Karnataka news paper

ಪ್ರಿಯಾಂಕಾ ಉಪೇಂದ್ರ ಸಿನಿಮಾದ ಹಾಡಿಗೆ ಧ್ವನಿಯಾದ ‘ಟಿಣಿಂಗ ಮಿಣಿಂಗ ಟಿಶ್ಯಾ’ ಗಾಯಕಿಯರು


ಹೈಲೈಟ್ಸ್‌:

  • ‘ಟಿಣಿಂಗ ಮಿಣಿಂಗ ಟಿಶ್ಯಾ..’ ಹಾಡಿನಿಂದ ಫೇಮಸ್ ಆದ ಗಿರಿಜಾ ಸಿದ್ಧಿ & ಗೀತಾ ಸಿದ್ಧಿ
  • ‘ಸಲಗ’ ನಂತರ ಬೇಡಿಕೆ ಹೆಚ್ಚಿಸಿಕೊಂಡ ಸಹೋದರಿಯರು
  • ಪ್ರಿಯಾಂಕಾ ಉಪೇಂದ್ರ ಸಿನಿಮಾಕ್ಕೂ ಹಾಡಿದ ಗಿರಿಜಾ ಸಿದ್ಧಿ ಮತ್ತು ಗೀತಾ ಸಿದ್ಧಿ

ಹರೀಶ್‌ ಬಸವರಾಜ್‌
‘ದುನಿಯಾ’ ವಿಜಯ್‌ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ‘ಸಲಗ’ ಸಿನಿಮಾದ ‘ಟಿಣಿಂಗ ಮಿಣಿಂಗ ಟಿಶ್ಯಾ..’ ಹಾಡು ದೊಡ್ಡ ಹಿಟ್ ಆಗಿತ್ತು. ಆ ಹಾಡು ಹಾಡಿದ್ದ ಗೀತಾ ಸಿದ್ಧಿ ಮತ್ತು ಗಿರಿಜಾ ಸಿದ್ಧಿ ಸಹೋದರಿಯರ ಅದೃಷ್ಟ ಖುಲಾಯಿಸುವಂತೆ ಮಾಡಿದೆ. ಈ ಸೂಪರ್‌ ಹಿಟ್‌ ಹಾಡನ್ನು ಹಾಡಿರುವ ಈ ಸಿದ್ಧಿ ಸಹೋದರಿಯರಿಗೆ ಈಗ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದ್ದು, ಅವರೀಗ ಪ್ರಿಯಾಂಕಾ ಉಪೇಂದ್ರ ನಟನೆಯ ‘ಉಗ್ರಾವತಾರ’ ಸಿನಿಮಾಗೂ ವಿಶೇಷ ಗೀತೆಯೊಂದನ್ನು ಹಾಡಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾವನ್ನು ಗುರುಮೂರ್ತಿ ಎಂಬುವವರು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಇದರ ಶೇ.90ರಷ್ಟು ಶೂಟಿಂಗ್ ಮುಗಿದಿದೆ. ಸಿದ್ಧಿ ಸಿಸ್ಟರ್ಸ್ ಹಾಡಿರುವ ವಿಶೇಷ ಹಾಡನ್ನು ಇತ್ತೀಚೆಗಷ್ಟೇ ಗುರುಮೂರ್ತಿ ಅವರು ರೆಕಾರ್ಡಿಂಗ್‌ ಮಾಡಿದ್ದಾರೆ. ‘ನಮ್ಮ ಸಿನಿಮಾ ಮಹಿಳಾ ಸುರಕ್ಷತೆ ಬಗೆಗಿನ ಕಥೆ. ಮಹಿಳೆಯರು ಕಷ್ಟದಲ್ಲಿದ್ದಾಗ ಯಾರು ಸಹಾಯಕ್ಕೆ ಬರುತ್ತಾರೆ ಎಂದು ಹೇಳುತ್ತಿರುವಾಗ ಪ್ರಿಯಾಂಕಾ ಉಪೇಂದ್ರ ಬರುತ್ತಾರೆ. ಆಗ ಈ ಹಾಡನ್ನು ನಾವು ಬಳಸಿಕೊಳ್ಳುತ್ತೇವೆ. ಗೀತಾ ಸಿದ್ಧಿ ಮತ್ತು ಗಿರಿಜಾ ಸಿದ್ಧಿ ಅದ್ಭುತ ಗಾಯಕರು. ಒಂದೆರಡು ದಿನಗಳ ಪ್ಯಾಚ್‌ ವರ್ಕ್ ಮಾತ್ರ ಬಾಕಿ ಇದ್ದು, ಉಳಿದೆಲ್ಲ ಭಾಗದ ಶೂಟಿಂಗ್‌ ಕಂಪ್ಲೀಟ್‌ ಆಗಿದೆ. ಸಿದ್ಧಿ ಸಹೋದರಿಯರು ಹಾಡಿರುವ ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿ ಇದೆ. ಅದಕ್ಕಾಗಿ ವಿಶೇಷ ಸೆಟ್‌ ಹಾಕಿಸಿ ಶೂಟಿಂಗ್‌ ಮಾಡುತ್ತೇವೆ. ‘ಟಿಣಿಂಗ ಮಿಣಿಂಗ ಟಿಶ್ಯಾ..’ ಹಾಡಿನಲ್ಲಿ ಕಾಣಿಸಿಕೊಂಡಿದ್ದ ಅಷ್ಟು ಜನರೂ ನಮ್ಮ ಸಿನಿಮಾದ ಹಾಡಿನಲ್ಲಿಯೂ ಇರುತ್ತಾರೆ’ ಎಂದಿದ್ದಾರೆ ನಿರ್ದೇಶಕ ಗುರುಮೂರ್ತಿ.

