Karnataka news paper

ಉಕ್ರೇನ್‌ ವಿರುದ್ಧ ಯುದ್ಧವೆಂಬ ಚಿಂತನೆಯೂ ಸ್ವೀಕಾರಾರ್ಹವಲ್ಲ: ರಷ್ಯಾ


Reuters

ಮಾಸ್ಕೋ: ‘ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಚಿಂತನೆಯೂ ಸ್ವೀಕಾರಾರ್ಹವಲ್ಲ’ ಎಂದು ರಷ್ಯಾ ವಿದೇಶಾಂಗ ಇಲಾಖೆ ವಕ್ತಾರರು ಗುರುವಾರ ಹೇಳಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ನಡೆಸುವ ಭೀತಿ ನಿವಾರಣೆಯ ನಿಟ್ಟಿಯಲ್ಲಿ ಇದು ರಷ್ಯಾದಿಂದ ಹೊರಬಿದ್ದಿರುವ ಮತ್ತೊಂದು ಅಧಿಕೃತ ಹೇಳಿಕೆಯಾಗಿದೆ. 

‘ನಮ್ಮ ದೇಶವು ಯಾರ ಮೇಲೂ ಆಕ್ರಮಣ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ನಾವು ಈಗಾಗಲೇ ಹಲವು ಬಾರಿ ಹೇಳಿದ್ದೇವೆ. ನಮ್ಮ ಜನರ ನಡುವಿನ ಯುದ್ಧದ ಚಿಂತನೆಯು ಸಹ ಸ್ವೀಕಾರಾರ್ಹವಲ್ಲ’ ಎಂದು ಸಚಿವಾಲಯದ ವಕ್ತಾರ ಅಲೆಕ್ಸಿ ಜೈಟ್ಸೆವ್ ಹೇಳಿದರು.

2014 ರಲ್ಲಿ ಉಕ್ರೇನ್‌ನಿಂದ ಕ್ರಿಮಿಯಾವನ್ನು ವಶಪಡಿಸಿಕೊಂಡಿರುವ ರಷ್ಯಾ ಪೂರ್ವ ಉಕ್ರೇನ್‌ನಲ್ಲಿ ದಂಗೆಯನ್ನು ಬೆಂಬಲಿಸಿತ್ತು. ಸದ್ಯ ಉಕ್ರೇನ್ ಬಳಿಯ ತನ್ನ ಭೂಪ್ರದೇಶದಲ್ಲಿ ಮತ್ತು ನೆರೆಯ ಬೆಲಾರಸ್‌ನಲ್ಲಿ ಸೇನಾ ಪಡೆಗಳನ್ನು ನಿಯೋಜಿಸಿ ಯುದ್ಧ ಭೀತಿಗೆ ಕಾರಣವಾಗಿದೆ ಎಂದು ಬ್ರಿಟನ್ ಆರೋಪಿಸಿತ್ತು. 

‘ಪೂರ್ವ ಉಕ್ರೇನ್‌ನಲ್ಲಿನ ಪ್ರತ್ಯೇಕತಾವಾದಿ ಸಂಘರ್ಷಕ್ಕೂ ರಷ್ಯಾಕ್ಕೂ ಯಾವುದೇ ಸಂಬಂಧವಿಲ್ಲ. ಅದೊಂದು ಅಂತರ್ಯುದ್ಧ’ ಎಂಬ ರಷ್ಯಾದ ವಾದವನ್ನು ಉಕ್ರೇನ್‌ ತಿರಸ್ಕರಿಸಿದ್ದು, ರಷ್ಯಾವು ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದೆ.

ಕದನ ವಿರಾಮಕ್ಕೆ ಒಪ್ಪಿಗೆ ಉಭಯ ದೇಶಗಳ ಒಪ್ಪಿಗೆ
ಇನ್ನು ಇದಕ್ಕೂ ಮೊದಲು ಬುಧವಾರ ಪ್ಯಾರಿಸ್‌ನಲ್ಲಿ ಎಂಟು ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯಲ್ಲಿ ಎಲ್ಲಾ ಪಕ್ಷಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಇದೀಗ ಏರ್ಪಟ್ಟಿರುವ ಕದನ ವಿರಾಮದಲ್ಲಿ ಫ್ರಾನ್ಸ್ ಮತ್ತು ಜರ್ಮನಿ ಪ್ರಮುಖ ಪಾತ್ರ ವಹಿಸಿವೆ. ಎರಡೂ ದೇಶಗಳು ಬೇಷರತ್ ಕದನ ವಿರಾಮಕ್ಕೆ  ಒಪ್ಪಿಕೊಂಡಿವೆ ಎಂದು ಫ್ರಾನ್ಸ್ ರಾಜತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವಾರಗಳ ನಂತರ ಬರ್ಲಿನ್‌ನಲ್ಲಿ ರಷ್ಯಾ- ಯುಕ್ರೇನ್ ಮತ್ತೊಂದು ಸಭೆ ನಡೆಸಲಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಕದನವಿರಾಮ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 
 



Read more

[wpas_products keywords=”deal of the day”]