Karnataka news paper

ಚಂದನ್‌ ಶೆಟ್ಟಿ ಜೊತೆ ಸೇರಿಕೊಂಡು ಕಾಲೆಳೆಯಲು ಶುರು ಮಾಡಿದ ಮಂಜು ಪಾವಗಡ!


‘ಬಿಗ್ ಬಾಸ್’ ವಿನ್ನರ್, ಗಾಯಕ, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿಗೆ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಬೇಡಿಕೆ ಇದೆ. ಇದೀಗ ಅವರ ಜೊತೆಗೆ ಮತ್ತೊಬ್ಬ ಬಿಗ್ ಬಾಸ್ ವಿನ್ನರ್, ಹಾಸ್ಯ ನಟ ಮಂಜು ಪಾವಗಡ ಕೂಡ ಸೇರಿಕೊಂಡಿದ್ದಾರೆ. ಇವರಿಬ್ಬರು ಈಗ ಕಾಲೆಳೆಯಲು ಶುರು ಮಾಡಿದ್ದಾರೆ. ‘ಅರೇ, ಇದೇನಪ್ಪ’ ಅಂತ ಅಚ್ಚರಿಪಡಬೇಡಿ. ಸದ್ಯ ಚಂದನ್‌ ಶೆಟ್ಟಿ ಹೀರೋ ಆಗಿದ್ದಾರೆ. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಮಾಡಿದ್ದ ಸುಜಯ್ ಶಾಸ್ತ್ರೀ ಈಗ ‘ಎಲ್ರ ಕಾಲೆಳಿಯುತ್ತೆ ಕಾಲ’ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾದಲ್ಲಿ ಮಂಜು ಪಾವಗಡ ಒಂದು ಕಾಮಿಡಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮಂಜು ಪಾವಗಡ, ‘ನಾನು ಚಂದನ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೆ. ಅವರೊಬ್ಬ ಅದ್ಭುತ ಪ್ರತಿಭೆ. ಜನರನ್ನು ಗುರುತಿಸುವುದೇ ನನ್ನ ಕಾಮಿಡಿ ಟೈಮಿಂಗ್‌ನಿಂದ. ಹಾಗಾಗಿ, ಅಂತಹ ಕಾಮಿಡಿ ಪಾತ್ರಗಳನ್ನು ಮಾಡುವುದು ನನಗೆ ಇಷ್ಟ. ಅದರಲ್ಲಿ ಯಾವುದೇ ಬೇಸರವಿಲ್ಲ’ ಎಂದಿದ್ದಾರೆ ಮಂಜು.

ಮಂಜು ಆಯ್ಕೆಯ ಕುರಿತು ಮಾಹಿತಿ ಹಂಚಿಕೊಳ್ಳುವ ನಿರ್ದೇಶಕ ಸುಜಯ್, ‘ಮಂಜು ಪಾವಗಡ ಈಗಾಗಲೇ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಫೇಮಸ್ ಆಗಿದ್ದಾರೆ. ನಮ್ಮ ‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರದಲ್ಲಿಯೂ ಕೂಡ ಅವರು ನಗುವಿನ ಅಲೆ ಎಬ್ಬಿಸಲಿದ್ದಾರೆ. ಅವರ ಹಾಸ್ಯ ಪ್ರತಿಭೆಯು ಕಿರುತೆರೆಗೆ ಮೀಸಲಾಗಿತ್ತು. ಆದರೆ ಈ ಸಿನಿಮಾದಿಂದ ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಾವುದು. ನಮ್ಮ ಸಿನಿಮಾದ ಕಥೆ 80-90ರ ದಶಕದಲ್ಲಿ ಸಾಗಲಿದೆ. ಹಾಗಾಗಿ, ಮಂಜು ಲುಕ್ ಸಂಪೂರ್ಣವಾಗಿ ಬದಲಾಗಲಿದೆ. ಕಾಮಿಡಿ ಜೊತೆಗೆ ಥ್ರಿಲ್ಲಿಂಗ್ ಅಂಶಗಳು ಇರಲಿವೆ. ಬೆಂಗಳೂರು ಗ್ರಾಮಾಂತರ ಏರಿಯಾದಲ್ಲಿ ಶೂಟಿಂಗ್ ಆರಂಭಿಸಲಿದ್ದೇವೆ. ಸಿಕ್ಕಾಪಟ್ಟೆ ಹಾಸ್ಯವಿರುವ ಒಳ್ಳೆ ಕಥೆ ಇದು. ಸಿನಿಮಾದ ಬಗ್ಗೆ ಹೆಚ್ಚಿನ ವಿವರವನ್ನು ಈಗಲೇ ಏನೂ ಹೇಳಲಾಗುವುದಿಲ್ಲ’ ಎಂದು ಹೇಳುತ್ತಾರೆ.

ವೈರಲ್ ಆಗಿದೆ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಅವರ ಸ್ಪೆಷಲ್ ವಿಡಿಯೋ!

ಚಂದನ್‌ ಶೆಟ್ಟಿ ಮೂಲತಃ ಸಂಗೀತ ಕ್ಷೇತ್ರದವರಾಗಿದ್ದರೂ ಈ ಸಿನಿಮಾ ಸಂಗೀತದ ಕುರಿತಾಗಿಲ್ಲ. ಇದಕ್ಕೆ ಚಂದನ್‌ ಶೆಟ್ಟಿ ಸಂಗೀತ ಸಂಯೋಜನೆಯನ್ನೂ ಮಾಡುತ್ತಿಲ್ಲ. ಫೆಬ್ರವರಿ ಮೊದಲ ವಾರದಲ್ಲಿ ಸಿನಿಮಾದ ಮುಹೂರ್ತ ಆಚರಿಸಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ. ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ನಟಿಸಲಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ವಿನ್ನರ್ ಮಂಜು ಪಾವಗಡ ಜರ್ನಿ ಹೇಗಿತ್ತು? ಇಲ್ಲಿವೆ ಸ್ಪೆಷಲ್ ಫೋಟೋಗಳು



Read more

[wpas_products keywords=”deal of the day sale today offer all”]