Karnataka news paper

ರಾಜ್ಯದ ಐವರು ಸೇರಿ 107 ಸಾಧಕರಿಗೆ ಪದ್ಮ ಶ್ರೀ, ಜನರಲ್ ಬಿಪಿನ್ ರಾವತ್ ಗೆ ಪದ್ಮವಿಭೂಷಣ


ANI

ನವದೆಹಲಿ: 73ನೇ ಗಣರಾಜ್ಯೋತ್ಸವದ ಅಂಗವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಶ್ರೀ, ಪದ್ಮವಿಭೂಷಣ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಈ ಬಾರಿ ಕರ್ನಾಟಕದ ಐವರು ಸೇರಿದಂತೆ ಒಟ್ಟು 107 ಸಾಧಕರಿಗೆ ಪದ್ಮ ಶ್ರೀ ಪ್ರಶಸ್ತಿ ನೀಡಲಾಗಿದೆ.

ಇತ್ತೀಚಿಗೆ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸೇರಿದಂತೆ ನಾಲ್ವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.

ಇದನ್ನು ಓದಿ: ಗಣರಾಜ್ಯೋತ್ಸವ ಅಂಗವಾಗಿ 939 ಪೊಲೀಸ್ ಪದಕ ಘೋಷಣೆ; ಜಮ್ಮು-ಕಾಶ್ಮೀರಕ್ಕೆ ಅತಿ ಹೆಚ್ಚು ಪದಕ!

ರಾಜ್ಯದ ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರವಾಗಿ ಪದ್ಮಶ್ರಿ ನೀಡಲಾಗಿದ್ದು, ಕಲಾ ವಿಭಾಗದಲ್ಲಿ ಎಚ್ ಆರ್ ಕೇಶವಮೂರ್ತಿ, ವಿಜ್ಞಾನ ವಿಭಾಗದಲ್ಲಿ ಸುಬ್ಬಣ್ಣ ಅಯ್ಯಪ್ಪಣ್ಣ, ಕೃಷಿ ಸಂಶೋಧನೆಯಲ್ಲಿ ಅಬ್ದುಲ್ ಖಾದರ್ ನಡಕಟ್ಟಿನ್ ಹಾಗೂ ಅಮೈ ಮಹಾಲಿಂಗ್ ನಾಯ್ಕ್ ಅವರಿಗೆ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇನ್ನೂ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಪದ್ಮಭೂಷಣ ಹಾಗೂ ಲಸಿಕೆ ತಯಾರಕರಾದ ಕೃಷ್ಣ ಎಲ್ಲಾ, ಸುಚಿತ್ರಾ ಎಲ್ಲಾ, ಸೈರಸ್ ಪೂನವಾಲಾ, ಬುದ್ಧದೇಬ್ ಭಟ್ಟಾಚಾರ್ಯಾ, ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲಾ ಹಾಗೂ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸೇರಿದಂತೆ 128 ಸಾಧಕರಿಗೆ ಪದ್ಮ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.

ಈ ಬಾರಿ 4 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳು ಇವೆ. ಪ್ರಶಸ್ತಿ ಪುರಸ್ಕೃತರಲ್ಲಿ 34 ಮಹಿಳೆಯರು ಮತ್ತು 10 ವಿದೇಶಿಯರು ಮತ್ತು 13 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಇದ್ದಾರೆ.





Read more

[wpas_products keywords=”deal of the day”]