ಹೈಲೈಟ್ಸ್:
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 21ರಿಂದ 30ರ ಹರೆಯದವರಲ್ಲಿ ಅತೀ ಹೆಚ್ಚು 1305 ಪ್ರಕರಣ ಸಕ್ರಿಯವಾಗಿದೆ
- ಮೂರನೇ ಅಲೆಯ ವೇಗ ಇತರ ಎರಡು ಅಲೆಗಳಿಗಿಂತ ಭಿನ್ನವಾಗಿರುವುದು ಮಾತ್ರವಲ್ಲ ಹರಡುವ ಪ್ರಮಾಣ ಕೂಡ ಅಷ್ಟೇ ಜಾಸ್ತಿಯಾಗಿದೆ
- ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿದೆ.
- ಜನರು ಮಾಸ್ಕ್ ಹಾಕುವ ಜತೆಯಲ್ಲಿ ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಮಾತ್ರ ನಿಯಂತ್ರಣ ಮಾಡಲು ಸಾಧ್ಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಜತೆಗೆ ಪಾಸಿಟಿವಿಟಿ ಕೂಡ ಏರಿಕೆಯಾಗುತ್ತಿದ್ದು, 21ರಿಂದ 30ರ ಹರೆಯದವರಲ್ಲಿ ಅತೀ ಹೆಚ್ಚು 1305 ಪ್ರಕರಣ ಸಕ್ರಿಯವಾಗಿದೆ. ಆದರೆ 0-5 ರ ವಯಸ್ಸಿನವರಲ್ಲಿ ಅತಿ ಕನಿಷ್ಠ 26 ವಿದ್ಯಾರ್ಥಿಗಳಲ್ಲಿ ಮಾತ್ರವೇ ಸೋಂಕು ಕಂಡು ಬಂದಿದೆ.
ಇದು ಜ.1ರಿಂದ 17ರವರೆಗೆ ಲೆಕ್ಕಾಚಾರ. ಅದರಂತೆ 6-10ರ ವಯಸ್ಸಿನ 53 ವಿದ್ಯಾರ್ಥಿಗಳಲ್ಲಿ, 11-15ರ ವಯಸ್ಸಿನ 145 ವಿದ್ಯಾರ್ಥಿಗಳಲ್ಲಿ, 16-20ರ ವಯೋಮಾನದಲ್ಲಿ 676 ಮಂದಿಯಲ್ಲಿ ಕೋವಿಡ್ ಸಕ್ರಿಯವಾಗಿದೆ. ವಿಶೇಷ ಎಂದರೆ ಎಲ್ಲ ವಿಭಾಗದಲ್ಲಿ ಪರಿಗಣಿಸಿದರೆ 21-30ರ ವಯಸ್ಸಿನವರಲ್ಲಿಯೇ ಕೋವಿಡ್ ಪ್ರಮಾಣ ಬಹಳಷ್ಟು ಹೆಚ್ಚಿದೆ ಎನ್ನುವುದು ಆರೋಗ್ಯ ಇಲಾಖೆಯ ಮಾಹಿತಿ.
17 ದಿನಗಳಲ್ಲಿ 6 ಸಾವಿರ ಪಾಸಿಟಿವ್
ಮೂರನೇ ಅಲೆಯ ವೇಗ ಇತರ ಎರಡು ಅಲೆಗಳಿಗಿಂತ ಭಿನ್ನವಾಗಿರುವುದು ಮಾತ್ರವಲ್ಲ ಹರಡುವ ಪ್ರಮಾಣ ಕೂಡ ಅಷ್ಟೇ ಜಾಸ್ತಿಯಾಗಿದೆ. ಜ.1ರಿಂದ 17 ರವರೆಗೆ ಜಿಲ್ಲೆಯಲ್ಲಿ 5,865 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು ಇದರಲ್ಲಿ 4,181 ಮಂದಿಯಲ್ಲಿ ಕೋವಿಡ್ ಸಕ್ರಿಯವಾಗಿದೆ ಎಂದು ಆರೋಗ್ಯ ಇಲಾಖೆಯ ಐಸಿಎಂಆರ್ ಪೋರ್ಟಲ್ ಮಾಹಿತಿ ನೀಡಿದೆ. ವಿಶೇಷವಾಗಿ 5,865 ಮಂದಿಯಲ್ಲಿ 2,672 ಮಂದಿ ಮಹಿಳೆಯರು ಹಾಗೂ 3,193 ಮಂದಿ ಪುರುಷರು ಆಗಿದ್ದಾರೆ. ಇದರಲ್ಲಿ 1,909 ಮಂದಿ ಮಹಿಳೆಯರು ಹಾಗೂ 2,272 ಮಂದಿ ಪುರುಷರಲ್ಲಿ ಕೋವಿಡ್ ಸಕ್ರಿಯವಾಗಿದೆ.
