Karnataka news paper

ಮತ್ತೆ ಕುಸಿತದತ್ತ ಷೇರುಪೇಟೆ ಸೂಚ್ಯಂಕ: ಮಂಗಳವಾರ ವಹಿವಾಟು ಆರಂಭದಲ್ಲಿಯೇ 905 ಅಂಕ ಕುಸಿತ


PTI

ಮುಂಬೈ: ಇಂದು ಮಂಗಳವಾರ ದಿನದ ವಹಿವಾಟು ಆರಂಭ ದಿನ ಸೆನ್ಸೆಕ್ಸ್ ಮತ್ತೆ ಕುಸಿತದ ಹಾದಿಯಲ್ಲಿಯೇ ಮುಂದುವರಿದಿದೆ. ಇಂದು ಬೆಳಗ್ಗೆ ವಹಿವಾಟು ಆರಂಭ ಹಂತಕ್ಕೆ ಸೆನ್ಸೆಕ್ಸ್ 905.16 ಪಾಯಿಂಟ್‌ಗಳಿಂದ 56,586.35 ಕ್ಕೆ ಕುಸಿದಿದೆ, ನಿಫ್ಟಿ 253.80 ಪಾಯಿಂಟ್‌ಗಳಿಂದ 16,895.30 ಕ್ಕೆ ಇಳಿದಿದೆ.

30 ಘಟಕಗಳ ಬಿಎಸ್‌ಇ ಸೆನ್ಸೆಕ್ಸ್ ಬೆಳಗ್ಗೆ 9.17 ರ ಹೊತ್ತಿಗೆ 794.86 ಪಾಯಿಂಟ್ ಅಂದರೆ ಶೇಕಡಾ 1.38 56696.65 ಕ್ಕೆ ಇಳಿದಿದೆ. ಅಂತೆಯೇ, 50 ಘಟಕಗಳ ಎನ್‌ಎಸ್‌ಇ ನಿಫ್ಟಿ 16909.30ಕ್ಕೆ ವಹಿವಾಟು ನಡೆಸಿ 239.80 ಪಾಯಿಂಟ್‌ಗಳು ಅಂದರೆ ಶೇಕಡಾ 1.40 ರಷ್ಟು ಕುಸಿದಿದೆ.

ಇಂದಿನ ವಹಿವಾಟು ಆರಂಭಕ್ಕೆ ರಿಯಾಲಿಟಿ, ಮಾಹಿತಿ ತಂತ್ರಜ್ಞಾನ, ಬಂಡವಾಳ ಸರಕುಗಳು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಕುಸಿತ ಕಂಡುಬಂದಿದೆ. ಲೋಹದ ವಲಯಗಳ ಉದ್ಯಮಗಳಲ್ಲಿ ಸೆನ್ಸೆಕ್ಸ್ ಇಂದು ಸ್ವಲ್ಪ ಏರಿಕೆ ಕಂಡುಬಂದಿದೆ.

ಇದನ್ನೂ ಓದಿ: ಹೂಡಿಕೆದಾರರಿಗೆ ‘ಬ್ಲ್ಯಾಕ್ ಮಂಡೆ’ಯಾದ ದಲಾಲ್ ಸ್ಟ್ರೀಟ್: ಷೇರು ಮಾರುಕಟ್ಟೆಯಲ್ಲಿ 9 ಲಕ್ಷ ಕೋಟಿ ರೂ. ನಷ್ಟ

ನಿನ್ನೆ, ಪ್ರಪಂಚದಾದ್ಯಂತ ಏರುತ್ತಿರುವ ಹಣದುಬ್ಬರದಿಂದಾಗಿ ಹಲವಾರು ಮಾರುಕಟ್ಟೆಗಳಲ್ಲಿ ದರ ಏರಿಕೆಯಿಂದ ಸೆನ್ಸೆಕ್ಸ್ ಬಹಳ ಪ್ರಪಾತಕ್ಕೆ ಇಳಿದು ಹೂಡಿಕೆದಾರರು ಸಾಕಷ್ಟು ನಷ್ಟ ಅನುಭವಿಸಿದ್ದರು. ಸೆನ್ಸೆಕ್ಸ್ 2 ಸಾವಿರಕ್ಕೂ ಅಧಿಕ ಪಾಯಿಂಟ್ ಕುಸಿತ ಕಂಡುಬಂದಿತ್ತು.

ಇದನ್ನೂ ಓದಿ: ವಾರದ ವಹಿವಾಟಿನ ಆರಂಭಿಕ ದಿನವೇ 1545 ಅಂಕ ಕಳೆದುಕೊಂಡ ಸೆನ್ಸೆಕ್ಸ್, ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ. ನಷ್ಟ

ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಬಜೆಟ್‌ನಲ್ಲಿ ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆ ದರವನ್ನು ಹೆಚ್ಚಿಸುವ ವದಂತಿಯು ಹೂಡಿಕೆದಾರರ ಆತಂಕವನ್ನು ಹೆಚ್ಚಿಸಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



Read more…

[wpas_products keywords=”deal of the day”]