ಹೈಲೈಟ್ಸ್:
- ಜಪಾನ್ನ ಕ್ಯೋಟೋ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನ
- ಚರ್ಮದ ಮೇಲೆ 21 ಗಂಟೆಗೂ ಹೆಚ್ಚು ಕಾಲ ಓಮಿಕ್ರಾನ್ ಜೀವಂತ
- ಮೂಲ ಕೊರೊನಾ ವೈರಸ್ಗಿಂತ ಎರಡು ಪಟ್ಟು ಹೆಚ್ಚು ಸಮರ್ಥ
- ಆಲ್ಫಾ, ಬೀಟಾ, ಡೆಲ್ಟಾ ಮತ್ತು ಗಾಮಾಗಳಿಗಿಂತ ಓಮಿಕ್ರಾನ್ ಶಕ್ತಿಶಾಲಿ
ಜಪಾನ್ನ ಕ್ಯೋಟೊ ಪ್ರಿಫೆಕ್ಚುವಲ್ ಯುನಿವರ್ಸಿಟಿ ಆಫ್ ಮೆಡಿಸಿನ್ನ ಸಂಶೋಧಕರು ವುಹಾನ್ನಲ್ಲಿ ಮೊದಲು ಪತ್ತೆಯಾದ ಸಾರ್ಸ್-ಕೋವ್-2 ತಳಿ ಹಾಗೂ ಇತರೆ ಎಲ್ಲ ರೂಪಾಂತರಗಳ ನಡುವಿನ ವೈರಲ್ ಪರಿಸರೀಯ ಸ್ಥಿರತೆಯ ವ್ಯತ್ಯಾಸವನ್ನು ವಿಶ್ಲೇಷಣೆ ಮಾಡಿದ್ದಾರೆ.
ಬಯೋಆರ್ಕ್ಸಿವ್ ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಪರಾಮರ್ಶನಾ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. ಆಲ್ಫಾ, ಬೀಟಾ, ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಮೂಲ ಕೊರೊನಾ ವೈರಸ್ಗಿಂತಲೂ ಪ್ಲಾಸ್ಟಿಕ್ ಹಾಗೂ ಚರ್ಮದ ಮೇಲ್ಮೈ ಮೇಲೆ ಎರಡು ಪಟ್ಟು ಹೆಚ್ಚು ಕಾಲ ಬದುಕಬಲ್ಲವು ಎಂದು ಕಂಡುಕೊಂಡಿರುವುದಾಗಿ ತಿಳಿಸಿದೆ.
‘ಈ ವೈರಸ್ ರೂಪಾಂತರಗಳ ಅಧಿಕ ಪರಿಸರೀಯ ಸ್ಥಿರತೆಯು ಸಂಪರ್ಕ ಪ್ರಸರಣದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಅವುಗಳ ಹರಡುವಿಕೆಗೆ ಕಾರಣವಾಗುತ್ತದೆ’ ಎಂದು ಸಂಶೋಧಕರು ತಿಳಿಸಿದ್ದಾರೆ.
‘ಕೊರೊನಾ ವೈರಸ್ ರೂಪಾಂತರಗಳ ನಡುವೆ ಓಮಿಕ್ರಾನ್ ಅತ್ಯಧಿಕ ಪರಿಸರೀಯ ಸ್ಥಿರತೆಯನ್ನು ಹೊಂದಿದೆ ಎಂಬುದನ್ನು ಅಧ್ಯಯನ ಸಾಬೀತುಪಡಿಸಿದೆ. ಡೆಲ್ಟಾ ರೂಪಾಂತರದ ಜಾಗವನ್ನು ಆಕ್ರಮಿಸಿ, ಹೆಚ್ಚು ವೇಗವಾಗಿ ಹರಡಲು ಇದು ಪ್ರಮುಖ ಕಾರಣಗಳಲ್ಲಿ ಒಂದು’ ಎಂದು ಹೇಳಿದ್ದಾರೆ.
