Karnataka news paper

‘ಮುಂಗಾರು ಮಳೆ’ ಟೈಮ್‌ನಲ್ಲಿ ರಾಘವೇಂದ್ರ ರಾಜ್‌ಕುಮಾರ್ ಒಳ್ಳೆಯ ಸಲಹೆ ನೀಡಿದ್ರು, ದೊಡ್ಮನೆ ದೊಡ್ಮನೆಯೇ: ಯೋಗರಾಜ್ ಭಟ್


ಹೈಲೈಟ್ಸ್‌:

  • ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಮುಂಗಾರು ಮಳೆ’ ಸಿನಿಮಾ ಆಗಿದ್ದು ಹೇಗೆ?
  • ಸಾಕಷ್ಟು ನಿರ್ಮಾಪಕರ ಬಳಿ ಹೋಗಿ ಅವಮಾನ ಎದುರಿಸಿದ್ದ ಯೋಗರಾಜ್ ಭಟ್ ತಂಡ
  • ಅಂದು ರಾಘವೇಂದ್ರ ರಾಜ್‌ಕುಮಾರ್ ನೀಡಿದ್ದ ಸಲಹೆಯಿಂದ ದೊಡ್ಡ ಉಪಕಾರ ಆಯ್ತು ಎಂದ ಯೋಗರಾಜ್ ಭಟ್

ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ, ಅನಂತ್ ನಾಗ್, ಸುಧಾ ಬೆಳವಾಡಿ, ಪದ್ಮಜಾ ರಾವ್ ಮುಂತಾದವರು ನಟಿಸಿದ್ದ ‘ಮುಂಗಾರು ಮಳೆ’ ಮಾಡಿದ್ದ ದಾಖಲೆ ಎಲ್ಲರಿಗೂ ತಿಳಿದಿದೆ. ಈ ಚಿತ್ರದ ಸಂಭಾಷಣೆ, ಹಾಡುಗಳು ಕೂಡ ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿತ್ತು. ವರ್ಷಗಟ್ಟಲೇ ಮಲ್ಟಿಪ್ಲೆಕ್ಸ್‌ನಲ್ಲಿ ತೆರೆ ಕಂಡ ಸಿನಿಮಾ ಎಂದರೆ ಅದು ‘ಮುಂಗಾರು ಮಳೆ’. ಈ ಚಿತ್ರ ಅಗಿದ್ದು ಹೇಗೆ? ಆರಂಭದಲ್ಲಿ ಏನೇನೆಲ್ಲ ಕಷ್ಟ ಆಯ್ತು? ರಾಘಣ್ಣ ನೀಡಿದ ಸಲಹೆಯಿಂದ ತುಂಬ ಉಪಕಾರ ಆಯ್ತು ಎಂಬುದನ್ನು ‘ಗೋಲ್ಡನ್ ಗ್ಯಾಂಗ್‘ ಶೋನಲ್ಲಿ ಯೋಗರಾಜ್ ಭಟ್ ಹೇಳಿದ್ದಾರೆ.

“ಸುಮಾರು ಕೆಟ್ಟ ಕೆಟ್ಟ ಅವಮಾನ ಆದಾಗ ನನ್ನ ಪಕ್ಕ ಪ್ರೀತಂ ಗುಬ್ಬಿ ಕೂತಿದ್ದರು. ಹೈದರಾಬಾದ್‌ಗೆ ದೊಡ್ಡ ನಾಯಕ ನಟರಿಗೆ ರೀಡಿಂಗ್ ಕೊಡಲು ಹೋಗಿದ್ದೆ. ಆದರೆ ಅವರು ಹೊರಗಡೆ ಬರಲಿಲ್ಲ. ನಮ್ಮ ಶರ್ಟ್ ಸುಕ್ಕಾಗಿದೆಯಾ ಎಂದು ಯೋಚನೆ ಮಾಡಿಕೊಂಡು ಹೋಗುವಷ್ಟು ದೊಡ್ಡವರು. ಇಲ್ಲಿಯೂ ನಿರ್ಮಾಪಕರ ಬಳಿ ಸಾಕಷ್ಟು ತಿರಸ್ಕಾರ ಆಗಿದೆ. ಆದರೂ ಸ್ಕ್ರಿಪ್ಟ್ ಮೇಲೆ ಭಾರೀ ಭರವಸೆ, ಪ್ರೀತಿ ಇತ್ತು” ಎಂದು ಯೋಗರಾಜ್ ಭಟ್ ಹೇಳಿದ್ದಾರೆ.

