Karnataka news paper

ಕೋವಿಡ್ ಲಕ್ಷಣ ಇದ್ದವರಿಗೆ ಆಂಟಿಜೆನ್‌ ಪರೀಕ್ಷೆಗೆ ಆರೋಗ್ಯ ಇಲಾಖೆ ಸೂಚನೆ: 7 ದಿನ ಕ್ವಾರಂಟೈನ್ ಕಡ್ಡಾಯ..


ಹೈಲೈಟ್ಸ್‌:

  • ಸೋಂಕು ಲಕ್ಷಣ ಕಾಣಿಸಿಕೊಂಡರೆ ಆರೋಗ್ಯ ಸಿಬ್ಬಂದಿ ಪರೀಕ್ಷೆಗೊಳಗಾಗಬೇಕು
  • ಸೋಂಕು ದೃಢಪಟ್ಟರೆ ಐದು ದಿನ ಹೋಂ ಐಸೋಲೇಷನ್‌ ಅಥವಾ ಕೋವಿಡ್‌ ಆರೈಕೆ ಕೇಂದ್ರದಲ್ಲಿರಬೇಕು
  • ಹೆಚ್ಚಿನ ಸಮಸ್ಯೆ ಇದ್ದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು

ಬೆಂಗಳೂರು: ಕೋವಿಡ್‌ ಸೋಂಕು ಲಕ್ಷಣಗಳನ್ನು ಹೊಂದಿರುವವರಿಗೆ ಕಡ್ಡಾಯವಾಗಿ ರಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಬೇಕು. ಒಂದು ವೇಳೆ ವರದಿ ನೆಗೆಟಿವ್‌ ಬಂದರೆ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಕುರಿತು ಆರೋಗ್ಯ ಇಲಾಖೆ ಪರೀಕ್ಷೆ, ಐಸೋಲೇಷನ್‌ ಹಾಗೂ ಕ್ವಾರಂಟೈನ್‌ ಕುರಿತು ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದು, ಸೋಂಕಿತ ಕರ್ತವ್ಯ ನಿರ್ವಹಿಸುವ ಸ್ಥಳ ಮತ್ತು ವಾಸಿಸುವ ಮನೆ ಸೇರಿದಂತೆ ಎಲ್ಲಾ ಪ್ರಾಥಮಿಕ ಸಂಪರ್ಕಿತರು, ಸೋಂಕಿನ ಲಕ್ಷಣ ಹೊಂದಿರುವವರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಕಡ್ಡಾಯ ಪರೀಕ್ಷಿಸಬೇಕು. ಸೋಂಕಿತರ ಸಂಪರ್ಕಕ್ಕೆ ಬಂದ ಹೆಚ್ಚು ಆರೋಗ್ಯ ಸಮಸ್ಯೆಯುಳ್ಳ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಏಳು ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು ಎಂದು ಸೂಚಿಸಲಾಗಿದೆ.

Sunday Good News: ಕರ್ನಾಟಕದಾದ್ಯಂತ ಮಕ್ಕಳಿಗೆ ಕೋವಿಡ್‌ ಸೋಂಕು ಹರಡುವಿಕೆ ನಿಯಂತ್ರಣ..!
ಆರೋಗ್ಯ ಸಿಬ್ಬಂದಿ ಸೋಂಕು ಲಕ್ಷಣ ಕಾಣಿಸಿಕೊಂಡರೆ ಪರೀಕ್ಷೆಗೊಳಗಾಗಬೇಕು. ಸೋಂಕು ದೃಢಪಟ್ಟರೆ ಐದು ದಿನ ಹೋಂ ಐಸೋಲೇಷನ್‌ ಅಥವಾ ಕೋವಿಡ್‌ ಆರೈಕೆ ಕೇಂದ್ರದಲ್ಲಿರಬೇಕು. ಹೆಚ್ಚಿನ ಸಮಸ್ಯೆ ಇದ್ದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಇನ್ನು ಸೋಂಕು ದೃಢಪಟ್ಟ ಆರೋಗ್ಯ ಸಿಬ್ಬಂದಿಯ ಹೈರಿಸ್ಕ್‌ ಸಂಪರ್ಕಿತರು ಮೂರು ದಿನ ಹೋಂ ಐಸೋಲೇಷನ್‌ ಅಥವಾ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಬೇಕು ಎಂದು ತಿಳಿಸಲಾಗಿದೆ.

ಸೋಂಕು ಹೆಚ್ಚಳ ಎಚ್ಚರಿಕೆ ಗಂಟೆ: ಎಚ್‌ಡಿಕೆ

ರಾಜ್ಯದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಳ ಎಚ್ಚರಿಕೆ ಗಂಟೆ. ಕೋವಿಡ್‌ ಬಗ್ಗೆ ಸರಕಾರ ಉಪೇಕ್ಷೆ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹೇಳಿದರು.

ಕರ್ನಾಟಕದಲ್ಲಿ ಪ್ರತಿ ದಿನ 80 ಸಾವಿರದಿಂದ 1.2 ಲಕ್ಷ ಜನರಿಗೆ ಕೋವಿಡ್‌ ಸೋಂಕು ಸಂಭವ..!
ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿನ ಪ್ರಮಾಣವನ್ನು ತಡೆಯಲೇಬೇಕು. ಜನರ ಪರಿಸ್ಥಿತಿ, ಜೀವನ ಗಮನಿಸಿ ಸರಕಾರ ಕ್ರಮ ವಹಿಸಬೇಕು. ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಬಗ್ಗೆ ಸರಕಾರ ನಡೆಸುವ ಪಕ್ಷದಲ್ಲೇ ಸಹಮತವಿಲ್ಲ. ಅವರೇ ಗೊಂದಲದಲ್ಲಿದ್ದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ? ರಾತ್ರಿ ಕರ್ಫ್ಯೂ ಅನ್ನು ಬಿಜೆಪಿ ಪ್ರಮುಖರೇ ವಿರೋಧಿಸುತ್ತಿದ್ದಾರೆ ಎಂದು ತಿಳಿಸಿದರು.

ಜನರಿಗೆ ಸಂಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುವುದು ಎಲ್ಲ ಸರಕಾರಗಳ ಜವಾಬ್ದಾರಿ. ಸಣ್ಣ ರೈತರಿಗೆ ಮಾರಾಟ ವ್ಯವಸ್ಥೆ, ಬೀದಿ ಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಬೇಕು. ಜನರ ಕಷ್ಟಕ್ಕೆ ಮಿಡಿಯದಿದ್ದರೆ ಸರಕಾರ ಇರುವುದು ಏಕೆ. ಸೋಂಕು ನಿಯಂತ್ರಣದ ಜೊತೆಯಲ್ಲೇ ಜನರ ಸಮಸ್ಯೆ ನಿವಾರಣೆಗೆ ಆದ್ಯತೆ ಕೊಡಬೇಕು. ಸಣ್ಣ ಪುಟ್ಟ ಕೆಲಸ ಮಾಡಿ ಜೀವನ ನಡೆಸುವವರಿಗೆ ತೊಂದರೆಯಾಗುತ್ತದೆ ಎಂಬುದನ್ನು ಸರಕಾರ ಗಮನಿಸಬೇಕು. ತಜ್ಞರ ವರದಿ, ಪರ – ವಿರೋಧ ಅಭಿಪ್ರಾಯವನ್ನು ಗಮನಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.

ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಎಂದು ನೋಡಿಕೊಂಡು ಕೊರೊನಾ ಬರೋದಿಲ್ಲ: ಈಶ್ವರಪ್ಪ



Read more

[wpas_products keywords=”deal of the day sale today offer all”]