ಪ್ಲಾಸ್ಟಿಕ್ ಮೇಲೆ ವೈರಸ್ ಅಸ್ತಿತ್ವ
ಪ್ಲಾಸ್ಟಿಕ್ ವಸ್ತುಗಳ ಮೇಲೆ ಮೂಲ ಕೊರೊನಾ ವೈರಸ್ ತಳಿ ಹಾಗೂ ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ರೂಪಾಂತರಗಳ ಸರಾಸರಿ ಬದುಕುಳಿಯುವ ಅವಧಿ ಕ್ರಮವಾಗಿ 56 ಗಂಟೆಗಳು, 156.6 ಗಂಟೆಗಳು, 59.3 ಗಂಟೆಗಳು ಮತ್ತು 114 ಗಂಟೆಗಳಾಗಿವೆ ಎಂದು ಅಧ್ಯಯನ ತೋರಿಸಿದೆ. ಆದರೆ ಓಮಿಕ್ರಾನ್ ತಳಿ 193.5 ಗಂಟೆ ಜೀವಂತ ಇರಬಲ್ಲದು ಎಂದು ಸಂಶೋಧಕರು ತಿಳಿಸಿದ್ದಾರೆ.
ಚರ್ಮದ ಮೇಲೆ ಜೀವಿತಾವಧಿ
ಚರ್ಮದ ಮಾದರಿಗಳ ಮೇಲೆ ಕೊರೊನಾ ವೈರಸ್ ಅಸ್ತಿತ್ವದ ಸಮಯವನ್ನು ಕೂಡ ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಮೂಲ ಕೊರೊನಾ ವೈರಸ್ 8.6 ಸರಾಸರಿ ಗಂಟೆ ಚರ್ಮದ ಮೇಲೆ ಬದುಕುಳಿಯಬಲ್ಲದು. ಇದು ಆಲ್ಫಾದಲ್ಲಿ 19.6 ಗಂಟೆ, ಬೀಟಾದಲ್ಲಿ 19.1 ಗಂಟೆ, ಗಾಮಾದಲ್ಲಿ 11 ಗಂಟೆ ಮತ್ತು ಡೆಲ್ಟಾದಲ್ಲಿ 16.8 ಗಂಟೆ ಜೀವಂತ ಇರಬಲ್ಲದು. ಓಮಿಕ್ರಾನ್ ತಳಿ 21.1 ಗಂಟೆ ಇರಬಲ್ಲದು ಎಂದು ತಿಳಿಸಿದ್ದಾರೆ.
ಆಲ್ಫಾ ಮತ್ತು ಬೀಟಾ ರೂಪಾಂತರಗಳ ಉಳಿವಿನ ನಡುವೆ ಅಷ್ಟೇನೂ ಹೆಚ್ಚು ಅಂತರವಿಲ್ಲ. ಅವುಗಳು ಒಂದೇ ರೀತಿಯ ಪರಿಸರೀಯ ಸಾಮರ್ಥ್ಯ ಹೊಂದಿವೆ. ಹೆಚ್ಚಿದ ಪರಿಸರೀಯ ಸಾಮರ್ಥ್ಯದೊಂದಿಗೆ ಆಲ್ಫಾ, ಬೀಟಾ, ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಎಥನಾಲ್ ಪ್ರತಿರೋಧ ಪ್ರತಿಕ್ರಿಯೆಯಲ್ಲಿ ಕೊಂಚ ಏರಿಕೆ ತೋರಿಸಿದರೂ, ಎಲ್ಲ ತಳಿಗಳು ಚರ್ಮದ ಮೇಲೆ ಶೇ 35ರಷ್ಟು ಎಥನಾಲ್ಗೆ 15 ಸೆಕೆಂಡ್ ತೆರೆದಿಟ್ಟರೆ ನಿಷ್ಕ್ರಿಯಗೊಳ್ಳುತ್ತವೆ.
Read more
[wpas_products keywords=”deal of the day sale today offer all”]