ಹೈಲೈಟ್ಸ್:
- ಮೆರಿಲ್ಯಾಂಡ್‌ನ ಚಾರ್ಲ್ಸ್ ಕೌಂಟಿಯ ಮನೆಯೊಳಗೆ ಮೃತದೇಹ ಪತ್ತೆ
- ಮೃತದೇಹದ ಪಕ್ಕದ ಪಂಜರಗಳಲ್ಲಿ 124 ಬಗೆ ಬಗೆಯ ಹಾವುಗಳು
- ಮನೆಯಲ್ಲಿ ಹಾವುಗಳ ರಾಶಿ ಇದ್ದದ್ದು ನೆರೆ ಮನೆಯವರಿಗೂ ತಿಳಿದಿರಲಿಲ್ಲ
ಈ ಹಾವುಗಳಲ್ಲಿ ಕೆಲವು ಬಹಳ ವಿಷಕಾರಿ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಪೊಲೀಸರು ಈ ವ್ಯಕ್ತಿಯ ಮನೆಗೆ ತೆರಳಿದಾಗ ಪಂಜರಗಳ ಒಳಗೆ ಹಾವುಗಳು ಪತ್ತೆಯಾಗಿವೆ. ಇವುಗಳನ್ನು ಅಕ್ರಮವಾಗಿ ಇರಿಸಿಕೊಳ್ಳಲಾಗಿತ್ತು ಎಂದು ಚಾರ್ಲ್ಸ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ಕಲ್ಯಾಣ ಕಾರ್ಯಕ್ರಮದ ಸಲುವಾಗಿ ಮನೆ ಪರಿಶೀಲನೆಗೆ ತೆರಳಿದಾಗ ಈ ಅನಾಹುತ ಬೆಳಕಿಗೆ ಬಂದಿದೆ. ಈ ಹಾವುಗಳನ್ನು ಅತ್ಯಂತ ಸೂಕ್ಷ್ಮವಾಗಿ ಆರೈಕೆ ಮಾಡಲಾಗುತ್ತಿತ್ತು. ಮನೆಯ ಉದ್ದಗಲಕ್ಕೂ ಪಂಜರಗಳನ್ನು ಇರಿಸಲಾಗಿತ್ತು ಎಂದು ಚಾರ್ಲ್ಸ್ ಕೌಂಟಿ ವಕ್ತಾರೆ ಜೆನಿಫರ್ ಹ್ಯಾರಿಸ್ ತಿಳಿಸಿದ್ದಾರೆ.
ಕೌಂಟಿಯ ಇಎಂಎಸ್ ಮತ್ತು ಅಗ್ನಿಶಾಮಕ ಅಧಿಕಾರಿಗಳು ಮುಂದಿನ ಬಾಗಿಲನ್ನು ಒಡೆದಾಗ ಒಳಗೆ 49 ವರ್ಷದ ವ್ಯಕ್ತಿ ಸತ್ತುಬಿದ್ದಿರುವುದು ಕಂಡುಬಂದಿತ್ತು. ಆತನ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆತನ ಸಾವಿಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇಲ್ಲಿ ಯಾವುದೇ ರಹಸ್ಯ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿಲ್ಲ. ಹಾವು ಕೂಡ ಅವರನ್ನು ಕಚ್ಚಿ ಸಾಯಿಸಿಲ್ಲ ಎಂದು ತಿಳಿಸಿದ್ದಾರೆ.
ಮರು ದಿನ ಮನೆಯಿಂದ ಎಲ್ಲ ಹಾವುಗಳನ್ನು ತೆರವುಗೊಳಿಸಲಾಗಿದೆ. ಅವುಗಳಲ್ಲಿ ರಾಟಲ್ ಸ್ನೇಕ್, ಕಾಳಿಂಗ ಸರ್ಪ, ಬ್ಲ್ಯಾಂಕ್ ಮಂಬಾಸ್ ಮತ್ತು 14 ಅಡಿ ಉದ್ದದ ಬರ್ಮಾ ಹೆಬ್ಬಾವು ಸೇರಿವೆ ಎಂದು ಹ್ಯಾರಿಸ್ ಹೇಳಿದ್ದಾರೆ.
‘ಯಾವುದೇ ಹಾವು ತಪ್ಪಿಸಿಕೊಂಡಿರುವ ಯಾವುದೇ ಭದ್ರತಾ ಸಮಸ್ಯೆ ನಮಗೆ ಕಾಣಿಸುತ್ತಿಲ್ಲ. ಸಮುದಾಯದಲ್ಲಿ ಅವರು ನೆರೆ ಹೊರೆಯವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಆದರೆ ಯಾರೊಬ್ಬರೂ ಅವರ ಮನೆಯ ಒಳಗೆ ಪ್ರವೇಶಿಸಿರಲಿಲ್ಲ. ಹೀಗಾಗಿ ಅವರ ಮನೆಯ ಒಳಗಿನ ಜೀವನ ಹೇಗೆ ಇತ್ತು ಎನ್ನುವುದು ಯಾರಿಗೂ ತಿಳಿಯಲು ಸಾಧ್ಯವಾಗಿರಲಿಲ್ಲ’ ಎಂದು ತಿಳಿಸಿದ್ದಾರೆ.
ಮೆರಿಲ್ಯಾಂಡ್ ಮನೆಯಲ್ಲಿ ಪತ್ತೆಯಾದ ಹಾವುಗಳ ಅಕ್ರಮ ಸಂಗ್ರಹದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಪ್ರಾಣಿ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ. ಆ ಮನೆಯಲ್ಲಿ ಕಂಡುಬಂದ ಸನ್ನಿವೇಶವನ್ನು ಹಿಂದೆ ಎಲ್ಲಿಯೂ ಕಂಡಿರಲಿಲ್ಲ ಮತ್ತು ಕೇಳಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]