಿರ್ಮಿಸಲಾದ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಲು ಲತಾ ಮತ್ತು ಅವರ ಕುಟುಂಬದವರು ಮೋದಿ ಅವರನ್ನು ಆಹ್ವಾನಿಸಿದ್ದರು. ಆಗ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ಲತಾ ಅವರು, ‘ನರೇಂದ್ರ ಭಾಯಿ ಅವರನ್ನು ಪ್ರಧಾನಿಯಾಗಿ ನೋಡಬೇಕೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದರು. ಈ ಮಾತುಗಳನ್ನು ನೆನಪಿಸಿಕೊಂಡಿರುವ ವೆಬ್‌ಸೈಟ್, ‘ಲತಾ ದೀದಿ 2014ರ ಚುನಾವಣೆಗೆ ಮುಂಚೆಯೇ ಇದನ್ನು ಹೇಳಿದ್ದರು’ ಎಂದು ತಿಳಿಸಿದೆ. ಈ ಕಾರ್ಯಕ್ರಮದ ವಿಡಿಯೊ ಕ್ಲಿಪ್ ಅನ್ನೂ ಹಂಚಿಕೊಳ್ಳಲಾಗಿದೆ.
‘ತಮ್ಮ ಅಮೆರಿಕ ಪ್ರವಾಸಕ್ಕೆ ತೆರಳುವ ಮುನ್ನ ಲತಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಪ್ರಧಾನಿ ಅವರು ತಮ್ಮ ‘ಮನ್ ಕಿ ಬಾತ್’ನಲ್ಲಿ ಇಬ್ಬರ ನಡುವಿನ ಬಾಂಧವ್ಯವನ್ನು ಹಂಚಿಕೊಂಡಿದ್ದರು. ದೀದಿ ಅವರನ್ನು ಭೇಟಿ ಮಾಡಿದಾಗಲೆಲ್ಲ ಅವರು ಗುಜರಾತಿ ಭಕ್ಷ್ಯಗಳನ್ನು ಬಡಿಸಿ ಹೇಗೆ ಉಪಚರಿಸುತ್ತಿದ್ದರು ಎಂಬುದನ್ನು ಸ್ಮರಿಸಿಕೊಂಡಿದ್ದರು’ ಎಂದೂ ಪ್ರಧಾನಿ ಅವರ ವೆಬ್‌ಸೈಟ್ ಉಲ್ಲೇಖಿಸಿದೆ.
ಇವನ್ನೂ ಓದಿ…
ಲತಾ ದೀದಿ ನಿಧನ: ಶಿವಾಜಿ ಪಾರ್ಕ್ನಲ್ಲಿ ಇಂದು ಸಂಜೆ ಅಂತಿಮ ಸಂಸ್ಕಾರ
ನೆಹರೂ ಕಣ್ಣಲ್ಲಿ ಕಂಬನಿ ತರಿಸಿದ ಲತಾ ಹಾಡಿದ ‘ಏ ಮೇರೆ ವತನ್ ಕೇ ಲೋಗೋ’
Read More…Source link
[wpas_products keywords=”deal of the day party wear for men wedding shirt”]