ಹೈಲೈಟ್ಸ್:
- ‘ಎ’ ಸಿನಿಮಾದಿಂದ ಹೀರೋ ಆಗಿ ಗುರುತಿಸಿಕೊಂಡ ನಟ ಉಪೇಂದ್ರ
- ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಉಪ್ಪಿಗೆ ‘ಎ’ನಿಂದ ದೊಡ್ಡ ಯಶಸ್ಸು ಸಿಕ್ಕಿತ್ತು
- ಇಂದಿಗೆ ‘ಎ’ ಸಿನಿಮಾ ತೆರೆಕಂಡು ಭರ್ತಿ 24 ವರ್ಷ
ನಟ/ನಿರ್ದೇಶಕ ಉಪೇಂದ್ರ
‘ಎ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದವರು ಉಪೇಂದ್ರ. ಹೀರೋ ಸೂರ್ಯ ಪಾತ್ರಕ್ಕೂ ಅವರೇ ಜೀವ ತುಂಬಿದ್ದರು. ವಿಶೇಷವೆಂದರೆ, ‘ಎ’ ಸಿನಿಮಾದೊಳಗೆ ಒಂದು ಸಿನಿಮಾ ಕಥೆ ಇತ್ತು. ಉಪೇಂದ್ರ ಡೈರೆಕ್ಟರ್ ಪಾತ್ರ ಮಾಡಿದ್ದರೆ, ಚಾಂದಿನಿ ಸಿನಿಮಾದೊಳಗೂ ನಾಯಕಿಯಾಗಿಯೇ ಕಾಣಿಸಿಕೊಂಡಿದ್ದರು. ಚಿತ್ರದ ಸ್ಕ್ರೀನ್ಪ್ಲೇ ಆಗ ಕಾಲಕ್ಕೆ ಸದ್ದು ಮಾಡಿತ್ತು. ಡಿಫರೆಂಟ್ ಆದ ನಿರೂಪಣೆಯಿಂದ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿತ್ತು ‘ಎ’. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿದ್ದಲ್ಲದೆ, ಯಶಸ್ವಿ 25 ವಾರ ಪೂರೈಸಿತ್ತು. ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗಿನಲ್ಲೂ ಈ ಸಿನಿಮಾ ಡಬ್ ಆಗಿ ತೆರೆಕಂಡಿತ್ತು. ಹೀರೋ ಆಗಿ ನಟಿಸಿದ್ದ ಮೊದಲ ಸಿನಿಮಾವೇ ಉಪ್ಪಿಗೆ ದೊಡ್ಡ ಬ್ರೇಕ್ ತಂದುಕೊಟ್ಟಿದ್ದು ವಿಶೇಷ.
ಹಾಡುಗಳು ದೊಡ್ಡ ಹಿಟ್
ಈ ಸಿನಿಮಾದಿಂದ ಉಪೇಂದ್ರ ಹೀರೋ ಆಗಿ ಯಶಸ್ಸು ಕಂಡರೆ ಗುರುಕಿರಣ್ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದರು. ಅದು ಅವರಿಗೆ ಮೊದಲ ಸಿನಿಮಾ. ‘ಎ’ ಚಿತ್ರಕ್ಕಾಗಿ ಅವರು ಕಂಪೋಸ್ ಮಾಡಿದ್ದ ಎಲ್ಲ ಹಾಡುಗಳು ಭರ್ಜರಿ ಹಿಟ್ ಆಗಿದ್ದವು. ಅದರಲ್ಲೂ ಉಪೇಂದ್ರ ಬರೆದಿದ್ದ ‘ಮಾರಿ ಕಣ್ಣು ಹೋರಿ ಮ್ಯಾಗೆ..’, ‘ಸುಮ್ ಸುಮ್ನೇ ನಗ್ತಾಳೆ..’ ಹಾಡುಗಳು ಸಂಗೀತ ಪ್ರೇಮಿಗಳಿಗೆ ಹೊಸ ಕಿಕ್ ನೀಡಿದ್ದವು. ಅಲ್ಲಿಂದ ಹಲವು ವರ್ಷಗಳ ಕಾಲ ಗುರುಕಿರಣ್ ಹಿಟ್ ಮ್ಯೂಸಿಕ್ ಡೈರೆಕ್ಟರ್ ಆಗಿದ್ದರು.
ಪ್ರಿಯಾಂಕಾ ಉಪೇಂದ್ರ ಸಿನಿಮಾದ ಹಾಡಿಗೆ ಧ್ವನಿಯಾದ ‘ಟಿಣಿಂಗ ಮಿಣಿಂಗ ಟಿಶ್ಯಾ’ ಗಾಯಕಿಯರು
ಚಿತ್ರದಲ್ಲಿ ಯಾರೆಲ್ಲ ಇದ್ದರು?
ಉಪೇಂದ್ರ ಹೀರೋ ಆಗಿ ಕಾಣಿಸಿಕೊಂಡರೆ, ನಟಿ ಚಾಂದಿನಿಗೆ ‘ಎ’ ದೊಡ್ಡ ಬ್ರೇಕ್ ನೀಡಿತ್ತು. ಅರ್ಚನಾ, ಬಿರಾದರ್, ಕೋಟೆ ಪ್ರಭಾಕರ್, ಮಾಲತಿ, ಸುಚಿತ್ರಾ, ಮೈಕೆಲ್ ಮಧು, ತುಮಕೂರು ಮೋಹನ್, ಗುರುಕಿರಣ್ ಸೇರಿದಂತೆ ಅನೇಕ ಹೊಸ ಪ್ರತಿಭೆಗಳು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಹೆಮ್ಮೆಯ ಸಂಗತಿ ಎಂದರೆ, ಈ ಚಿತ್ರದ ಸಂಕಲನಕ್ಕಾಗಿ ಟಿ. ಶಶಿಕುಮಾರ್ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು.
33 ವರ್ಷಗಳ ಹಿಂದೆ ಬಣ್ಣ ಹಚ್ಚಿದ್ದ ಉಪೇಂದ್ರ: ಅಪರೂಪದ ಫೋಟೋ ಹಂಚಿಕೊಂಡ ರಿಯಲ್ ಸ್ಟಾರ್
Read more
[wpas_products keywords=”deal of the day party wear dress for women stylish indian”]