ಬೆಂಗಳೂರು: ಚಂದನವನದ ಚಿತ್ರ ನಿರ್ದೇಶಕ ಪ್ರದೀಪ್ ರಾಜ್ (46) ಅವರು ಗುರುವಾರ ನಸುಕಿನಲ್ಲಿ ಕೋವಿಡ್ ಸೋಂಕಿನಿಂದ ನಿಧನರಾದರು.
ಮಧುಮೇಹ, ಯಕೃತ್ತು ಸೇರಿದಂತೆ ಬಹು ಅಂಗಾಂಗ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ತೀವ್ರ ಅಸ್ವಸ್ಥರಾಗಿ ಪಾಂಡಿಚೆರಿಯ ಆಸ್ಪತ್ರೆಗೆ ದಾಖಲಾಗಿದ್ದರು. ಯಕೃತ್ತನ್ನು ಕಸಿ ಮಾಡುವ ಪ್ರಯತ್ನವೂ ನಡೆದಿತ್ತು. ಅದೂ ಲಭ್ಯವಾಗಿಲ್ಲ. ಇಂದು ಪಾಂಡಿಚೆರಿಯ ಆಸ್ಪತ್ರೆಯಲ್ಲೇ ನಿಧನರಾದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಕಿರಾತಕ, ಅಂಜದಗಂಡು, ಬೆಂಗಳೂರು – 23, ಮಿಸ್ಟರ್ 420, ರಜನಿಕಾಂತ ಚಿತ್ರಗಳನ್ನು ನಿರ್ದೇಶಿಸಿದ್ದರು. ಕಿರಾತಕ – 2 ಕೂಡಾ ನಿರ್ಮಾಣಗೊಂಡು ಬಿಡುಗಡೆಗೆ ಸಿದ್ಧವಾಗಿತ್ತು.
ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3ಕ್ಕೆ ಪಾಂಡಿಚೆರಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
Read More…Source link
[wpas_products keywords=”deal of the day party wear for men wedding shirt”]