”ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಆಪ್ತ ಕಾರ್ಯದರ್ಶಿ ಮೆಹಫೂಜ್ ಅಲಿಖಾನ್ ಹಾಗೂ ಓಬಳಾಪುರಂ ಮೈನಿಂಗ್ ಕಂಪನಿ ಮತ್ತು ಶ್ರೀ ಮಿನರಲ್ಸ್ ಪಾಲುದಾರ ಬಿ.ವಿ. ಶ್ರೀನಿವಾಸ ರೆಡ್ಡಿ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ಹಾಗೂ ನಿಯಂತ್ರಣ ಕಾಯಿದೆ-1957ರ ಸೆಕ್ಷನ್ 21, 23 ಹಾಗೂ 4(1) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು” ಎಂದು ಕೋರ್ಟ್ ಸೂಚನೆ ನೀಡಿದೆ.
2015ರಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 379, 409, 420, 468 ಹಾಗೂ 471 ಅಡಿ ದಾಖಲಿಸಿರುವ ಪ್ರಕರಣಕ್ಕೂ (ಕ್ರೈಮ್ ನಂಬರ್ 22/ಧಿ2015) ಪಿಸಿಆರ್‌ಗೂ ಪರಸ್ಪರ ಸಂಬಂಧವಿದೆ ಎಂದಿದ್ದ ತನಿಖಾಧಿಕಾರಿ, ಪ್ರಕರಣದ ಆರೋಪಪಟ್ಟಿಯನ್ನು ಪಿಸಿಆರ್ ಜತೆ ಲಗತ್ತಿಸಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ”ಆರೋಪಗಳು ಮೇಲ್ನೋಟಕ್ಕೆ ಕಾಗ್ನಿಜೆನ್ಸ್ (ಒಪ್ಪಿಗೆ ಪಡೆಯಲು) ತೆಗೆದುಕೊಳ್ಳಲು ಅರ್ಹವಾಗಿವೆ” ಎಂದು ಅಭಿಪ್ರಾಯಪಟ್ಟಿತು.
ಗಣರಾಜ್ಯೋತ್ಸವ 2022 : ದಿಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಬೆಂಗಳೂರಿನ ರೇವಾ ವಿವಿ ಹಳೆ ವಿದ್ಯಾರ್ಥಿ ಭಾಗಿ!
ಗಣಿ ಅಕ್ರಮಕ್ಕೆ ಕುರಿತಾಗಿ ನ್ಯಾ. ಎನ್. ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ವರದಿ ಸಲ್ಲಿಸಲಾಗಿತ್ತು. ಆದರೆ, ಲೋಕಾಯುಕ್ತ ವರದಿಯನ್ನು ಅಂದಿನ ಸರಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಂತರದ ಬೆಳವಣಿಗೆಯಲ್ಲಿ ಪ್ರಕರಣ ಸಿಬಿಐ ಅಂಗಳ ಸೇರಿತ್ತು.
ಗಾಲಿ ಜನಾರ್ದನರೆಡ್ಡಿ ಸೇರಿದಂತೆ ಹಲವರು ಬಂಧನಕ್ಕೆ ಒಳಗಾಗಿದ್ದರು. 2011ರ ಸೆ.5 ರಂದು ರೆಡ್ಡಿಯನ್ನು ಸಿಬಿಐ ಬಂಧಿಸಿತ್ತು. ಬಳಿಕ ಜೈಲು ಸೇರಿದ್ದ ಅವರಿಗೆ, 2015ರ ಜ.21ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
Read more
[wpas_products keywords=”deal of the day sale today offer all”]