Karnataka news paper

ವಾರದ ವಹಿವಾಟಿನ ಆರಂಭಿಕ ದಿನವೇ 1545 ಅಂಕ ಕಳೆದುಕೊಂಡ ಸೆನ್ಸೆಕ್ಸ್, ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ. ನಷ್ಟ


PTI

ಮುಂಬೈ: ವಾರದ ಮೊದಲ ವಹಿವಾಟಿನ ದಿನವೇ ಭಾರತೀಯ ಷೇರುಮಾರುಕಟ್ಟೆ ಭಾರಿ ನಷ್ಟ ಅನುಭವಿಸಿದ್ದು, ಹೂಡಿಕೆದಾರರ ಸುಮಾರು 10 ಲಕ್ಷ ಕೋಟಿ ರೂ ನಷ್ಟವಾಗಿದೆ.

ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಶೇ.2.6ರಷ್ಟು ಕುಸಿತ ಕಂಡಿದೆ. ಸೆನ್ಸೆಕ್ಸ್ 2.62 ಶೇಕಡಾ ಅಥವಾ 1545.67 ಅಂಕಗಳನ್ನು ಕಳೆದುಕೊಂಡು 57,491.51ಅಂಶಗಳಿಗೆ ವಹಿವಾಟು ಕೊನೆಗೊಳಿಸಿದೆ.

ಇಂಟ್ರಾ-ಡೇನಲ್ಲಿ ಸೆನ್ಸೆಕ್ಸ್ 56,984.01 ಪಾಯಿಂಟ್‌ಗಳಿಗೆ ಕುಸಿದಿದ್ದು, ಇದು ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 2,053.17ಅಂಕಗಳ ಕುಸಿತದೊಂದಿಗೆ 59,037.18 ಅಂಶಗಳಿಗೆ ಕುಸಿದು ವಹಿವಾಟು ಅಂತ್ಯಗೊಳಿಸಿತ್ತು. ಇದು ಏಪ್ರಿಲ್ 2021 ರಿಂದ ದಿನದ ಅಂತರದ ಅತಿದೊಡ್ಡ ಕುಸಿತವಾಗಿತ್ತು.

ಇದನ್ನೂ ಓದಿ: ಯಾವ ಸಂಸ್ಥೆ ಷೇರು ಕೊಳ್ಳಲಿ? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ!

ಇದೀಗ ಮತ್ತೆ 1545 ಅಂಗಳ ಕುಸಿತಕಂಡಿದೆ. ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ನ ನಿಫ್ಟಿ 50ಯಲ್ಲಿ ಕೂಡ ಶೇಕಡಾ 2.66 ರಷ್ಟು ಕುಸಿತ ಕಂಡುಬಂದಿದ್ದು, ಒಟ್ಟು 468.05 ಪಾಯಿಂಟ್‌ಗಳ ಕುಸಿತದೊಂದಿಗೆ 17,149.10 ಪಾಯಿಂಟ್‌ಗಳಿಗೆ ವಹಿವಾಟು ಅಂತ್ಯಗೊಳಿಸಿದೆ. ಆ ಮೂಲಕ ಭಾರತೀಯ ಷೇರು  ಮಾರುಕಟ್ಟೆಗಳ ಪ್ರಮುಖ ಸೂಚ್ಯಂಕಗಳು ಸತತ ಐದನೇ ದಿನವೂ ರೆಡ್ ಮಾರ್ಕ್ ನಲ್ಲಿ ವಹಿವಾಟು ನಡೆಸಿದವು. 

ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ವಿಪ್ರೋ, ಟೆಕ್ ಮಹೀಂದ್ರ, ಟೈಟನ್, ರಿಲಯನ್ಸ್, ಹೆಚ್ ಸಿಐ ಟೆಕ್, ಬಜಾಜ್ ಫಿನ್ ಸರ್ವಿಸ್, ಏಷ್ಯನ್ ಪೇಂಟ್ಸ್, ಕೋಟಕ್ ಬ್ಯಾಂಕ್ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.



Read more…

[wpas_products keywords=”deal of the day”]