ಈ ಕುರಿತು ದ.ಕ. ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್ ಅವರು ಹೇಳುವಂತೆ ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿದೆ. ಜನರು ಮಾಸ್ಕ್ ಹಾಕುವ ಜತೆಯಲ್ಲಿ ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಮಾತ್ರ ಇದನ್ನು ನಿಯಂತ್ರಣ ಮಾಡಲು ಸಾಧ್ಯವಿದೆ. ಜನರು ಜಾಗೃತರಾಗಿ ಲಸಿಕೆ ತೆಗೆದುಕೊಳ್ಳುವ ಜತೆಗೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದು ಅತೀ ಅಗತ್ಯವಾಗಿದೆ ಎಂದು ವಿಕಕ್ಕೆ ಮಾಹಿತಿ ನೀಡುತ್ತಾರೆ ಅವರು.
ಕೋವಿಡ್ ಪ್ರಕರಣ ಯುವಜನತೆಯಲ್ಲಿ ಹೆಚ್ಚು
ದಕ್ಷಿಣ ಕನ್ನಡ ಮೂರನೇ ಕೋವಿಡ್ ಅಲೆಯಲ್ಲಿ ಇಲ್ಲಿಯವರೆಗೂ 21ರಿಂದ 30ರ ವಯಸ್ಸಿನವರಲ್ಲಿ 1820 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಈಗ ಅದರಲ್ಲಿ ಸಕ್ರಿಯ ಪ್ರಕರಣ 1305 ಇದೆ. ಈ ವರ್ಗ ಇತರ ಎಲ್ಲ ವರ್ಗಗಳಿಗಿಂತ ಹೆಚ್ಚು ರೀತಿಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಳ್ಳಲು ಬಹುಮುಖ್ಯವಾದ ಕಾರಣವನ್ನು ಆರೋಗ್ಯ ಇಲಾಖೆಯವರು ಹೇಳುವಂತೆ ಕೋವಿಡ್ ಬಂದರೆ ನಮ್ಮನ್ನು ಯಾವುದೇ ರೀತಿಯಲ್ಲಿ ಸಮಸ್ಯೆ ತಂದೊಡ್ಡುವುದಿಲ್ಲ ಎನ್ನುವ ವಿಚಾರ ಮನಸ್ಸಿನಲ್ಲಿ ತುಂಬಿರುವುದರಿಂದ ಅವರು ಮಾಸ್ಕ್ ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಲ್ಲಿ ಹಿಂದೇಟು ಹಾಕುತ್ತಾರೆ. ಈ ಕಾರಣದಿಂದ ಈ ವರ್ಗದಲ್ಲಿ ಹೆಚ್ಚು ಪಾಸಿಟಿವ್ ದಾಖಲಾಗುತ್ತಿದೆ. ಇದರಿಂದ ಅವರು ಇತರರ ಸಂಪರ್ಕಕ್ಕೆ ಬಂದಾಗ ಅವರಿಗೂ ಹರಡುತ್ತದೆ. ಕೆಲವೊಂದು ಮನೆಯಲ್ಲಿ ಹಿರಿಯರು, ಮಕ್ಕಳಿಗೂ ಇವರಿಂದ ಕೋವಿಡ್ ಹರಡುತ್ತದೆ. ಇದೇ ಕಾರಣದಿಂದ ಈ ಬಾರಿಯ ಮೂರನೇ ಅಲೆಯಲ್ಲಿ 70ರಿಂದ ಮೇಲಿನವರು 7 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಾವುಗಳು 10ರಷ್ಟು ಆಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.
Read more
[wpas_products keywords=”deal of the day sale today offer all”]