Karnataka news paper

ಬೆಂಗಳೂರಿನಲ್ಲಿ ಜ.29 ರವರೆಗೆ ಶಾಲೆಗಳು ಓಪನ್ ಆಗಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್


The New Indian Express

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಜನವರಿ 29ರವರೆಗೂ ಶಾಲೆಗಳು ಓಪನ್ ಆಗಲ್ಲ, ಇತರ ಜಿಲ್ಲೆಗಳಲ್ಲಿ ಸೋಮವಾರದಿಂದ ತರಗತಿಗಳು ಮುಂದುವರೆಯಲಿವೆ. ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ತಜ್ಞರ ಜೊತೆಗೆ ನಡೆಸಿದ ಸಭೆ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 29 ರವರೆಗೂ ಶಾಲೆಗಳನ್ನು ತೆರೆಯದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಶುಕ್ರವಾರ ತಿಳಿಸಿದರು. 

ಇತರ ಜಿಲ್ಲೆಗಳಲ್ಲಿ ಪ್ರತಿಯೊಂದು ಶಾಲೆಯನ್ನು ಒಂದು ಘಟಕ ಎಂದು ಪರಿಗಣಿಸಿ ಶಾಲೆ ಆರಂಭಿಸಲಾಗುವುದು, ಕಡಿಮೆ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಮೂರು ದಿನಗಳ ಕಾಲ ಶಾಲೆ ಮುಚ್ಚಲಾಗುವುದು, ಆದಾಗ್ಯೂ, ಹೆಚ್ಚಿನ ಸಂಖ್ಯೆಯ ಕೇಸ್ ಗಳು ಅಥವಾ ಕ್ಲಸ್ಟರ್ ವರದಿಯಾದರೆ ಏಳು ದಿನಗಳ ಕಾಲ ಶಾಲೆ ಬಂದ್ ಮಾಡಲಾಗುವುದು ಎಂದು ಸಚಿವರು ಹೇಳಿದರು. 

ಈ ಹಿಂದೆ ಬೆಂಗಳೂರಿನಲ್ಲಿ ಜನವರಿ 31ರವರೆಗೂ ಶಾಲೆಗಳನ್ನು ಓಪನ್ ಮಾಡದಿರಲು ತೀರ್ಮಾನ ಕೈಗೊಳ್ಳಲಾಗಿತ್ತು.  ಶಾಲೆಗಳನ್ನು ಮರು ಆರಂಭಿಸುವ ಬಗ್ಗೆ ಮುಂದಿನ ಶುಕ್ರವಾರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಇದೀಗ 10, 11 ಮತ್ತು 12ನೇ ತರಗತಿಗೆ ಆಪ್ ಲೈನ್ ತರಗತಿಗಳು ಆರಂಭವಾಗಲಿದೆ. 
ಇದನ್ನೂ ಓದಿ: ಕೋವಿಡ್-19: ವೀಕೆಂಡ್ ಕರ್ಫ್ಯೂ ನಿರ್ಬಂಧ ಹಿಂಪಡೆದ ರಾಜ್ಯ ಸರ್ಕಾರ, ನೈಟ್ ಕರ್ಫ್ಯೂ ಮುಂದುವರಿಕೆ

ಈವರೆಗೂ 5 ಲಕ್ಷಕ್ಕಿಂತ ಹೆಚ್ಚಿನ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಶೇಕಡಾ 5 ರಷ್ಟು ಮಕ್ಕಳಿಗೆ ಮಾತ್ರ ಸೋಂಕು ಪತ್ತೆಯಾಗಿದೆ. ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಕ್ಕಳಿಗೆ ಸೋಂಕು ತಗುಲಿದೆ ಎಂದು ಸಚಿವರು ತಿಳಿಸಿದರು. 





Read more

[wpas_products keywords=”deal of the day”]