ಚಾಮರಾಜನಗರ: ಅರಣ್ಯದಲ್ಲಿ ಹೆಚ್ಚುತ್ತಿರುವ ಹುಲಿಗಳು, ಹರ್ಷದ ಜತೆ ಸಂಘರ್ಷದ ಆತಂಕ
ಮತ್ತಿಗೋಡು ವಲಯದಲ್ಲಿ ಮಂಗಳವಾರ ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿರುವುದು ಪತ್ತೆಯಾಗಿದೆ. ಕಲ್ಲಹಳ್ಳ ವಲಯದಲ್ಲಿಸೋಮವಾರ-ಮಂಗಳವಾರವೂ ಹುಲಿ ನೇರವಾಗಿ ಕಾಣಿಸಿಕೊಂಡಿದೆ. ಇದೇ ರೀತಿ ನಾಗರಹೊಳೆ, ಡಿ.ಬಿ.ಕುಪ್ಪೆ, ಅಂತರಸಂತೆ, ಹುಣಸೂರು, ಮೇಟಿಕುಪ್ಪೆ ವಲಯಗಳಲ್ಲಿ ಗಣತಿದಾರರಿಗೆ ಹುಲಿ ಕಾಣಿಸಿಕೊಂಡಿದ್ದರೆ, ವೀರನಹೊಸಹಳ್ಳಿ ವಲಯದಲ್ಲಿ ಜಾರ್‌ಗಲ್-ತುಪ್ಪದಕೊಳ ಗಸ್ತಿನ ಅಂಚಿನಲ್ಲಿ ಹುಲಿ ಘರ್ಜಿಸಿರುವುದನ್ನು ದಾಖಲಿಸಿದ್ದಾರೆ. ಎಲ್ಲ ವಲಯಗಳಲ್ಲೂ ಆನೆ, ಕಾಟಿಗಳ ನೇರ ಕಾಣಿಸಿಕೊಂಡಿರುವುದನ್ನು ಆಪ್‌ನಲ್ಲಿ ದಾಖಲಿಸಿದ್ದಾರೆ. ಅಲ್ಲದೆ ರಣಹದ್ದುಗಳು ಮತ್ತು ಇತರೆ ಪಕ್ಷಿಗಳನ್ನು ವೀಕ್ಷಿಸಿ, ಅವುಗಳನ್ನು ಕೂಡ ದಾಖಲೆ ಮಾಡಿದ್ದಾರೆ.
ಮಲ, ಹಿಕ್ಕೆ, ಲದ್ದಿ ಸಂಗ್ರಹ
ಎಲ್ಲಕಡೆಯೂ ಹುಲಿ, ಆನೆ, ಕಾಟಿ ಮತ್ತಿತರ ದೊಡ್ಡ ಸಸ್ಯಹಾರಿ ಪ್ರಾಣಿಗಳ ಮಲ, ಲದ್ದಿ ಹಾಗೂ ಹಿಕ್ಕೆಯ ಫೋಟೊವನ್ನು ಆಪ್‌ನಲ್ಲಿದಾಖಲಿಸಿ, ಅದರ ಮಾದರಿಯನ್ನು ಸಂಗ್ರಹಿಸಿದರು. ಇದನ್ನು ಡೆಹರಾಡೂನ್‌ನ ವೈಲ್ಡ್ ಲೈಫ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾಗೆ ಕಳುಹಿಸಲಾಗುವುದು. ಪ್ರಾಣಿಗಳ ಹೆಜ್ಜೆ, ಗಡಿ ಗುರುತಿಸುವಿಕೆ, ಮರಗಳನ್ನು ಪರಚಿರುವ ಗುರುತನ್ನು ಪತ್ತೆಹಚ್ಚಿ ಆಪ್‌ನಲ್ಲಿದಾಖಲಿಸಿದರು.
ಜ.27 ರಿಂದ ಲೈನ್ ಟ್ರಾತ್ರ್ಯಜಾಕ್ಟ್
ಜ.27 ರಿಂದ ಫೆ.1ರವರೆಗೆ 105 ಲೈನ್ ಟ್ರಾತ್ರ್ಯಜಾಕ್ಟ್ ಮೂಲಕ ಎರಡು ಕಿ.ಮೀ.ವರೆಗೆ ಸಂಚರಿಸಿ ಹುಲಿಯ ಆಹಾರವಾದ ಸಸ್ಯಹಾರಿ ಪ್ರಾಣಿಗಳ ಹಾಗೂ ಸಸ್ಯಪ್ರಭೇದಗಳ ಗಣತಿ ನಡೆಯಲಿದೆ ಎಂದು ಎಸಿಎಫ್ ಸತೀಶ್ ತಿಳಿಸಿದ್ದಾರೆ.
ಬಂಡೀಪುರ ಉದ್ಯಾನದಲ್ಲಿ ಪ್ರಭಾರ ಕಾರ್ಯ ಭಾರ; ಹಲವು ದಿನ ಕಳೆದರೂ ಪೂರ್ಣಾವಧಿ ಅಧಿಕಾರಿಗಳ ನೇಮಕವಿಲ್ಲ!
ಮುಂಜಾನೆ ಸಫಾರಿ: ಜ.26 ರಂದು ಗಣರಾಜ್ಯೋತ್ಸವದ ಅಂಗವಾಗಿ ಗಣತಿಗೆ ವಿರಾಮ ನೀಡಿದ್ದು, ಎಂದಿನಂತೆ ಎಲ್ಲೆಡೆ ಬೆಳಗಿನ ವೇಳೆಯೂ ಸಫಾರಿ ವ್ಯವಸ್ಥೆ ಇರಲಿದೆ ಎಂದು ಡಿಸಿಎಫ್ ಮಹೇಶ್ ಕುಮಾರ್ ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]