ರಕ್ಷಿತ್ ಶೆಟ್ಟಿ ಅವರ ಪರಮ್ವಾ ಸ್ಪಾಟ್ಲೈಟ್ ಬ್ಯಾನರ್ನ ಮೊದಲ ಸಿನಿಮಾ ಇದಾಗಿದ್ದು, ಶ್ರುತಿ ಹರಿಹರನ್ ಇಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಿವರ್ಸ್ ಸ್ಕ್ರೀನ್ ಪ್ಲೇ ಮಾದರಿಯಲ್ಲಿ ಸಾಗುವ ಸಿನಿಮಾವನ್ನು ಅರ್ಜುನ್ ಲೂವಿಸ್ ನಿರ್ದೇಶಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಕೂಡ ಅವರದ್ದೇ. ಇದು ಸ್ವತಂತ್ರ ನಿರ್ದೇಶಕನಾಗಿ ಅವರ ಚೊಚ್ಚಲ ಸಿನಿಮಾ.
‘ಸ್ಟ್ರಾಬೆರಿ’ ಕಥೆ ಏನು?
ತಾಯಿ ಪ್ರೀತಿಯನ್ನು ಕಳೆದುಕೊಂಡ ಅಮೃತಾ ಎಂಬ ಲೈಂಗಿಕ ಕಾರ್ಯಕರ್ತೆಯೊಬ್ಬಳು ಮತ್ತೊಮ್ಮೆ ಅಂಥ ಪ್ರೀತಿಯ ಭರವಸೆ ಸಿಕ್ಕಾಗ ಕಡಲನ್ನು ಸೇರಲು ಹೊರಟ ನದಿಯಂತೆ ಹೊರಡುವ ಕಥೆಯೇ ‘ಸ್ಟ್ರಾಬೆರಿ’. ಶ್ರುತಿ ಹರಿಹರನ್ ಅವರು ಅಮೃತಾ ಅನ್ನುವ ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನು ನಿಭಾಯಿಸಿದರೆ, ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ಮತ್ತು ‘ಒಂದು ಮೊಟ್ಟೆಯ ಕಥೆ’, ‘ಬೀರ್ಬಲ್’ ಮತ್ತು ‘ಗರುಡ ಗಮನ ವೃಷಭ’ ವಾಹನ ಚಿತ್ರಗಳಲ್ಲಿ ನಟಿಸಿರುವ ವಿನೀತ್ ಕುಮಾರ್ ಮತ್ತೆರಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಂಗಳೂರಿನ ರಂಗಭೂಮಿಯಲ್ಲಿ ಪಳಗಿರುವ ವಿಜಯ್ ಮಯ್ಯ ಜಾರ್ಜ್ ಎಂಬ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಚೈತ್ರಾ ಆಚಾರ್ ಕೂಡ ಒಂದು ಮುಖ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕ್ಲ್ಯಾನ್ವಿನ್ ಫರ್ನಾಂಡಿಸ್ ಚಿತ್ರದಲ್ಲಿದ್ದಾರೆ.
ತಾಯಿಯಾದಮೇಲೆ ನಟಿ ಶ್ರುತಿ ಹರಿಹರನ್ಗೆ ಅರ್ಥ ಆದ ಕಹಿಸತ್ಯ ಏನು?
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದ್ದು ಜೋಯೆಲ್ ಶಮನ್ ಡಿಸೋಜಾ ಛಾಯಾಗ್ರಹಣ ಮಾಡಿದ್ದಾರೆ. ಪ್ರಸಾದ್ ಕೆ. ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದು, ರಾಹುಲ್ ವಸಿಷ್ಠ ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ. ನಿರ್ಮಾಣ ನಿರ್ವಹಣೆಯನ್ನು ಸತೀಶ್ ಬ್ರಹ್ಮಾವರ ಮಾಡಿದ್ದಾರೆ. ಅತೀ ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ಸದ್ಯ ಫಸ್ಟ್ ಲುಕ್ ಮಾತ್ರ ರಿಲೀಸ್ ಆಗಿದ್ದು, ಮುಂದಿನ ದಿನಗಳಲ್ಲಿ ಟೀಸರ್, ಟ್ರೇಲರ್ ರಿಲೀಸ್ ಆಗಲಿದೆ.
ಮೊದಲ ಬಾರಿಗೆ ಮಗಳ ಫೋಟೋಶೂಟ್ ಮಾಡಿಸಿದ ನಟಿ ಶ್ರುತಿ ಹರಿಹರನ್

Head Bush Movie: ‘ರಿಯಲ್ ಲೈಫ್ ವ್ಯಕ್ತಿಗಳ ಪಾತ್ರದಲ್ಲಿ ನಟಿಸುವುದು ದೊಡ್ಡ ಸವಾಲಿನ ಕೆಲಸ’- ನಟಿ ಶ್ರುತಿ ಹರಿಹರನ್
ನಟ ‘ಸಂಚಾರಿ’ ವಿಜಯ್ ಅಭಿನಯಿಸಿದ್ದ ‘ಅಂತ್ಯವಲ್ಲ ಆರಂಭ’ ಶೀಘ್ರದಲ್ಲೇ ರಿಲೀಸ್
Read more
[wpas_products keywords=”deal of the day party wear dress for women stylish indian”]