The New Indian Express
ಅಮರಾವತಿ: ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ಕುಟುಂಬವೊಂದು ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಭಾನುವಾರ ತಮ್ಮ ಭಾವಿ ಅಳಿಯನಿಗೆ 365 ಬಗೆಯ ಖಾದ್ಯಗಳನ್ನು ನೀಡಿ ಉಪಚರಿಸಿದೆ.
ಇದನ್ನೂ ಓದಿ: ಲಂಡನ್: ಶ್ರೀಮಂತರ ಪರ ಕ್ಯೂ ನಿಲ್ಲುವುದೇ ಈತನ ಉದ್ಯೋಗ; ದಿನಕ್ಕೆ 16,000 ರೂ. ಸಂಪಾದನೆ
‘ನಮ್ಮ ಭಾವಿ ಅಳಿಯನ ಮೇಲಿನ ಪ್ರೀತಿಯನ್ನು ತೋರಿಸಲು ವರ್ಷದ 365 ದಿನಗಳನ್ನು ಪರಿಗಣಿಸಿ 365 ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿದೆವು’ ಎಂದು ಕುಟುಂಬದ ಸದಸ್ಯರು ಹೇಳಿದರು.
ಇದನ್ನೂ ಓದಿ: ವೀಲ್ ಚೇರ್ ಮ್ಯಾರಾಥಾನ್: 24 ಗಂಟೆಯಲ್ಲಿ 213 ಕಿ.ಮೀ; ಪ್ಯಾರಾ ಅಥ್ಲೀಟ್ ಕಮಲಕಾಂತ್ ನಾಯಕ್ ವಿಶ್ವದಾಖಲೆ
ಆತಿಥ್ಯ ನೀಡಿರುವ ಕುಟುಂಬ ಚಿನ್ನದ ವ್ಯಾಪಾರಿ ಆಟಂ ವೆಂಕಟೇಶ್ವರ ರಾವ್ ಅವರದು. ಮದುವೆಗೂ ಮುನ್ನ ಹಬ್ಬ ಬಂದಿದ್ದರಿಂದ ಈ ವಿಶೇಷ ಏರ್ಪಾಟು ಮಾಡಲಾಗಿದೆ. ವಿವಾಹವು ಮಕರ ಸಂಕ್ರಾಂತಿ ಹಬ್ಬದ ನಂತರ ನೆರವೇರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಂಗಳಮುಖಿಯರ ಚಪ್ಪಾಳೆ, ಮಾಮೂಲಿ ಚಪ್ಪಾಳೆಗಿಂತ ಏಕೆ ಭಿನ್ನ!
ಉಪಚಾರದಲ್ಲಿ 30 ವಿವಿಧ ವಿಧದ ಪಲ್ಯಗಳು, ಅನ್ನ, ಪುಳಿಹೊರ, ಬಿರಿಯಾನಿ, ಸಾಂಪ್ರದಾಯಿಕ ಗೋದಾವರಿ ಸಿಹಿತಿಂಡಿಗಳು, ಬಿಸಿ ಮತ್ತು ತಂಪು ಪಾನೀಯಗಳು, ಬಿಸ್ಕತ್ ಗಳು, ಹಣ್ಣುಗಳು, ಕೇಕ್ ಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಕ್ಕಿಗೆ ಸೀಮಂತ: ಹೊಸ ಬಟ್ಟೆ, ಕಾಲ್ಗಳಿಗೆ ಬಳೆ: ಕೊಯಮತ್ತೂರಿನಲ್ಲಿ ನಡೆದ ಅಚ್ಚರಿಯ ಘಟನೆ
Read more
[wpas_products keywords=”deal of the day”]