Karnataka news paper

2023ರೊಳಗೆ ಬರಲಿದೆ ಡಿಜಿಟಲ್ ರೂಪಾಯಿ! ಫಿಯಟ್‌ ಕರೆನ್ಸಿಗಿಂತ ಇದು ಹೇಗೆ ಭಿನ್ನ!


ಹೊಸದಿಲ್ಲಿ: ಭಾರತ ಸರಕಾರ ತನ್ನದೇ ಅಧಿಕೃತ ಡಿಜಿಟಲ್ ಕರೆನ್ಸಿ (Digital Rupee)ಯನ್ನು 2023ರೊಳಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಬಿಡುಗಡೆ ಮಾಡಲಿರುವ ಡಿಜಿಟಲ್‌ ರೂಪಾಯಿ ಕೂಡ ಪ್ರಸ್ತುತ ಖಾಸಗಿ ಕಂಪನಿಗಳಿಂದ ಲಭ್ಯವಿರುವ ಎಲೆಕ್ಟ್ರಾನಿಕ್ ವ್ಯಾಲೆಟ್‌ನಂತೆಯೇ ಇರಲಿದೆ. ಆದರೆ ಆರ್‌ಬಿಐ ಬೆಂಬಲಿದೆ ಡಿಜಿಟಲ್‌ ರೂಪಾಯಿದೆ ದೇಶದ ಅಧಿಕೃತ ಕರೆನ್ಸಿಯ ಮಾನ್ಯತೆ ಇರಲಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)2022-23ರ ಕೇಂದ್ರ ಬಜೆಟ್‌ನಲ್ಲಿ “ಕೇಂದ್ರ ಬ್ಯಾಂಕ್ ಬೆಂಬಲಿತ ‘ಡಿಜಿಟಲ್ ರೂಪಾಯಿ’ ಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು” ಎಂದು ಘೋಷಿಸಿದ್ದರು.

ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ಡಿಜಿಟಲ್ ಕರೆನ್ಸಿಯು ಪ್ರಸ್ತುತ ಚಲಾವಣೆಯಲ್ಲಿರುವ ‘ಫಿಯಟ್‌’ (ಭೌತಿಕ) ಕರೆನ್ಸಿಯಂತೆಯೇ ವಿಶಿಷ್ಟ ಅಂಕಿಗಳನ್ನು ಹೊಂದಿರುತ್ತದೆ. ಇದು ‘ಫಿಯಟ್’ ಕರೆನ್ಸಿಗಿಂತ ಭಿನ್ನವಾಗಿರುವುದಿಲ್ಲ. ಮೌಲ್ಯದಲ್ಲಿ ಕೂಡ ಫಿಯಟ್‌ ಕರೆನ್ಸಿ ಮತ್ತು ಡಿಜಿಟಲ್‌ ರೂಪಾಯಿ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದು ಪ್ರಸ್ತುತ ಕರೆನ್ಸಿಯ ಡಿಜಿಟಲ್ ರೂಪವಾಗಿರುತ್ತದೆ ಅಷ್ಟೇ. ಫಿಯೆಟ್ ಕರೆನ್ಸಿಯನ್ನು ಸರ್ಕಾರವು ಹೇಗೆ ಅಧಿಕೃತವಾಗಿ ಟಂಕಿಸುತ್ತದೆಯೋ, ಹಾಗೆಯೇ ಡಿಜಿಟಲ್ ರೂಪಾಯಿ ಕೂಡ ಸರ್ಕಾರದಿಂದ ಖಾತರಿಪಡಿಸಿದ ಡಿಜಿಟಲ್ ವ್ಯಾಲೆಟ್ ಎಂದು ಹೇಳಬಹುದು.

Digital Currency: ಫಿನ್‌ಟೆಕ್ ಕ್ರಾಂತಿಗೆ ನಾಂದಿ ಹಾಡಲಿದೆ ಡಿಜಿಟಲ್‌ ರೂಪಾಯಿ – ಪ್ರಧಾನಿ ಮೋದಿ

