Online Desk
ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ವಾರಾಂತ್ಯದ ದಿನವಾದ ಇಂದು ಭಾರಿ ಕುಸಿತ ಸಂಭವಿಸಿದ್ದು, ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಬರೊಬ್ಬರಿ 2200 ಅಂಕಗಳ ಕುಸಿತ ಕಂಡಿದೆ.
ಸೆನ್ಸೆಕ್ಸ್ 2200 ಅಂಕ ಕುಸಿತಗೊಂಡಿದ್ದು ನಿಫ್ಟಿ 139.85 ಅಂಕಗಳ ಕಡಿತದೊಂದಿಗೆ 17,617.15ಕ್ಕೆ ಅಂಶಗಳಿಗೆ ಕುಸಿದೆ. ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರ ಸುಮಾರು 9.73 ಲಕ್ಷ ಕೋಟಿ ರೂನಷ್ಟವಾಗಿದ್ದು, ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್) ಸೋಮವಾರದ 280 ಲಕ್ಷ ಕೋಟಿ ರೂಯಿಂದ 270 ಲಕ್ಷ ಕೋಟಿ ರೂಗೆ ಕುಸಿದಿದೆ.
ಹಣದುಬ್ಬರದ ಒತ್ತಡ, ವಿತ್ತೀಯ ನೀತಿ ಬಿಗಿಗೊಳಿಸುವಿಕೆ, ಹೆಚ್ಚುತ್ತಿರುವ ಬಾಂಡ್ ಇಳುವರಿ, ಕಚ್ಚಾ ತೈಲ ಬೆಲೆ ಏರಿಕೆಗಳು ಜಾಗತಿಕ ಮಾರುಕಟ್ಟೆಗಳಿಗೆ ಎದುರಾಗಿರುವ ಪ್ರಮುಖ ಸವಾಲುಗಳಾಗಿವೆ.ಜಾಗತಿಕ ಅಂಶಗಳ ಜೊತೆಗೆ, ದೇಶೀಯ ಮಾರುಕಟ್ಟೆಗಳು ಮೂರನೇ ತ್ರೈಮಾಸಿಕ (Q3FY22) ಫಲಿತಾಂಶಗಳು, ಕೇಂದ್ರ ಬಜೆಟ್ 2022-23ರ ಮುಂದಾಲೋಚನೆ ಎಂದು ಕೋಟಾಕ್ ಸೆಕ್ಯುರಿಟೀಸ್ ಲಿಮಿಟೆಡ್ ಇಕ್ವಿಟಿ ರಿಸರ್ಚ್ (ಚಿಲ್ಲರೆ) ಮುಖ್ಯಸ್ಥ ಶ್ರೀಕಾಂತ್ ಚೌಹ್ವಾಣ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಶೇ.26 ರಷ್ಟು ಕುಸಿತ
ಇಂದಿನ ವಹಿವಾಟಿನಲ್ಲಿ ನಿಫ್ಟಿ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಶೇ.0.36ರಷ್ಟು ಏರಿಕೆ ದಾಖಲಿಸುವಲ್ಲಿ ಯಶಸ್ವಿಯಾಗಿದೆಯಾದರೂ, ಬಜಾಜ್ ಫಿನ್‌ಸರ್ವ್ ಷೇರುಗಳ ಮೌಲ್ಯ ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಂಡಿದೆ. ಉಳಿದಂತೆ ಟೆಕ್ ಮಹೀಂದ್ರಾ, ಕೋಲ್ ಇಂಡಿಯಾ, ಶ್ರೀ ಸಿಮೆಂಟ್ ಮತ್ತು ದಿವಿಸ್ ಲ್ಯಾಬ್ ನ ಷೇರುಗಳ ಮೌಲ್ಯ ಕುಸಿದಿದೆ. ಟೆಕ್‌ಎಂ, ಟಾಟಾ ಸ್ಟೀಲ್, ಭಾರ್ತಿ ಏರ್‌ಟೆಲ್, ಇಂಡಸ್‌ಇಂಡ್ ಬ್ಯಾಂಕ್, ಎಲ್ & ಟಿ, ಇನ್ಫೋಸಿಸ್ ಮತ್ತು ಬಜಾಜ್ ಫೈನಾನ್ಸ್ ಸಂಸ್ಥೆಗಳು ನಷ್ಟ ಅನುಭವಿಸಿವೆ,
ಇದಕ್ಕೆ ವ್ಯತಿರಿಕ್ತವಾಗಿ, ಬಜಾಜ್ ಆಟೋ, ಹಿಂದೂಸ್ತಾನ್ ಯೂನಿಲಿವರ್, ಮಾರುತಿ ಸುಜುಕಿ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಹೀರೋ ಮೋಟೋಕಾರ್ಪ್ ಲಾಭ ಗಳಿಸಿದ್ದು, ಎಚ್‌ಯುಎಲ್, ಮಾರುತಿ, ಎಚ್‌ಡಿಎಫ್‌ಸಿ ಟ್ವಿನ್ಸ್ (ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್), ನೆಸ್ಲೆ, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಟಿಸಿಎಸ್ ಬಿಎಸ್‌ಇಯಲ್ಲಿ ಲಾಭಾಂಶ ಕಂಡಿವೆ.
Read more…
[wpas_products keywords=”deal of the day”]