Karnataka news paper

ಡ್ರೈ ಫ್ರೂಟ್ಸ್‌ ಮಾರಾಟದಿಂದ ಹೈನುಗಾರಿಕೆ ಉದ್ಯಮದವರೆಗೆ: ಕಾಶ್ಮೀರ ವ್ಯಕ್ತಿಯ ಸ್ವಯಂ ಉದ್ಯೋಗದ ಯಶಸ್ಸಿನ ಕಥೆ


PTI

ರಾಂಬನ್: ಸಣ್ಣ ಅಂಗಡಿಯಲ್ಲಿ ಡ್ರೈ ಫ್ರೂಟ್ಸ್ ಮಾರಾಟ ಮಾಡಿ ತನ್ನ ಕುಟುಂಬದ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದ ವ್ಯಕ್ತಿ ಈಗ ಹೈನುಗಾರಿಕೆ ಉದ್ಯಮಿಯಾಗಿ ಬೆಳೆದಿದ್ದು, ದಿನಕ್ಕೆ ಸುಮಾರು 200 ಲೀಟರ್ ಹಾಲು ಮಾರಾಟ ಮಾಡುವ ಡೈರಿ ಫಾರ್ಮ್ ಅನ್ನು ನಡೆಸುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಮಂಜೂರ್ ಅಹ್ಮದ್ ಅವರು ಸ್ವಯಂ ಉದ್ಯೋಗದ ಯಶಸ್ಸಿನ ಮೂಲಕ ಉದ್ಯಮಿಯಾಗಿ ಬೆಳೆದಿದ್ದಾರೆ.

ಇದನ್ನು ಓದಿ: ಕಾಶ್ಮೀರದಲ್ಲಿ ಮಂಜುಗಡ್ಡೆಯಿಂದ ನಿರ್ಮಿತ ಇಗ್ಲೂ ಕೆಫೆ: ಮಂಜುಗಡ್ಡೆಯ ಟೇಬಲ್ ಕುರ್ಚಿಗಳು

ಕೇವಲ 12ನೇ ತರಗತಿವರೆಗೆ ಓದಿರುವ ಅಹ್ಮದ್ ಅವರು ಕೃಷಿ ಹಿನ್ನೆಲೆಯಿಂದ ಬಂದಿದ್ದಾರೆ. ಅಹ್ಮದ್ ಅವರಿಗೆ ಆರಂಭದಿಂದಲೂ ಸ್ವಂತ ಡೈರಿ ಫಾರ್ಮ್‌ ಆರಂಭಿಸಬೇಕೆಂಬ ಹಂಬಲವಿತ್ತು. ಈಗ ಪಶುಸಂಗೋಪನಾ ಇಲಾಖೆ ಮಾರ್ಗದರ್ಶನದಿಂದ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

“ನಾನು ಸಣ್ಣ ಅಂಗಡಿಯಲ್ಲಿ ಡ್ರೈ ಫ್ರೂಟ್ಸ್‌ ಮಾರಾಟ ಮಾಡುತ್ತಿದ್ದೆ. ಆದರೆ ಅದರಿಂದ ನನ್ನ ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಶುಸಂಗೋಪನೆ ಇಲಾಖೆಯ ಮಾರ್ಗದರ್ಶನ ಪಡೆದ ನಂತರ ನಾನು ಡೈರಿ ಫಾರ್ಮ್ ಘಟಕವನ್ನು ಪ್ರಾರಂಭಿಸಲು ನಿರ್ಧರಿಸಿದೆ” ಎಂದು ಅಹ್ಮದ್ ಹೇಳಿದ್ದಾರೆ.

ಹೈನುಗಾರಿಕೆ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದನ್ನು ಇಲಾಖೆ ಖಚಿತಪಡಿಸಿದೆ ಮತ್ತು ತಮ್ಮ ಡೈರಿ ಫಾರ್ಮ್ ಅನ್ನು ನಿರ್ವಹಿಸಲು ವೈಜ್ಞಾನಿಕ ಮಾರ್ಗಗಳ ಬಗ್ಗೆ ಇಲಾಖೆ ಉತ್ತಮ ಮಾರ್ಗದರ್ಶನ ನೀಡಿತು ಎಂದು ಅವರು ತಿಳಿಸಿದ್ದಾರೆ.

ಅಹ್ಮದ್ ಅವರು ನಾಲ್ಕು ಹಸುಗಳೊಂದಿಗೆ ಬನಿಹಾಲ್‌ನ ಬಂಕೂಟ್‌ನಲ್ಲಿ ತಮ್ಮ ಡೈರಿ ಫಾರ್ಮ್ ಅನ್ನು ಪ್ರಾರಂಭಿಸಿದರು. ನಂತರ ಪಶುಸಂಗೋಪನಾ ಇಲಾಖೆಯು ಸಮಗ್ರ ಡೈರಿ ಅಭಿವೃದ್ಧಿ ಯೋಜನೆ(ಐಡಿಡಿಎಸ್) ಅಡಿಯಲ್ಲಿ ಅವರ ಜಮೀನಿಗೆ 20 ಹಸುಗಳ ನಾಲ್ಕು ಘಟಕಗಳನ್ನು ಮಂಜೂರು ಮಾಡಿತು.

ಅಹ್ಮದ್ ಅವರು ಅವರು ಪಂಜಾಬ್‌ನಿಂದ ಜಾನುವಾರುಗಳನ್ನು ಖರೀದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಹೈಬ್ರಿಡ್ ಜಾನುವಾರುಗಳನ್ನು ಖರೀದಿಸಿರುವುದರಿಂದ ದೈನಂದಿನ ಹಾಲು ಉತ್ಪಾದನೆ ಮತ್ತು ನನ್ನ ಆದಾಯವನ್ನು ದ್ವಿಗುಣಗೊಳಿಸಲು ನನಗೆ ಸಹಾಯ ಮಾಡಿದೆ” ಎಂದು ಅಹ್ಮದ್ ಹೇಳಿದ್ದಾರೆ. ಅವರು ಈಗ ದಿನಕ್ಕೆ ಸುಮಾರು 200 ಲೀಟರ್ ಹಾಲನ್ನು ಮಾರಾಟ ಮಾಡುತ್ತಾರೆ ಮತ್ತು ಅವರು ತಿಂಗಳಿಗೆ ಮೂರು ಲಕ್ಷ ರೂಪಾಯಿ ಲಾಭ ಪಡೆಯುತ್ತಿದ್ದಾರೆ.



Read more

[wpas_products keywords=”deal of the day”]