ಡಿಜಿಟಲ್‌ ರೂಪಾಯಿಯ ವಹಿವಾಟುಗಳನ್ನು ಟ್ರ್ಯಾಕ್ ಮಾಡುವುದು ಹೇಗೆ?
2023ರ ಆರ್ಥಿಕ ವರ್ಷದ ಅಂತ್ಯದೊಳಗೆ ಡಿಜಿಟಲ್ ರೂಪಾಯಿ ಸಿದ್ಧವಾಗಲಿದೆ ಎಂದು ಆರ್‌ಬಿಐ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ರಿಸರ್ವ್ ಬ್ಯಾಂಕ್ ಅಭಿವೃದ್ಧಿಪಡಿಸಿರುವ ಡಿಜಿಟಲ್ ರೂಪಾಯಿ ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರಿತವಾಗಿದ್ದು, ಎಲ್ಲಾ ರೀತಿಯ ವಹಿವಾಟುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಪ್ರಸ್ತುತ ಖಾಸಗಿ ಕಂಪನಿಗಳ ಮೊಬೈಲ್ ವ್ಯಾಲೆಟ್‌ಗಳಲ್ಲಿ ಈ ವ್ಯವಸ್ಥೆ ಇಲ್ಲ. ಇದನ್ನು ವಿವರಿಸಿದ ಮೂಲಗಳು, ಪ್ರಸ್ತುತ ಜನರು ಖಾಸಗಿ ಕಂಪನಿಗಳ ಎಲೆಕ್ಟ್ರಾನಿಕ್ ವ್ಯಾಲೆಟ್‌ಗಳನ್ನು ಬಳಸಿ ಖಾಸಗಿ ಕಂಪನಿಗಳಿಗೆ ಹಣ ವರ್ಗಾಯಿಸುತ್ತಾರೆ. ಈ ಹಣವು ಕಂಪನಿ ಅಥವಾ ಎಕ್ಸ್‌ಚೇಂಜ್‌ ಬಳಿಯೇ ಇರುತ್ತದೆ ಮತ್ತು ಈ ಕಂಪನಿಗಳು ಗ್ರಾಹಕರ ಪರವಾಗಿ ಯಾವುದೇ ವಹಿವಾಟಿನ ಮೇಲೆ ಪಾವತಿ ಮಾಡುತ್ತವೆ.

ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯಲು ಆರ್‌ಬಿಐ ಅನುವು ನೀಡುವ ಸಾಧ್ಯತೆ

ಆದರೆ, ಡಿಜಿಟಲ್ ರೂಪಾಯಿ ವಿಷಯಕ್ಕೆ ಬಂದರೆ, ಜನರು ಫೋನ್‌ನಲ್ಲಿಯೇ ಡಿಜಿಟಲ್ ಕರೆನ್ಸಿ ಹೊಂದಬಹುದು. ಮತ್ತು ಅದು ಕೇಂದ್ರ ಬ್ಯಾಂಕ್‌ನಲ್ಲಿರುತ್ತದೆ. ಇದನ್ನು ಕೇಂದ್ರ ಬ್ಯಾಂಕ್‌ನಿಂದ ನೇರವಾಗಿ ಯಾವುದೇ ಅಂಗಡಿಗೆ ಅಥವಾ ವ್ಯಕ್ತಿಗೆ ನಿಮ್ಮ ಫೋನ್‌ ಮೂಲಕವೇ ವರ್ಗಾಯಿಸಲಾಗುತ್ತದೆ. ಇದಕ್ಕೆ ಸರ್ಕಾರ ಸಂಪೂರ್ಣ ಖಾತರಿಯೂ ಇರಲಿದೆ. ಪ್ರಸ್ತುತ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು ಹಣ ವಿನಿಮಯಕ್ಕೆ ಶುಲ್ಕ ವಿಧಿಸುತ್ತಿವೆ. ಇದಷ್ಟೇ ಅಲ್ಲದೆ ಖಾಸಗಿ ಕಂಪನಿಗಳ ವ್ಯಾಲೆಟ್‌ಗೆ ವರ್ಗಾಯಿಸಿದ ಹಣಕ್ಕೆ ಕ್ರೆಡಿಟ್‌ ರಿಸ್ಕ್‌ ಕೂಡ ಇರುತ್ತದೆ. ಆದರೆ, ಡಿಜಿಟಲ್‌ ರೂಪಾಯಿ ಚಲಾವಣೆಗೆ ಪ್ರತ್ಯೇಕ ಶುಲ್ಕಗಳೇನು ಇರದು. ನಿಮ್ಮ ಫೋನ್‌ನಲ್ಲಿಯೇ ಹಣ ಇಟ್ಟುಕೊಳ್ಳಬಹುದು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಬಹುದು ಎಂದು ಮೂಲಗಳು ತಿಳಿಸಿವೆ.



Read more

[wpas_products keywords=”deal of the day sale today offer all”]