ಈ ಹಾಡನ್ನು ಬಸೋಬಿ ಎಂಬುವವರು ಬರೆದಿದ್ದು, ರಾಧಾಕೃಷ್ಣ ಬಸ್ರೂರು ಸಂಗೀತ ಸಂಯೋಜನೆ ಈ ಸಿನಿಮಾಗಿದೆ. ಸುಮನ್‌, ಪವಿತ್ರಾ ಲೊಕೇಶ್‌, ನಟರಾಜ್‌ ಮತ್ತಿತರರು ಈ ಸಿನಿಮಾದಲ್ಲಿದ್ದು, ಇದಕ್ಕೆ ‘ಕೆಜಿಎಫ್‌’ ಸಿನಿಮಾದ ಗೀತೆ ರಚನೆಕಾರ ಕಿನ್ನಾಳ್‌ ರಾಜ್‌ ಅವರು ಸಂಭಾಷಣೆ ಬರೆದಿರುವುದು ವಿಶೇಷ.

Salaga: ಸಖತ್ ವೈರಲ್ ಆಗ್ತಿದೆ ‘ಸಲಗ’ ಚಿತ್ರದ ‘ಟಿಣಿಂಗ ಮಿಣಿಂಗ ಟಿಷ್ಯಾ’‍ ಸಾಂಗ್! ಈ ಹಾಡು ಹುಟ್ಟಿದ್ದೇಗೆ?

ಕೋಟ್‌:
ಸಿನಿಮಾದಲ್ಲಿ ನಾಯಕಿಗೆ ಇರುವ ಶಕ್ತಿಯನ್ನು ತೋರಿಸುವ ಸಲುವಾಗಿ ಈ ಹಾಡು ಬಳಸಿಕೊಳ್ಳುತ್ತಿದ್ದೇವೆ. ಈ ಹಾಡಿನಲ್ಲಿ ಗಿರಿಜಾ ಸಿದ್ಧಿ ಮತ್ತು ಗೀತಾ ಸಿದ್ಧಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ದೊಡ್ಡ ಸೆಟ್‌ ಹಾಕಿ ಶೂಟಿಂಗ್‌ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದ್ದೇವೆ.
-ಗುರುಮೂರ್ತಿ, ನಿರ್ದೇಶಕ

Video: ‘ಸಲಗ’ ತಂಡಕ್ಕೆ ಸೇರಿಕೊಂಡಿವೆ ಮತ್ತೆರಡು ಸಲಗಗಳು!

‘ಸಲಗ’ ಚಿತ್ರದ ಎಕ್ಸ್‌ಕ್ಲೂಸಿವ್ ಸಾಂಗ್ ಮೇಕಿಂಗ್ ವಿಡಿಯೋ!

‘ಟಿಣಿಂಗ ಮಿಣಿಂಗ ಟಿಶ್ಯಾ.. ಹಾಡನ್ನ ಸಿಕ್ಕಾಪಟ್ಟೆ ಕೇಳಿದ್ದೀನಿ’- ನಟ ಪುನೀತ್ ರಾಜ್‌ಕುಮಾರ್‌



Read more

[wpas_products keywords=”deal of the day party wear dress for women stylish indian”]