ಶ್ವೇತಾ ತಿವಾರಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಏನು?
ಕಿರುತೆರೆ ನಟಿ ಶ್ವೇತಾ ತಿವಾರಿ ಇತ್ತೀಚೆಗಷ್ಟೇ ತಮ್ಮ ಮುಂಬರುವ ವೆಬ್ ಸೀರೀಸ್ ‘ಶೋ ಸ್ಟಾಪರ್’ ಪ್ರಚಾರಕ್ಕಾಗಿ ಭೋಪಾಲ್‌ಗೆ ತೆರಳಿದ್ದರು. ಅಲ್ಲಿ ‘ದೇವರ’ ಬಗ್ಗೆ ಹಾಗೂ ‘ಬ್ರಾ’ ಬಗ್ಗೆ ನಟಿ ಶ್ವೇತಾ ತಿವಾರಿ ಒಂದು ಹೇಳಿಕೆ ನೀಡಿದ್ದರು. ‘’ಮೇರಿ ಬ್ರಾ ಕಾ ಸೈಜ್ ಭಗವಾನ್ ಲೇ ರೆಹೇ ಹೇ’’ ಅಂತ ಶ್ವೇತಾ ತಿವಾರಿ ಹೇಳಿದ್ದರು. ಶ್ವೇತಾ ತಿವಾರಿ ನೀಡಿದ್ದ ಈ ಹೇಳಿಕೆ ಹಲವರಿಗೆ ಹಿಡಿಸಲಿಲ್ಲ. ದೇವರ ಬಗ್ಗೆ ಈ ರೀತಿ ತಮಾಷೆ ಮಾಡುವುದು ಸರಿಯಲ್ಲ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದರು. ದೇವರ ಬಗ್ಗೆ ಅಸಭ್ಯವಾಗಿ ಜೋಕ್ ಮಾಡಿದ ಶ್ವೇತಾ ತಿವಾರಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬೆಲ್ಲಾ ಕಾಮೆಂಟ್ಸ್ ಸೋಷಿಯಲ್ ಮೀಡಿಯಾದಲ್ಲಿ ಬಂದಿತ್ತು.
ವರದಿ ನೀಡುವಂತೆ ಆಗ್ರಹಿಸಿದ್ದ ಮಧ್ಯಪ್ರದೇಶದ ಗೃಹ ಸಚಿವ

ಶ್ವೇತಾ ತಿವಾರಿ ನೀಡಿದ್ದ ಹೇಳಿಕೆ ಎಲ್ಲೆಡೆ ವೈರಲ್ ಆಯ್ತು. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡ ಈ ವಿವಾದಾತ್ಮಕ ಹೇಳಿಕೆ ಕುರಿತಾಗಿ ವರದಿ ನೀಡುವಂತೆ ಕಮಿಷನರ್‌ಗೆ ಆಗ್ರಹಿಸಿದ್ದರು. ‘’ಶ್ವೇತಾ ತಿವಾರಿ ನೀಡಿದ್ದ ಹೇಳಿಕೆಯನ್ನು ಕೇಳಿದ್ದೇನೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಭೋಪಾಲ್ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದೇನೆ’’ ಎಂದು ನರೋತ್ತಮ್ ಮಿಶ್ರಾ ಹೇಳಿದ್ದರು.
ಹೋರಾಟದ ಫಲವಾಗಿ ಮಗನನ್ನು ಪಡೆದ ಶ್ವೇತಾ ತಿವಾರಿ; ಇನ್ಮುಂದೆ ದೌರ್ಜನ್ಯ ನಿಲ್ಲಬಹುದು ಎಂದ ನಟಿ
ಎಫ್‌ಐಆರ್ ದಾಖಲು

