Karnataka news paper

ಸಿಧು ಹೆತ್ತ ತಾಯಿಯನ್ನು ಬೀದಿಪಾಲು ಮಾಡಿದ ‘ಕ್ರೂರಿ’: ಸಹೋದರಿ ಆರೋಪ


PTI

ಚಂಡಿಗಢ: ಪಂಜಾಬ್ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ  ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಸಿಧು ಸಹೋದರಿ ಎಂದು ಕರೆದುಕೊಂಡಿರುವ ಮಹಿಳೆಯೊಬ್ಬರು, ಸಿಧು, ಕ್ರೂರಿ, ತನ್ನ ತಂದೆ ಮೃತಪಟ್ಟ ಬಳಿಕ ವೃದ್ಧ ತಾಯಿಯನ್ನು ಬೀದಿ ಪಾಲು ಮಾಡಿದ್ದಾಗಿ ಆರೋಪಿಸಿದ್ದಾರೆ.

ಅಮೆರಿಕ ಮೂಲದ ಸುಮನ್ ತೂರ್ ಈ ರೀತಿಯಲ್ಲಿ ಆರೋಪ ಮಾಡಿದ್ದಾರೆ. 1986ರಲ್ಲಿ ತಮ್ಮ ತಂದೆ ಮೃತಪಟ್ಟ ಬಳಿಕ ನಮ್ಮ ವೃದ್ಧ ತಾಯಿಯನ್ನು ಸಿಧು ಕೈ ಬಿಟ್ಟಿ ನಂತರ 1989 ರಲ್ಲಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ನಿರ್ಗತಿಕ ಮಹಿಳೆಯಾಗಿ ಅವರು ಸಾವನ್ನಪ್ಪಿದ್ದಾಗಿ ಹೇಳಿದ್ದಾರೆ. 

ಹಣದ ಸಲುವಾಗಿ ಸಿಧು ಎಲ್ಲವನ್ನು ಕಳೆದುಕೊಂಡ. ಆತನಿಗೆ ಎರಡು ವರ್ಷ ವಯಸ್ಸು ಆಗಿದ್ದಾಗ ತಂದೆ ತಾಯಿಯಿಂದ ಬೇರೆಯಾದ್ದಾಗಿ ಸುಳ್ಳು ಹೇಳಿಕೊಂಡಿದ್ದಾಗಿ ಈ ಹಿಂದೆ ಲೇಖನವೊಂದರಲ್ಲಿ ಸುಮನ್ ತೂರ್ ಹೇಳಿದ್ದರು. ಈ ಮಧ್ಯೆ ಸುಮನ್ ತೂರ್ ಅವರ ಆರೋಪ ಕುರಿತ ಪ್ರತಿಕ್ರಿಯೆಯನ್ನು ನವಜೋತ್ ಸಿಂಗ್ ಸಿಧು ಇನ್ನೂ ನೀಡಿಲ್ಲ.

ಪಂಜಾಬ್ ವಿಧಾನಸಭಾ ಚುನಾವಣೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ಮತ ಎಣಿಕೆ ಪ್ರಕಟವಾಗಿ ಫಲಿತಾಂಶ ಹೊರಬೀಳಲಿದೆ.



Read more

[wpas_products keywords=”deal of the day”]