“ಒಂದು ವರ್ಷ ಈ ಸಿನಿಮಾ ಕಥೆ ಬಿಟ್ಟುಬಿಟ್ಟಿದ್ದೆವು. ಆದರೆ ಯೋಗರಾಜ್ ಭಟ್ ಅವರು ಇನ್ನೊಂದಿನ ಡಬಲ್ ಬೆಲೆ ಬರತ್ತೆ ಎಂದಿದ್ದರು. ಮೆಜೆಸ್ಟಿಕ್ ಅಲ್ಲಿ ಸೈಟ್ ತಗೊಂಡ ಹಾಗೆ. ಕಥೆ ಮೇಲೆ ಪ್ರೀತಿ ಇದ್ದಿದ್ದರಿಂದ ಒಂದು ವರ್ಷ ಕಳೆದಿದ್ದು ಗೊತ್ತಾಗಲೇ ಇಲ್ಲ” ಎಂದು ಪ್ರೀತಂ ಗುಬ್ಬಿ ಹೇಳಿದ್ದರು.

‘ಮುಂಗಾರು ಮಳೆ’ ಚಿತ್ರಕ್ಕೆ ‘ಚುಮ್ಮಾ’ ಅಂತ ಟೈಟಲ್ ಇಟ್ಟಿದ್ದ ಯೋಗರಾಜ್ ಭಟ್! ಅದು ಬದಲಾಗಿದ್ದು ಹೇಗೆ?

“ಗಣೇಶ್ ಮುಂಗಾರು ಮಳೆ ತಂಡ ಸೇರಿದ ಮೇಲೆ ರೀ ಒಪನ್ ಆಯ್ತು. ಆರೋ ಎಂಟು ನಿರ್ಮಾಪಕರಿಗೆ ಕಥೆ ಹೇಳಿದ್ದರೂ ಏನೂ ಪ್ರಯೋಜನಕ್ಕೆ ಬರಲಿಲ್ಲ. ಆದ್ದರಿಂದ ಆ ಕಥೆ ಸತ್ತು ಹೋದ ಭಾವನೆ ಇತ್ತು. ಪುನೀತ್ ರಾಜ್‌ಕುಮಾರ್ ಅಂದು ಲೀಡಿಂಗ್ ನಾಯಕರಾಗಿದ್ದರು. ಸಿನಿಮಾಕ್ಕೆ ಬೇಕಾದ ಎಲ್ಲ ಅಂಶಗಳು ಇದರಲ್ಲಿ ಇದೆ. ಪುನೀತ್‌ಗೆ ತಕ್ಕಂತೆ ಸಿನಿಮಾ ಕಥೆ ಬದಲಾಯಿಸಿ ಗಬ್ಬೆಬ್ಬಿಸಿಬೇಡಿ. ಹೊಸ ಹುಡುಗನನ್ನು ಇಟ್ಟುಕೊಂಡು ಸಿನಿಮಾ ಮಾಡಿ ಅಂತ ರಾಘಣ್ಣ ವಜ್ರೇಶ್ವರಿಯಲ್ಲಿ ಹೇಳಿದರು. ಅದಕ್ಕೆ ದೊಡ್ಮನೆ ಅಂತ ಸುಮ್ಮನೆ ಹೇಳೋದಿಲ್ಲ. ನಿಜಕ್ಕೂ ಅದು ನಮಗೆ ಒಳ್ಳೆಯ ಸಲಹೆಯಾಗಿತ್ತು. ಪರಪರ ಕೆರಕೊಂಡು ಬಿಟ್ಟೆ ಅಂತ ವಾಕ್ಯ ನಾನು ಮೊದಲು ಹೇಳಿದ್ದು ಕೃಷ್ಣ ಅವರಿಗೆ (ಪೈಲ್ವಾನ್). ಈ ವಾಕ್ಯ ಚೆನ್ನಾಗಿದೆ, ಯಾರಿಗೂ ಹೇಳಬೇಡಿ ಎಂದು ಕೃಷ್ಣ ನನಗೆ ಹೇಳಿದರು” ಎಂದು ಯೋಗರಾಜ್ ಭಟ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮನೆ ಇಲ್ಲದ ಶರಣ್ ಕುಟುಂಬಕ್ಕೆ ತನ್ನ ಬಂಗಾರದ ಬಳೆ ಅಡವಿಟ್ಟು ಹಣ ನೀಡಿದ್ದ ನಟ ಸುಧೀರ್ ಪತ್ನಿ ಮಾಲತಿ