ಶ್ವೇತಾ ತಿವಾರಿ ಅವರ ಹೇಳಿಕೆ ಕುರಿತಾಗಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯೆ ನೀಡುತ್ತಿದ್ದಂತೆಯೇ ನಟಿಯ ವಿರುದ್ಧ ಎಫ್‌ಐಆರ್ ದಾಖಲಾಯಿತು. ಸೆಕ್ಷನ್ 295(A) ಅಡಿಯಲ್ಲಿ ಶ್ಯಾಮಲಾ ಹಿಲ್ಸ್ ಪೊಲೀಸ್ ಸ್ಟೇಷನ್‌ನಲ್ಲಿ ಶ್ವೇತಾ ತಿವಾರಿ ವಿರುದ್ಧ ಎಫ್‌ಐಆರ್ ಹಾಕಲಾಯಿತು.
ಅಮ್ಮ, ಮಲತಂದೆ ಜಗಳಕ್ಕೆ ಬಡವಾದ ನಟಿ ಶ್ವೇತಾ ತಿವಾರಿಯ 20 ವರ್ಷದ ಮಗಳು, ಮಗ!
ಕ್ಷಮೆ ಕೇಳಿದ ಶ್ವೇತಾ ತಿವಾರಿ

ತಮ್ಮ ಹೇಳಿಕೆ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ ಬಳಿಕ ನಟಿ ಶ್ವೇತಾ ತಿವಾರಿ ಕ್ಷಮೆ ಕೇಳಿದ್ದಾರೆ. ‘’ನನ್ನ ಸಹ ನಟನ ಈ ಹಿಂದಿನ ಪಾತ್ರವನ್ನು ಉಲ್ಲೇಖಿಸುವ ಮೂಲಕ ನಾನು ಕೊಟ್ಟ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ನಾನು ಕೊಟ್ಟ ಹೇಳಿಕೆ ಸೌರಭ್ ರಾಜ್ ಜೈನ್ ಕುರಿತಾದದ್ದು. ಅವರು ಈ ಹಿಂದೆ ಭಗವಾನ್ ಕೃಷ್ಣನ ಪಾತ್ರ ನಿರ್ವಹಿಸಿದ್ದವರು. ಅದನ್ನ ಅರ್ಥ ಮಾಡಿಕೊಂಡರೆ, ನಾನು ಏನು ಹೇಳಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಜನರು ಪಾತ್ರದ ಹೆಸರುಗಳೊಂದಿಗೆ ನಟರನ್ನು ಗುರುತಿಸುತ್ತಾರೆ. ಹೀಗಾಗಿ, ನಾನು ಕೂಡ ಸೌರಭ್ ರಾಜ್ ಜೈನ್ ಅವರ ಈ ಹಿಂದೆ ಭಗವಾನ್ ಕೃಷ್ಣ ಪಾತ್ರವನ್ನು ಉದಾಹರಣೆಯಾಗಿ ಬಳಸಿದೆ ಅಷ್ಟೇ. ಆದರೆ, ಅದನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿರುವುದನ್ನು ನೋಡಿದರೆ ದುಃಖ ಉಂಟಾಗುತ್ತದೆ. ಹಾಗ್ನೋಡಿದ್ರೆ, ನನಗೆ ದೇವರಲ್ಲಿ ಅಪಾರ ನಂಬಿಕೆ ಭಕ್ತಿ ಇದೆ. ಉದ್ದೇಶಪೂರ್ವಕವಾಗಿ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಈ ರೀತಿ ಹೇಳಲಿಲ್ಲ. ನಾನು ಹೇಳಿದ್ದನ್ನು ಸರಿಯಾಗಿ ಅರ್ಥೈಸದೆ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಜನರಿಗೆ ಆಗಿರುವ ನೋವಿಗೆ ನಾನು ವಿನಮ್ರವಾಗಿ ಕ್ಷಮೆಯಾಚಿಸುತ್ತೇನೆ’’ ಎಂದು ನಟಿ ಶ್ವೇತಾ ತಿವಾರಿ ಕ್ಷಮೆ ಕೇಳಿದ್ದಾರೆ.
ಎರಡನೇ ಪತಿ ತನ್ನ ಪಾಲಿಗೆ ‘ವಿಷ ವ್ರಣ’ವಾಗಿದ್ದ ಎಂದ ನಟಿ ಶ್ವೇತಾ ತಿವಾರಿ
ಸೌರಭ್ ಕಾಲೆಳೆಯುತ್ತಿದ್ದ ಶ್ವೇತಾ ತಿವಾರಿ

