The New Indian Express
ಧಾರವಾಡ: ಧಾರವಾಡದಲ್ಲಿ ಕೋವಿಡ್-19 ಮೂರನೇ ಅಲೆ ಉಲ್ಬಣಿಸುತ್ತಿದ್ದು, ಜಿಲ್ಲೆಯಲ್ಲಿ ಪ್ರತಿನಿತ್ಯ 1000 ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,000 ನ್ನು ದಾಟಿದೆ.
ಕಳೆದ 2 ವಾರಗಳಲ್ಲಿ ಜಿಲ್ಲೆಯಲ್ಲಿ ಕೊರೋನಾ ಉಲ್ಬಣಗೊಂಡಿದ್ದು, ಭಾನುವಾರದಂದು 955 ಹೊಸ ಪ್ರಕರಣಗಳು ವರದಿಯಾಗಿತ್ತು. ಧಾರವಾಡದಲ್ಲಿ ಕೇಸ್ ಹೆಚ್ಚಳದ ಜೊತೆಗೆ ಪಾಸಿಟಿವಿಟಿ ದರ ಶೇ.17-21 ರಷ್ಟಿದ್ದು ಆರೋಗ್ಯಾಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.
ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಿದರೂ ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ.4.67 ರಷ್ಟಿದ್ದು ಸೋಮವಾರದವರೆಗಿನ ಅಂಕಿ-ಅಂಶಗಳ ಪ್ರಕಾರ 4111 ರೋಗಿಗಳ ಪೈಕಿ 192 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರೆ, ಉಳಿದವರು ಮನೆಯಲ್ಲಿಯೇ ಐಸೊಲೇಟ್ ಆಗಿ ಚಿಕಿತ್ಸೆ ಪಡೆದಿದ್ದಾರೆ ಇನ್ನೂ ಕೆಲವರು ಕೋವಿಡ್ ಕೇರ್ ಕೇಂದ್ರಗಳಿಗೆ ತೆರಳಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 2-3ನೇ ವಾರದಲ್ಲಿ ಕೊರೋನಾ ಸೋಂಕು ಕಡಿಮೆಯಾಗಬಹುದು, ಅಲ್ಲಿಯವರೆಗೂ ಎಚ್ಚರದಿಂದಿರಿ: ಡಾ ಕೆ ಸುಧಾಕರ್
ಜಿಲ್ಲಾಧಿಕಾರಿಗಳ ಕಚೇರಿಯ ಮಾಹಿತಿಯ ಪ್ರಕಾರ, ಒಟ್ಟು 3135 ಬೆಡ್ ಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಲಾಗಿದೆ ಈ ಪೈಕಿ 192 ಬೆಡ್ ಗಳು ಭರ್ತಿಯಾಗಿದ್ದು, 2943 ಬೆಡ್ ಗಳು ಇನ್ನೂ ಉಳಿದಿವೆ. ಆಸ್ಪತ್ರೆಗೆ ದಾಖಲಾಗಿರುವವರ ಪೈಕಿ 16 ಮಂದಿಗೆ ಅಕ್ಯೂಟ್ ರೆಸ್ಪಿರೇಟರಿ ಇನ್ಫೆಕ್ಷನ್ (ಎಸ್ಎಆರ್ ಐ) ಲಕ್ಷಣಗಳನ್ನು ಹೊಂದಿದ್ದಾರೆ. ಉಳಿದ ಮಂದಿಗೆ ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ನಿತ್ಯ 6000 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಈಗ ಅದನ್ನು 8000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇನ್ನೂ ಹೆಚ್ಚಿನ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಯೋಜನೆ ಹೊಂದಿದೆ.
ಸೋಂಕು ಕಡಿಮೆ ಮಾಡುವುದಕ್ಕೆ ಮುಂದಿನ 8-10 ದಿನಗಳು ಬಹಳ ನಿರ್ಣಾಯಕವಾಗಿದ್ದು ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಹೇಳಿದೆ.
Read more
[wpas_products keywords=”deal of the day”]