ಬಿಜೆಪಿ ಸೋಲಿಗೆ ಅಥಣಿ ನಾಯಕನೇ ಕಾರಣ, ಡಿಕೆಶಿ ಜತೆ ಸವದಿ ಸಂಪರ್ಕ: ಲಖನ್ ಜಾರಕಿಹೊಳಿ
”ಉಮೇಶ್ ಕತ್ತಿ ಅವರು ಕವಟಗಿಮಠ ಸಭೆ ಕರೆದಿದ್ದಾರೆ ಎಂದಿದ್ದಾರೆ. ಆದರೆ, ನನ್ನನ್ನು ಮತ್ತು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲರನ್ನು ಆಹ್ವಾನಿಸಿಲ್ಲ. ಪಕ್ಷದಿಂದಲೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಿತ್ತು. ಆದರೆ, ಅದು ಅಧಿಕೃತ ಸಭೆಯಲ್ಲಎಂದು ಈರಣ್ಣ ಕಡಾಡಿ, ಪಿ. ರಾಜೀವ್ ಹೇಳಿದ್ದಾರೆ. ಹಾಗಾಗಿ ಈ ವಿಚಾರವನ್ನು ದೊಡ್ಡದು ಮಾಡಲು ಹೋಗುವುದಿಲ್ಲ”, ಎಂದರು.
”ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇದೆ. ಆರೋಪ, ಪ್ರತ್ಯಾರೋಪ ಮಾಡಲು ಸಮಯ ಇಲ್ಲ. ಪಕ್ಷದ ದೃಷ್ಟಿಯಿಂದ ಈಗ ಆಗಿರೋ ಬೆಳವಣಿಗೆ ಸರಿಯಲ್ಲ. ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ, ಜೊಲ್ಲೆ ಮುಂತಾದವರೆಲ್ಲ ಸಭೆ ಸೇರಿ ಮುಂದೆ ಭಿನ್ನಾಭಿಪ್ರಾಯ ಆಗದಂತೆ ನೋಡಿಕೊಳ್ಳುತ್ತೇವೆ” ಎಂದ ಬಾಲಚಂದ್ರ ಜಾರಕಿಹೊಳಿ, ಈಗಿನ ಬಿಕ್ಕಟ್ಟು ಶೀಘ್ರ ಶಮನಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಮತ್ತು ಲಕ್ಷ್ಮಣ ಸವದಿ ಸಂಪರ್ಕದ ಬಗ್ಗೆ ಪ್ರಶ್ನಿಸಿದಾಗ, ”ನನಗೆ ಮಾಹಿತಿ ಇಲ್ಲ” ಎಂದ ಬಾಲಚಂದ್ರ, ”ಮೂವರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರ್ತಾರೆ ಎಂಬುದು ನನಗೆ ಗೊತ್ತಿಲ್ಲ. ರಾಜ್ಯವನ್ನು ಕಟ್ಟುವ ನಾಯಕರೇ ಬೆಳಗಾವಿಯಲ್ಲಿದ್ದಾರೆ. ಜಿಲ್ಲೆಯ ನಾಯಕರು ಒಟ್ಟಾಗಿ ಕೂಡಿ ಪಕ್ಷ ಕಟ್ಟೋಣ. ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿ ಜಿಲ್ಲಾಉಸ್ತುವಾರಿ ಸಚಿವ ಗೋವಿಂದ್ ಕಾರಜೋಳಗೆ ಸಹಕಾರ ನೀಡೋಣ” ಎಂದು ಮನವಿ ಮಾಡಿದರು.
ರಮೇಶ್ ಮಂತ್ರಿಯಾಗ್ತಾರೆ
”ಕೆಲವರು ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಬಿಡಲಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್‌ನವರಿಂದ ಈ ಸುದ್ದಿ ಹಬ್ಬಿರಬಹುದು. ಮುಂದಿನ ಚುನಾವಣೆಯಲ್ಲಿಅರಬಾವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆ ನಿಶ್ಚಿತ. ಈ ಬಗ್ಗೆ ಬಾಂಡ್ ಬರೆದುಕೊಡಲು ಸಹ ಸಿದ್ಧ”, ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಜಾರಕಿಹೊಳಿ ಸಹೋದರರನ್ನು ಹೊರಗಿಟ್ಟು ಉಮೇಶ್ ಕತ್ತಿ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ!
”ಪಕ್ಷ ವಿರೋಧಿ ಚಟುವಟಿಕೆಯಲ್ಲಿ ನಾನೂ ಇಲ್ಲ, ರಮೇಶ್ ಜಾರಕಿಹೊಳಿ ಕೂಡ ಇಲ್ಲ. ರಮೇಶ್‌ಗೆ ಸಚಿವ ಸ್ಥಾನ ನೀಡುವುದು ಸಿಎಂಗೆ ಬಿಟ್ಟ ವಿಚಾರ. ಪಕ್ಷದ ಹಿತದೃಷ್ಟಿಯಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ಕೊಡಬೇಕು. ಕೋರ್ಟ್ ಸಮಸ್ಯೆ ಇರೋ ಕಾರಣಕ್ಕೆ ರಮೇಶ್ ಮಂತ್ರಿಯಾಗಿಲ್ಲ. ಇದು ಕ್ಲಿಯರ್ ಆದರೆ ಅವರು ಮಂತ್ರಿ ಆಗಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
Read more
[wpas_products keywords=”deal of the day sale today offer all”]