ಫ್ಯಾಶನ್ ಲೋಕದ ಸುತ್ತ ಹೆಣೆದಿರುವ ‘ಶೋ ಸ್ಟಾಪರ್’ ವೆಬ್ ಸೀರೀಸ್‌ನಲ್ಲಿ ಶ್ವೇತಾ ತಿವಾರಿ ಜೊತೆಗೆ ಸೌರಭ್ ರಾಜ್ ಜೈನ್ ಕೂಡ ಅಭಿನಯಿಸಿದ್ದಾರೆ. ಈ ಹಿಂದೆ ಭಗವಾನ್ ಶ್ರೀಕೃಷ್ಣನ ಪಾತ್ರದಲ್ಲಿ ಅಭಿನಯಿಸಿದ್ದ ಸೌರಭ್ ರಾಜ್ ಜೈನ್ ‘ಶೋ ಸ್ಟಾಪರ್’ ವೆಬ್ ಸೀರೀಸ್‌ನಲ್ಲಿ ಬ್ರಾ ಫಿಟ್ಟರ್ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಹಿಂದೆ ದೇವರ ಪಾತ್ರ ಮಾಡಿದ್ದವರು ಇದೀಗ ಬ್ರಾ ಫಿಟ್ಟರ್ ಪಾತ್ರ ಮಾಡುತ್ತಿದ್ದಾರೆ ಎಂಬುದನ್ನು ತಮಾಷೆಯಾಗಿ ಹೇಳಲು ಹೋದ ಶ್ವೇತಾ ತಿವಾರಿ ವಿವಾದಕ್ಕೆ ಗ್ರಾಸವಾಗಿದ್ದರು. ಇದೀಗ ತಮ್ಮ ಹೇಳಿಕೆಗೆ ಕ್ಷಮೆ ಕೇಳಿರುವ ಶ್ವೇತಾ ತಿವಾರಿ ವಿವಾದಕ್ಕೆ ಶುಭಂ ಹಾಡಿದ್ದಾರೆ.
ಶ್ವೇತಾ ತಿವಾರಿ

ಹಿಂದಿ ಕಿರುತೆರೆ ಮತ್ತು ಬಾಲಿವುಡ್‌ನಲ್ಲಿ ಶ್ವೇತಾ ತಿವಾರಿ ಜನಪ್ರಿಯತೆ ಪಡೆದಿದ್ದಾರೆ. ‘ಕಸೌತಿ ಝಿಂದಗಿ ಕೇ’, ‘ಜಾನೆ ಕ್ಯಾ ಬಾತ್ ಹುಯಿ’, ‘ಸೀತಾ ಔರ್ ಗೀತಾ’, ‘ಬಾಲ್ ವೀರ್’ ಮುಂತಾದ ಧಾರಾವಾಹಿಗಳಲ್ಲಿ ಶ್ವೇತಾ ತಿವಾರಿ ಅಭಿನಯಿಸಿದ್ದಾರೆ. ‘ಬಿಗ್ ಬಾಸ್ 4’, ‘ಕಾಮಿಡಿ ಸರ್ಕಸ್ ಕಾ ನಯಾ ದೌರ್’ ಕಾರ್ಯಕ್ರಮದಲ್ಲಿ ಶ್ವೇತಾ ತಿವಾರಿ ವಿನ್ನರ್ ಆಗಿದ್ದರು. ‘ಮಧೋಶಿ’, ‘ಆಬ್ರಾ ಕಾ ಡಾಬ್ರಾ’ ಮುಂತಾದ ಹಿಂದಿ ಸಿನಿಮಾಗಳಲ್ಲೂ ಶ್ವೇತಾ ತಿವಾರಿ ನಟಿಸಿದ್ದಾರೆ.
Read more
[wpas_products keywords=”deal of the day party wear dress for women stylish indian”]