Karnataka news paper

ಇದೇ ಮೊದಲ ಬಾರಿಗೆ ಆರ್‌ಆರ್‌ ನಗರದಲ್ಲಿ ಅವರೇಕಾಯಿ ಮೇಳ!


The New Indian Express

ಬೆಂಗಳೂರು: ವಿವಿ ಪುರಂನಂತೆಯೇ ಇದೇ ಮೊದಲ ಬಾರಿಗೆ ನಗರದ ರಾಜರಾಜೇಶ್ವರಿ ನಗರಲ್ಲಿ ಅವರೆಕಾಯಿ ಮೇಳ ನಡೆಯಲಿದೆ. 

ಫೆಬ್ರವರಿ 4-6ರವರೆಗೆ ಬಾಲಕೃಷ್ಣ ರಣಗಾಮಂದಿರ ಮೈದಾನದ ಬಳಿಯ ರಸ್ತೆಯಲ್ಲಿ ಅವರೆಕಾಯಿ ಮೇಳೆ ನಡೆಯಲಿದೆ ಎಂದು ತಿಳಿದುಬಂದಿದೆ. 

ಸಾಮಾನ್ಯವಾಗಿ ಅವರೇಕಾಯಿ ಮೇಳವನ್ನು ಸವಿಯಬೇಕಾದರೆ ಬಸವನಗುಡಿ ಅಥವಾ ವಿವಿ ಪುರಂವರೆಗೆ ಹೋಗಬೇಕಿತ್ತು. ಇದೀಗ ತಾವಿರುವ ಸ್ಥಳದಲ್ಲಿಯೇ ಅವರೆಕಾಯಿ ಮೇಳ ನಡೆಯುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ಸಂತಸ ತಂದಿದೆ. 

ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಿವಿ ಪುರಂನಲ್ಲಿ ಜನವರಿ 24ರಿಂದ 30ರವರೆಗೂ ಸಣ್ಣ ಪ್ರಮಾಣದಲ್ಲಿ ಅವರೆಕಾಯಿ ಮೇಳ ನಡೆಸಲಾಗಿತ್ತು.

ಇದೇ ರೀತಿಯ ಸಣ್ಣ ಮೇಳಗಳನ್ನು ಈ ಹಿಂದೆ ಎಚ್‌ಎಸ್‌ಆರ್ ಲೇಔಟ್ ಮತ್ತು ಆರ್‌ಟಿ ನಗರದಲ್ಲಿ ನಡೆಸಿದ್ದೆವು. ಆದರೆ, ಈ ವರ್ಷ ಸಾಂಕ್ರಾಮಿಕ ರೋಗದಿಂದಾಗಿ ವಿವಿ ಪುರಂನಲ್ಲಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗಲಿಲ್ಲ. ಇದೀಗ ಆರ್ ಆರ್ ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮೇಳ ನಡೆಸುತ್ತಿದ್ದೇವೆ ಎಂದು ಅವರೇಕಾಯಿ ಮೇಳ ಆಯೋಜಿಸುವ ವಾಸವಿ ಕಾಂಡಿಮೆಂಟ್ಸ್ ಮಾಲೀಕೆ ಕೆ ಎಸ್ ಸ್ವಾತಿ ಅವರು ಹೇಳಇದ್ದಾರೆ. ಇದೇ ವೇಳೆ ಮೇಳಕ್ಕೆ ಶಾಸಕ ಮುನಿರತ್ನ ಕೂಡ ಬೆಂಬಲ ನೀಡಿದ್ದಾರೆ. 



Read more

[wpas_products keywords=”deal of the day”]