Karnataka news paper

ಅಸ್ಸಾಂ: ಮೊದಲ ಪ್ರಯತ್ನದಲ್ಲೇ ನೀಟ್ ಪಾಸ್ ಮಾಡಿದ ಚಹಾ ಮಾರಾಟಗಾರ, ದೆಹಲಿಯ ಏಮ್ಸ್ ನಲ್ಲಿ ಪ್ರವೇಶ


PTI

ಬರ್ಪೆಟಾ(ಅಸ್ಸಾಂ): ತನ್ನ ತಾಯಿ ನಡೆಸುತ್ತಿದ್ದ ಚಹಾ ಅಂಗಡಿಯಲ್ಲಿ ಗ್ರಾಹಕರಿಗೆ ಟೀ ಕೊಡುವ ಕೆಲಸದ ಜೊತೆಗೆ ಕಷ್ಟಪಟ್ಟು ಓದಿದ ಅಸ್ಸಾಂನ ರಾಹುಲ್ ದಾಸ್(24) ಮೊದಲ ಪ್ರಯತ್ನದಲ್ಲೇ ನೀಟ್ ಪಾಸ್ ಮಾಡುವ ಮೂಲಕ ಇತರ ಯುವಕರಿಗೆ ಮಾದರಿಯಾಗಿದ್ದಾರೆ.

ಅಸ್ಸಾಂನ ಬಜಾಲಿ ಜಿಲ್ಲೆಯ ಚಹಾ ಮಾರಾಟಗಾರ ರಾಹುಲ್ ದಾಸ್ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈಗ ದೇಶದ ಪ್ರತಿಷ್ಠಿತ ದೆಹಲಿಯ ಏಮ್ಸ್ ನಲ್ಲಿ ಸೀಟು ಪಡೆದಿದ್ದು, ಅವರ ಶ್ರಮ ಅಂತಿಮವಾಗಿ ಫಲ ನೀಡಿದೆ.

ರಾಹುಲ್ ದಾಸ್ ಅವರ ಓದಿನ ಪ್ರಯಾಣ ಅತ್ಯಂತ ಕಠಿಣವಾಗಿದ್ದು, ದಾಸ್ ಮತ್ತು ಅವರ ಸಹೋದರ ಇಬ್ಬರೂ ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. 11 ವರ್ಷಗಳ ಹಿಂದೆ ಪತಿಯಿಂದ ದೂರವಾದ ರಾಹುಲ್ ದಾಸ್ ಅವರ ತಾಯಿ ತನ್ನ ಇಬ್ಬರು ಗಂಡು ಮಕ್ಕಳನ್ನು ಸಾಕಲು ಚಹಾದ ಅಂಗಡಿ ನಡೆಸುತ್ತಿದ್ದಾರೆ.

ಬಡತನದಿಂದಾಗಿ ದಾಸ್ 12ನೇ ತರಗತಿಯ ನಂತರ ತನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ. ಆದರೆ ವೈದ್ಯನಾಗುವ ಕನಸನ್ನು ಬಿಡಲಿಲ್ಲ. ಜಿಲ್ಲೆಯ ಪಟಾಚಾರ್ಕುಚಿ ಚೌಕ್ ಪ್ರದೇಶದಲ್ಲಿನ ತನ್ನ ತಾಯಿಯ ಅಂಗಡಿಯಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುವುದರ ಜೊತೆಗೆ ಓದುತ್ತಿದ್ದೆ ಎಂದು ದಾಸ್ ಹೇಳಿದ್ದಾರೆ.

“ತಾಯಿ ನಮಗಾಗಿ ಕಷ್ಟಪಡುವುದನ್ನು ನಾನು ನೋಡಿದ್ದೇನೆ. ನಮಗೆ ಅಂಗಡಿಯಲ್ಲಿ ಸಹಾಯಕರನ್ನು ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಶಾಲೆಯಿಂದ ಬಂದ ನಂತರ ನಾನು ಅವರಿಗೆ ಯಾವುದೋ ರೀತಿಯಲ್ಲಿ ಸಹಾಯ ಮಾಡುವುದನ್ನು ರೂಢಿಸಿಕೊಂಡಿದ್ದೆ. ನಾನು ಚಹಾ ಮಾಡಿ ಅದನ್ನು ಮಾರಿದೆ. ಸಮಯ ಸಿಕ್ಕಾಗ ನಾನು ಅಂಗಡಿಯಲ್ಲೇ ಓದಲು ಕುಳಿತುಕೊಳ್ಳುತ್ತೇನೆ” ಎಂದು ದಾಸ್ ವಿವರಿಸಿದ್ದಾರೆ.

