Karnataka news paper

ಘಾಜಿಪುರದಲ್ಲಿ ವಶಪಡಿಸಿಕೊಂಡ ಐಇಡಿಯಲ್ಲಿ ಆರ್‌ಡಿಎಕ್ಸ್, ಅಮೋನಿಯಂ ನೈಟ್ರೇಟ್, ಟೈಮರ್ ಪತ್ತೆ: ಎನ್‌ಎಸ್‌ಜಿ


PTI

ನವದೆಹಲಿ: ಇತ್ತೀಚೆಗಷ್ಟೇ ಘಾಜಿಪುರ ಹೂವಿನ ಮಾರುಕಟ್ಟೆಯಿಂದ ಪತ್ತೆಯಾದ ಐಇಡಿಯಲ್ಲಿ ಟೈಮರ್‌ ಸಾಧನವನ್ನು ಅಳವಡಿಸಲಾಗಿದ್ದು, ಅಮೋನಿಯಂ ನೈಟ್ರೇಟ್ ಮತ್ತು ಆರ್‌ಡಿಎಕ್ಸ್ ಅಂಶಗಳಿದ್ದವು ಎಂದು ಎನ್‌ಎಸ್‌ಜಿ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜನವರಿ 14ರಂದು ಇಲ್ಲಿ ವಶಪಡಿಸಿಕೊಂಡ ಸುಧಾರಿತ ಸ್ಫೋಟಕ ಸಾಧನವನ್ನು ನಿಷ್ಕ್ರಿಯಗೊಳಿಸಲು ಫೆಡರಲ್ ಭಯೋತ್ಪಾದನಾ ನಿಗ್ರಹ ಕಮಾಂಡೋ ಪಡೆ ತನ್ನ ಹರಿಯಾಣದ ರಾಷ್ಟ್ರೀಯ ಬಾಂಬ್ ಡೇಟಾ ಸೆಂಟರ್(NBDC)ನ ತಜ್ಞರನ್ನು ಕಳುಹಿಸಿತ್ತು.

ಎನ್‌ಎಸ್‌ಜಿ ಸ್ಫೋಟದ ನಂತರದ ಅಂತಿಮ ತನಿಖಾ ವರದಿಯನ್ನು ದೆಹಲಿ ಪೊಲೀಸರಿಗೆ ಸಲ್ಲಿಸಿದ್ದು ಐಇಡಿಯಲ್ಲಿ ಅಮೋನಿಯಂ ನೈಟ್ರೇಟ್, ಆರ್‌ಡಿಎಕ್ಸ್, 9-ವೋಲ್ಟ್ ಬ್ಯಾಟರಿ, ಸ್ಫೋಟದ ಸಮಯದಲ್ಲಿ ಚೂರುಗಳಾಗಿ ಕಾರ್ಯನಿರ್ವಹಿಸಬಲ್ಲ ಕಬ್ಬಿಣದ ತುಂಡುಗಳು ಮತ್ತು ಟೈಮರ್ ಸಾಧನವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆರ್‌ಡಿಎಕ್ಸ್ ಅನ್ನು ಐಇಡಿಯಲ್ಲಿ ಕೋರ್ ಸ್ಫೋಟಕವಾಗಿ ಬಳಸಲಾಗಿದೆ ಆದರೆ ಸರ್ಕ್ಯೂಟ್‌ನಲ್ಲಿನ “ಗ್ಲಿಚ್” ನಿಂದ ಅದು ಸ್ಫೋಟಗೊಂಡಿಲ್ಲ ಎಂದು ತನಿಖಾ ವರದಿಯನ್ನು ಉಲ್ಲೇಖಿಸಿ ಎನ್‌ಎಸ್‌ಜಿ ಹೇಳಿದೆ.

ಕಬ್ಬಿಣದ ಪೆಟ್ಟಿಗೆಯೊಳಗೆ ಇರಿಸಲಾಗಿದ್ದ ಸುಮಾರು 3 ಕೆಜಿ ಐಇಡಿಯನ್ನು ಪಡೆ ನಿಷ್ಕ್ರಿಯಗೊಳಿಸಿದೆ. ಈ ಘಟನೆಯನ್ನು ದೆಹಲಿ ಪೊಲೀಸರು ಮತ್ತು ಇತರ ಭದ್ರತಾ ಏಜೆನ್ಸಿಗಳು ಗಂಭೀರವಾಗಿ ಪರಿಗಣಿಸಿವೆ. ಕಾರಣ ಇದು ಜನವರಿ 26ರ ಗಣರಾಜ್ಯೋತ್ಸವ ಆಚರಣೆಗೆ ಕೆಲವೇ ದಿನಗಳ ಮೊದಲು ಸಿಕ್ಕಿದ್ದು, ಇದಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ.



Read more

[wpas_products keywords=”deal of the day”]