ಭಾನುವಾರ (ಜ.30) ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಶಿವರಾಜ್‌ಕುಮಾರ್, ‘ನನಗೆ ಶನಿವಾರವಷ್ಟೇ (ಜ.29) ಗೊತ್ತಾಯಿತು. ಈ ಬಗ್ಗೆ ನಾವು ಮಾತನಾಡಲಿದ್ದೇವೆ. ಎಲ್ಲದಕ್ಕೂ ಅವಕಾಶ ಕೊಡ್ತಾರೆ ಎಂದಮೇಲೆ ಚಿತ್ರರಂಗಕ್ಕೆ ಯಾಕೆ ಅವಕಾಶ ಕೊಡಲ್ಲ? ಖಂಡಿತ ಕೊಡ್ತಾರೆ ಎಂಬ ನಂಬಿಕೆ ಇದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಯಾವಾಗಲೂ ಚಿತ್ರರಂಗದ ಪರವಾಗಿಯೇ ಇದ್ದಾರೆ. ಚಿತ್ರಮಂದಿರದಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡುವಂತೆ ನಾವು ಮನವಿ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.
ಶಕ್ತಿಧಾಮದ ಕೆಲಸಗಳಲ್ಲಿ ಬ್ಯುಸಿ
‘ನಮ್ಮ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಆರಂಭಿಸಿದ್ದ ಶಕ್ತಿಧಾಮವನ್ನು ಈಗ ನನ್ನ ಪತ್ನಿ ಗೀತಾ ನೋಡಿಕೊಳ್ಳುತ್ತಿದ್ದಾರೆ. ಅವರೇ ಮುಂದೆ ನಿಂತು, ಅಲ್ಲಿನ ಮಕ್ಕಳಿಗೆ ಒಳ್ಳೆಯ ತರಬೇತಿ ಕೊಡಿಸುತ್ತಿದ್ದಾರೆ. ಆಗಾಗ ಅವರು ಮೈಸೂರಿಗೆ ಬರುತ್ತಿರುತ್ತಾರೆ. ಶೂಟಿಂಗ್ ಇರುವ ಕಾರಣ ನಾನು ಇಲ್ಲಿಯೇ ಇದ್ದೇನೆ. ಮೈಸೂರಿನ ಜೊತೆಗಿನ ನಂಟು ಜಾಸ್ತಿ ಆಗುತ್ತಿದೆ. ಅದು ಯಾವತ್ತೂ ಕಮ್ಮಿ ಆಗಲ್ಲ. ಈಚೆಗೆ ನಾನು ಶಕ್ತಿಧಾಮದ ಬಸ್‌ನಲ್ಲಿ ಕೂತಿದ್ದೆ. ಅಲ್ಲಿನ ಮಕ್ಕಳು, ‘ಅಣ್ಣ ಒಂದು ರೌಂಡ್ ಹೋಗೋಣ’ ಅಂದ್ರು. ಹಾಗಾಗಿ, ಅಲ್ಲಿಯೇ ಸಣ್ಣದಾಗಿ ಒಂದು ರೌಂಡ್ ಹೊಡೆಸಿದೆ’ ಎಂದು ಶಕ್ತಿಧಾಮದ ಬಗ್ಗೆ ಶಿವಣ್ಣ ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಸಹಿ ಹಾಕಿದ ನಟ ಶಿವರಾಜ್‌ಕುಮಾರ್
ಅಪ್ಪು ಅಗಲಿಕೆಯ ನೋವು ನಿರಂತರ
‘ಅಪ್ಪು ನಿಧನ ಆಗಿ ಮೂರು ತಿಂಗಳು ಕಳೆದಿದೆ. ಅವನನ್ನು ನೆನೆಸಿಕೊಂಡಾಗಲೆಲ್ಲ ನನ್ನ ಧ್ವನಿಯೇ ಬದಲಾಗುತ್ತದೆ. ಸಂಪೂರ್ಣವಾಗಿ ನೋವು ಹೇಳಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ಆ ನೋವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಆ ನೋವಿನ ಜೊತೆ ಬದುಕಬೇಕು, ಬದುಕುತ್ತಲೇ ಇರುತ್ತೇವೆ. ಅಪ್ಪು ಅನ್ನೋ ವ್ಯಕ್ತಿತ್ವವೇ ಅಂಥದ್ದು. ಇವತ್ತು ಇಡೀ ಕರ್ನಾಟಕವೇ ಅವನನ್ನು ನೆನೆಯುತ್ತಿದೆ. ನನ್ನ ತಮ್ಮನ ಬಗ್ಗೆ ನಾನು ಜಾಸ್ತಿ ಹೇಳಬಾರದು. ಆದರೆ, ಅಂತ ಒಬ್ಬ ತಮ್ಮನನ್ನು ಪಡೆದಿದ್ದಕ್ಕೆ ನಾನು ಹೆಮ್ಮೆ ಪಡ್ತಿನಿ. ಅವನು ನಮ್ಮ ಪಾಲಿಗೆ ಇನ್ನೂ ಇದ್ದಾನೆ’ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ. ತಮ್ಮದೇ ಹೋಮ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರೋ ‘ವೇದ’ ಸಿನಿಮಾದಲ್ಲಿ ಶಿವಣ್ಣ ಬ್ಯುಸಿ ಇದ್ದಾರೆ. ಮೈಸೂರಲ್ಲಿ ಶೂಟಿಂಗ್ ನಡೆಯುತ್ತಿದೆ.
Shivarajkumar: ಥಿಯೇಟರ್, ಓಟಿಟಿಯಲ್ಲಿ ಅಬ್ಬರಿಸಿ ಈಗ ಕಿರುತೆರೆಗೆ ಬಂದ ‘ಭಜರಂಗಿ 2’
Read more
[wpas_products keywords=”deal of the day party wear dress for women stylish indian”]