Avinash Kadesivalaya | Vijaya Karnataka | Updated: Feb 4, 2022, 11:51 AM
ಬ್ರಿಜೇಶ್ ಎಂಬಾತನನ್ನು ಮನೆಯ ಮಾಲೀಕ ಮುಹಮ್ಮದ್ ಅಶ್ರಫ್ ಎಂದು ಸಂತ್ರಸ್ತರಿಗೆ ಪರಿಚಯಿಸಿ, ಅವರಿಂದ 5 ಲಕ್ಷ ರೂ. ಪಡೆದು ಅಗ್ರಿಮೆಂಟ್ಗೆ ಸಹಿ ಹಾಕಿಸಿಕೊಳ್ಳಲಾಗಿತ್ತು. ಬಳಿಕ ಮಹಿಳೆ ಮನೆಯವರ ಜತೆ ಫ್ಲ್ಯಾಟ್ನಲ್ಲಿ ವಾಸವಿದ್ದ ವೇಳೆ, 2021ರ ಫೆಬ್ರವರಿಯಲ್ಲಿ ಮನೆಯ ಅಸಲಿ ಮಾಲೀಕ ಮುಹಮ್ಮದ್ ಅಲಿ ಎಂಬವರು ತಮ್ಮ ಫ್ಲ್ಯಾಟ್ಗೆ ಬಂದಾಗ ಮಹಿಳೆಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.

ಹೈಲೈಟ್ಸ್:
- ಲೀಸ್ಗೆ ಮನೆ ಕೊಡಿಸುವ ನೆಪದಲ್ಲಿ ಮಹಿಳೆಗೆ ವಂಚನೆ
- ಮಂಗಳೂರು ಉತ್ತರ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ
- ಮಹಿಳೆಯಿಂದ ಐದು ಲಕ್ಷ ಪಡೆದು ವಂಚಿಸಿರುವ ಖದಿಮರು
ವಾಮಂಜೂರು ನಿವಾಸಿ ಪ್ರದೀಪ್ ಯಾನೆ ದೀಪಕ್ ಸಾವಿಯೋ ಅಂದ್ರಾದೆ (31) ಹಾಗೂ ಫಳ್ನೀರ್ ನಿವಾಸಿ ಇಮ್ತಿಯಾಝ್ (43) ಬಂಧಿತರು. ನಗರದ ಕರಂಗಲ್ಪಾಡಿಯ ಮೆಡಿಕಲ್ನಲ್ಲಿ ಉದ್ಯೋಗಿಯಾಗಿರುವ ಮಹಿಳೆಗೆ 2020ರ ಜೂನ್ ತಿಂಗಳಿನಲ್ಲಿ ಲೀಸ್ಗೆ ಮನೆ ಕೊಡಿಸುವುದಾಗಿ ಹೇಳಿ ಕೆ.ಎಸ್. ರಾವ್ ರೋಡ್ನ ಅಪಾರ್ಟ್ಮೆಂಟ್ನಲ್ಲಿ ಖಾಲಿ ಫ್ಲ್ಯಾಟ್ ತೋರಿಸಿ 2 ವರ್ಷದ ಅವಧಿಗೆ ಲೀಸ್ಗೆಂದು ಹೇಳಿ ಐದು ಲಕ್ಷ ರೂ. ಆರೋಪಿಗಳು ಪಡೆದಿದ್ದರು.
ಬ್ರಿಜೇಶ್ ಎಂಬಾತನನ್ನು ಮನೆಯ ಮಾಲೀಕ ಮುಹಮ್ಮದ್ ಅಶ್ರಫ್ ಎಂದು ಸಂತ್ರಸ್ತರಿಗೆ ಪರಿಚಯಿಸಿ, ಅವರಿಂದ 5 ಲಕ್ಷ ರೂ. ಪಡೆದು ಅಗ್ರಿಮೆಂಟ್ಗೆ ಸಹಿ ಹಾಕಿಸಿಕೊಳ್ಳಲಾಗಿತ್ತು. ಬಳಿಕ ಮಹಿಳೆ ಮನೆಯವರ ಜತೆ ಫ್ಲ್ಯಾಟ್ನಲ್ಲಿ ವಾಸವಿದ್ದ ವೇಳೆ, 2021ರ ಫೆಬ್ರವರಿಯಲ್ಲಿ ಮನೆಯ ಅಸಲಿ ಮಾಲೀಕ ಮುಹಮ್ಮದ್ ಅಲಿ ಎಂಬವರು ತಮ್ಮ ಫ್ಲ್ಯಾಟ್ಗೆ ಬಂದಾಗ ಮಹಿಳೆಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಈ ಆರೋಪಿಗಳ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿಯೂ ವಂಚನೆ ಪ್ರಕರಣ ದಾಖಲಾಗಿದ್ದು, ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇದಲ್ಲದೆ ಇತರ ಕಡೆಗಳಲ್ಲಿಯೂ ಈ ಆರೋಪಿಗಳು ಮೋಸ, ವಂಚನೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದರು. ಮನೆ ಬಾಡಿಗೆ, ಲೀಸ್ ಪಡೆಯುವ ಸಂದರ್ಭ ಅಥವಾ ಆನ್ಲೈನ್ ವಸ್ತುಗಳ ಖರೀದಿ ಸಂದರ್ಭ ನಕಲಿ ಗುರುತು, ಪರಿಚಯ ನೀಡಿ ವಂಚಿಸುವ ಜಾಲದ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸಲಹೆ ನೀಡಿದ್ದಾರೆ.
ಸಮೀಪದ ನಗರಗಳ ಸುದ್ದಿ
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
ಕೀವರ್ಡ್ಸ್
Web Title : ₹ 5 lakhs have been defrauded for giving home for lease in mangaluru; 2 accused arrested by police
Kannada News from Vijaya Karnataka, TIL Network
Kannada News from Vijaya Karnataka, TIL Network
Read more
[wpas_products keywords=”deal of the day sale today offer all”]