ಸಲ್ಮಾನ್ ಜೊತೆಗೆ ಕತ್ರಿನಾ
ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾದ ‘ಟೈಗರ್ 3’ ಶೂಟಿಂಗ್ ಈಚೆಗೆ ಶುರುವಾಗಿ, ಒಂದು ಶೆಡ್ಯೂಲ್ ಮುಕ್ತಾಯಗೊಂಡಿತ್ತು. ಇದೀಗ ಆ ಸಿನಿಮಾದ ಮತ್ತೊಂದು ಹಂತದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಹಿಂದಿನ ಎರಡೂ ಸರಣಿಯಲ್ಲಿ ಕತ್ರಿನಾ ನಾಯಕಿಯಾಗಿದ್ದರು. ಈ ಬಾರಿಯೂ ಕತ್ರಿನಾ ‘ಟೈಗರ್ 3’ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಫೆ.5ರಂದು ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ‘ಟೈಗರ್ 3’ ಶೂಟಿಂಗ್‌ಗೆ ಚಾಲನೆ ದೊರಕಲಿದೆ. ಫೆ.14 ದೆಹಲಿಯಲ್ಲಿ ಹೊರಾಂಗಣ ಚಿತ್ರೀಕರಣ ನಡೆಯಲಿದ್ದು, ಅಂದು ಕತ್ರಿನಾ ಮತ್ತು ಸಲ್ಮಾನ್ ಒಟ್ಟಾಗಿ ಕ್ಯಾಮೆರಾ ಎದುರಿಸಲಿದ್ದಾರೆ.
ದೆಹಲಿಯ ನೈಜ ಲೊಕೇಷನ್‌ಗಳಲ್ಲಿ ಶೂಟಿಂಗ್ ಮಾಡಲು ಯಶ್ ರಾಜ್ ಫಿಲ್ಮ್ಸ್ ಮತ್ತು ಮನೀಶ್ ಶರ್ಮಾ ಪ್ಲ್ಯಾನ್ ಮಾಡಿಕೊಂಡಿದ್ದು, ಇದೊಂದು ದೊಡ್ಡ ಮಟ್ಟದ ಶೂಟಿಂಗ್ ಶೆಡ್ಯೂಲ್ ಆಗಿದೆ ಎಂದು ಹೇಳಲಾಗಿದೆ. ‘ಇದು ಟೈಗರ್ 3 ಸಿನಿಮಾದ ಕೊನೆಯ ದೊಡ್ಡ ಶೆಡ್ಯೂಲ್ ಆಗಿದೆ. ಫೆ.14ರಿಂದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಇರುವ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಹಾಗಾಗಿ, ಯಶ್ ರಾಜ್ ಫಿಲ್ಮ್ಸ್ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿಕೊಂಡಿದೆ. ಕೊರೊನಾ ಇರುವುದರಿಂದ ತುಂಬ ಎಚ್ಚರಿಕೆಗಳನ್ನು ಚಿತ್ರತಂಡ ತೆಗೆದುಕೊಂಡಿದೆ. ಫೆ.14ರಂದು ಶೂಟಿಂಗ್ ಇರುವ ಕಾರಣ, ಫೆ.12 ಅಥವಾ 13ರಂದು ಸಲ್ಮಾನ್ ಖಾನ್ ದೆಹಲಿಗೆ ಹೋಗಲಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಕತ್ರಿನಾ ಕೈಫ್-ವಿಕ್ಕಿ ಕೌಶಲ್ ವೆಡ್ಡಿಂಗ್ ವಿಡಿಯೋ ರೈಟ್ಸ್ ಒಟಿಟಿಗೆ 80 ಕೋಟಿಗೆ ಸೇಲ್?
ದೆಹಲಿಯಲ್ಲಿ ಸುಮಾರು 10ರಿಂದ 12 ದಿನಗಳ ಕಾಲ ಸಲ್ಮಾನ್ ಖಾನ್ ಮತ್ತು ಕತ್ರಿನಾ ಇರುವ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ನೈಜ ಲೊಕೇಷನ್‌ಗಳಲ್ಲಿ ಶೂಟಿಂಗ್ ಇರುವುದರಿಂದ ಚಿತ್ರತಂಡಕ್ಕೆ ಬೇಕಾದ ಭದ್ರತೆಯನ್ನು ಒದಗಿಸುವಲ್ಲಿ ಯಶ್ ರಾಜ್ ಫಿಲ್ಮ್ಸ್ ಸಿದ್ಧತೆ ಮಾಡಿಕೊಂಡಿದೆ. ಫೆಬ್ರವರಿ ಅಂತ್ಯಕ್ಕೆ ಸಂಪೂರ್ಣ ಚಿತ್ರೀಕರಣ ಮುಕ್ತಾಯವಾಗಲಿದೆ. ಕಳೆದ ವರ್ಷ ಮಾರ್ಚ್ 10ರಂದು ಶೂಟಿಂಗ್ ಆರಂಭಗೊಂಡಿತ್ತು. ಈ ಸಿನಿಮಾಕ್ಕೆ ಸುಮಾರು 350 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗಿದೆ. ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ನಂತರ ತೆರೆಗೆ ಬರುತ್ತಿರುವ ಮೂರನೇ ಸರಣಿ ಇದಾಗಿದೆ.
ಕತ್ರಿನಾ ಕೈಫ್ ಮದುವೆ: 7 ಕುದುರೆ ರಥದಲ್ಲಿ ಮದುವೆ ಮಂಟಪಕ್ಕೆ ಎಂಟ್ರಿ ಕೊಡಲಿರುವ ಮದುಮಗ ವಿಕ್ಕಿ ಕೌಶಲ್
Read more
[wpas_products keywords=”deal of the day party wear dress for women stylish indian”]