2015ರಲ್ಲಿ, ಅವರು ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು ಮತ್ತು ಹಣದ ಕೊರತೆಯಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿದರು. ಆದರೆ ಉನ್ನತ ಶಿಕ್ಷಣಕ್ಕಾಗಿ ಅವರ ಉತ್ಸಾಹ ಎರಡು ವರ್ಷಗಳ ನಂತರ ಪ್ಲಾಸ್ಟಿಕ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಲು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (CIPET)ಗೆ ಸೇರಲು ಪ್ರೇರೇಪಿಸಿತು.

ದಾಸ್ ಮೂರು ವರ್ಷಗಳ ನಂತರ ಡಿಪ್ಲೊಮಾದಲ್ಲಿ ಡಿಸ್ಟಿಂಕ್ಷನ್‌ನಲ್ಲಿ(ಶೇ 85 ಅಂಕಗಳು) ಉತ್ತೀರ್ಣರಾದರು ಮತ್ತು ಕೋವಿಡ್-19 ಸಾಂಕ್ರಾಮಿಕದ ಮಧ್ಯೆ 2020ರ ಅಕ್ಟೋಬರ್‌ನಲ್ಲಿ ‘ಕ್ವಾಲಿಟಿ ಇಂಜಿನಿಯರ್’ ಆಗಿ ಗುವಾಹಟಿಯ ಬಹು-ರಾಷ್ಟ್ರೀಯ ಕಂಪನಿಯಲ್ಲಿ ಕೆಲಸವನ್ನು ಪ್ರಾರಂಭಿಸಿದರು.

ಕ್ವಾಲಿಟಿ ಇಂಜಿನಿಯರ್’ ಆಗಿದ್ದರೂ ಕೆಲಸದ ತೃಪ್ತಿಯೇ ಇರಲಿಲ್ಲ. ನಾನು ಯಾವಾಗಲೂ ವೈದ್ಯನಾಗಬೇಕೆಂದು ಬಯಸಿದ್ದೆ. ನನ್ನ ಸೋದರಸಂಬಂಧಿಯೊಬ್ಬರು ದಂತ ಶಸ್ತ್ರಚಿಕಿತ್ಸಕರಾಗಿದ್ದಾರೆ ಮತ್ತು ಅವರು ನನಗೆ ಸ್ಫೂರ್ತಿಯಾಗಿದ್ದರು. ಪುಸ್ತಕಗಳನ್ನು ಖರೀದಿಸಲು ನನ್ನ ಬಳಿ ಹಣವಿಲ್ಲದ ಕಾರಣ ನಾನು ನನ್ನ ಕೆಲಸವನ್ನು ಬಿಟ್ಟು ಆನ್‌ಲೈನ್‌ನಲ್ಲಿ ಲಭ್ಯವಿರುವ ಸಂಪನ್ಮೂಲಗಳೊಂದಿಗೆ ನೀಟ್ ಗಾಗಿ ಸಿದ್ಧತೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ” ಎಂದು ದಾಸ್ ಪಿಟಿಐಗೆ ತಿಳಿಸಿದ್ದಾರೆ.

ತನ್ನ ಒಂದು ಕೈಯಲ್ಲಿ ಸುಟ್ಟ ಗಾಯವನ್ನು ಹೊಂದಿರುವ ದಾಸ್ ಅವರು ನೀಟ್ ಪರೀಕ್ಷೆಯಲ್ಲಿ 12,068ನೇ ರ್ಯಾಂಕ್ ಪಡೆದಿದ್ದಾರೆ. ಆದರೆ ತನ್ನ ಪರಿಶಿಷ್ಟ ಜಾತಿ(SC) ಮತ್ತು ಅಂಗವಿಕಲ ವ್ಯಕ್ತಿ(PWD) ಪ್ರಮಾಣಪತ್ರಗಳು ಏಮ್ಸ್ ನಲ್ಲಿ ಪ್ರವೇಶ ಪಡೆಯಲು ಸಹಾಯ ಮಾಡಿದೆ ಎಂದು ದಾಸ್ ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.



Read more

[wpas_products keywords=”deal of the day”]