“ತುಂಬ ಜನ ಕಳೆದುಕೊಂಡವರಿಗೆ ನಮಗೆ ಮಾತ್ರ ಹೀಗೆ ಆಗಿದೆ ಅಂತ ಅನಿಸಿರತ್ತೆ. ಯಾವುದೇ ಕಥೆ, ಹಾಡು ಕೇಳಿದರೂ ನಮಗೆ ಮಾತ್ರ ಅರ್ಥ ಆಗಿದೆ ಅಂತ ಅನಿಸಬೇಕು. ಬಹುತೇಕ ಹುಡುಗರ ಲೈಫ್‌ನಲ್ಲಿ ಪಿಯುಸಿ, ಡಿಗ್ರಿ ಲೆವೆಲ್‌ನಲ್ಲಿ ಒಬ್ಬಳು ಬಂದಿರುತ್ತಾಳೆ. ಆದರೆ ಅವಳನ್ನು ಮರೆತು ಬೇರೆ ಮದುವೆಯಾಗಿರುತ್ತಾರೆ, ಮಕ್ಕಳಾಗಿರುತ್ತಾರೆ. ಹಾಗೆ ಪ್ರೀತಿ ಅಜರಾಮರ ಆಗಿ ಅವಳೇ ಸಿಗಬೇಕು ಅಂತಿದ್ರೆ ಬದುಕು ಈ ರೀತಿ ಇರುತ್ತಿರಲಿಲ್ಲ. ಬಯಸಿದ್ದೆಲ್ಲ ಸಿಗೋದಿಲ್ಲ, ಪ್ರಪಂಚ ಆ ಡಿಸೈನ್‌ನಲ್ಲಿ ಇರೋದಿಲ್ಲ” ಎಂದಿದ್ದಾರೆ ಯೋಗರಾಜ್ ಭಟ್.

‘ಮುಂಗಾರು ಮಳೆ’ ಸಿನಿಮಾಕ್ಕೆ ಮೊದಲು ಚುಮ್ಮ ಎಂದು ಶೀರ್ಷಿಕೆ ಇಡಲಾಗಿತ್ತು, ಆ ನಂತರ ಮಳೆ ಎಂದು ಅಂದುಕೊಳ್ಳಲಾಗಿತ್ತು. ಕೊನೆಗೆ ‘ಮುಂಗಾರು ಮಳೆ’ ಎಂದು ಹೆಸರು ಇಟ್ಟರು. ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಅವರು ಸಾಹಿತ್ಯ ಬರೆದಿದ್ದರು, ವಿ ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದರು. ಸೋನು ನಿಗಮ್ ಹಾಡಿದ ಈ ಸಿನಿಮಾ ಹಾಡುಗಳು ಭಾರೀ ಹಿಟ್ ಆಗಿತ್ತು. ಎಷ್ಟೋ ವರ್ಷಗಳ ಕಾಲ ಜನರ ಮೊಬೈಲ್ ರಿಂಗ್‌ಟೋನ್ ಆಗಿ ‘ಮುಂಗಾರು ಮಳೆ’ ಹಾಡುಗಳು ರಿಂಗಣಿಸಿದವು.



Read more

[wpas_products keywords=”deal of the day party wear dress for women stylish indian”]