ನಾವು ಕಾಂಗ್ರೆಸ್ ಪಕ್ಷಕ್ಕೆ ಡೈವೋರ್ಸ್ ಕೊಟ್ಟಿದ್ದೇವೆ. ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ನಾವು ಹೋಗುವುದಿಲ್ಲ. ಬಿಜೆಪಿ ಮನೆಗೆ ಬಂದು ಸೊಸೆಯಾಗಿ ಬಂದಿದ್ದೇವೆ.ಇಲ್ಲಿಯ ಮಕ್ಕಳಾಗಿಯೇ ಇರುತ್ತೇವೆ ಎಂದರು.
ಕೊಪ್ಪಳದಲ್ಲಿ ಮಾರ್ಚ್‌ನಿಂದ ಆರಂಭವಾಗಲಿದೆ ದೇಶದ ಮೊದಲ ಆಟಿಕೆ ಕ್ಲಸ್ಟರ್!
ಯಾವ ಕಾಲಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಅಮಿತ್ ಶಾ, ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಿಲ್ಲ. ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಶಾಸಕರು, ಸಚಿವರು ಹಾದಿ ಬೀದಿಲಿ ಪಕ್ಷದ ಬಗ್ಗೆ ಮಾತನಾಡಬಾರದು ಎಂದರು.
ನಗರಸಭೆಗೆ ಅನುದಾನ ಸಿಕ್ಕಿದ್ದು ನಮ್ಮಿಂದಲೇ..: ಕೊಪ್ಪಳದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬ್ಯಾನರ್ ವಾರ್
ಕೃಷಿ ಸಚಿವ ಬಿ.ಸಿ.ಪಾಟೀಲ್ ಪೋಟೋ ಶೂಟ್‌ನಲ್ಲಿ ಬ್ಯುಸಿಯಾಗಿದ್ದಾರೆಂದು ಕಾಂಗ್ರೆಸ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನಾನು ಕೃಷಿ ಸಚಿವನಾಗಿ ಕೃಷಿ ಉತ್ತೇಜನಕ್ಕಾಗಿ ಫೋಟೊ ತೆಗೆಸಿಕೊಂಡಿದ್ದೇನೆ. ಅದು ನಾಟಕೀಯ ಅಲ್ಲ, ಅದು ವಾಸ್ತವ. ನಾನೇನು ಕಿಕ್ ಬ್ಯಾಕ್ ಪಡೆದಿಲ್ಲ. ಕಾಂಗ್ರೆಸ್‌ಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಬಿಸಿ ಪಾಟೀಲ್ ತಿಳಿಸಿದರು.
ನಾಗರಿಕರ ಕುಂದುಕೊರತೆಗೆ ಜನಸ್ಪಂದನ
ಕೊಪ್ಪಳ: ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ವೇದಿಕೆ (ಇ-ಆಡಳಿತ) ವತಿಯಿಂದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆಗಾಗಿ ‘ಜನಸ್ಪಂದನ’ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ನಾಗರಿಕರ ಕುಂದುಕೊರತೆಗಳನ್ನು ದಾಖಲಿಸಲು ಜನಸ್ಪಂದನ ಸಮಗ್ರ ವೇದಿಕೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ತಿಳಿಸಿದ್ದಾರೆ.
ಸಾರ್ವಜನಿಕರು ಜನಸ್ಪಂದನ ಮೊಬೈಲ್ ಆ್ಯಪ್ ಅಥವಾ ಐ.ಪಿ.ಜಿ.ಆರ್.ಎಸ್ ವೆಬ್‌ಸೈಟ್ ಮೂಲಕ ಕುಂದುಕೊರತೆ ದಾಖಲಿಸಬಹುದು.
ಸರಕಾರದ ಯಾವುದೇ ಸೇವೆ ಅಥವಾ ಯೋಜನೆಯನ್ನು ಪಡೆಯುವಲ್ಲಿಯಾವುದೇ ವಿಳಂಬ, ನಿರಾಕರಣೆ, ತೊಂದರೆ ಉಂಟಾದಲ್ಲಿದೂರು ದಾಖಲಿಸಿ. ವೆಬ್ ಪೋರ್ಟಲ್, ಮೊಬೈಲ್ ಆ್ಯಪ್, ಸಹಾಯವಾಣಿ 1902 ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಕುಂದುಕೊರತೆ ಅಥವಾ ದೂರು ದಾಖಲಿಸಲು ಅವಕಾಶವಿದ್ದು, ದೂರು ದಾಖಲಾದ ಕೂಡಲೇ ನಾಗರಿಕರಿಗೆ ‘ಸ್ವೀಕೃತಿ’ ಸಂದೇಶ ರವಾನೆಯಾಗುತ್ತದೆ. ಸಂಬಂಧಪಟ್ಟ ಇಲಾಖೆಯ ಕ್ಷೇತ್ರ ಅನುಷ್ಠಾನಾಧಿಕಾರಿಗೆ ನಿವಾರಣೆ ಕ್ರಮ ವಹಿಸಲು ಕುಂದುಕೊರತೆ ಅರ್ಜಿಯ ರವಾನಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಕುಂದುಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಕಾಲಾವಧಿ ಮೀರಿದರೆ, ಸ್ವಯಂಚಾಲಿತವಾಗಿ ಮೇಲಾಧಿಕಾರಿಗೆ ಕುಂದುಕೊರತೆಯ ವರ್ಗಾವಣೆಯಾಗಲಿದೆ. ಕುಂದುಕೊರತೆ ನಿವಾರಣೆ ತೃಪ್ತಿಕರವಾಗಿರುವ ಕುರಿತು ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.
Read more
[wpas_products keywords=”deal of the day sale today offer all”]